ಹೊರಗುತ್ತಿಗೆ ನೌಕರರ ಬಾಕಿ ವೇತನ ಬೀಡುಗಡೆಗೆ ಆಗ್ರಹಿಸಿ ಕಚೇರಿ ಮುಂದೆ ಪ್ರತಿಭಟನೆ

0
39

ಕಲಬುರಗಿ: ಅಲ್ಪಸಂಖ್ಯಾತರ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಹಾಸ್ಟಲ್ “ಡಿ ಗ್ರೂಪ್‌ ಸಿಬ್ಬಂದಿಗಳ ಬಾಕಿ ವೇತನ ಬಿಡುಗಡೆಗೆ ಒತ್ತಾಯಿಸಿ ಭಾರತೀಯ ಯುವ ಸೈನ್ಯದ ನೇತೃತ್ವದಲ್ಲಿ ನೌಕರರು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಚೇರಿ ಮುಂದೆ ಧರಣಿ ನಡೆಸಿದರು.

6೦ಕ್ಕೂ ಹೆಚ್ಚು “ಡಿ” ಗ್ರೂಪ್‌ ಸಿಬ್ಬಂದಿಗಳಿಗೆ ಕಳೆದ 11 ತಿಂಗಳಿಂದ ಯಾವುದೇ ಸ೦ಬಳ ಪಾವತಿ ಮಾಡಿಲ್ಲ. ಸಂಬಳದ ಬಗ್ಗೆ ಟೆಂಡರ್ ಪಡೆದ ಏಜೆನ್ಸಿಗೆ ವಿಚಾರಿಸಿದಾಗ ಇನ್ನೂ ಸ೦ಬಳ ಬಂದಿಲ್ಲ ಎಂದು ಸುಳ್ಳು ಹೇಳುತ್ತಾ ಬಂದಿರುತ್ತಾರೆ. ಅಧಿಕಾರಿಗಳು ಟೆ೦ಡರದಾರರಿಗೆ ನಿಮ್ಮ ಸಂಬಳ ನೀಡಿರುತ್ತೇವೆ ಎಂದು ಹೇಳುವ ಮೂಲಕ ಸಿಬ್ಬಂದಿಗಳನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಪ್ರತಿಭಟನೆ ನೀರತ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.

Contact Your\'s Advertisement; 9902492681

ತಕ್ಷಣ ಟೆಂಡರದಾರ್ ರದ್ದು ಪಡಿಸಿ ಸಿಬ್ಬಂದಿಗಳ ಖಾತೆಗೆ ನೆರವಾಗಿ ಇಲಾಖೆ ಹಣ ಪಾವತಿ ಮಾಡಬೇಕೆಂದು ಒತ್ತಾಯಿಸಿ ವೇತನ ಪಾವತಿಯಲ್ಲಿ ವಿಳಂಬ ತೊರಿದಲ್ಲಿ ಕಚೇರಿ ಮುಂದೆ ಉಗ್ರ ಹೋರಾಟ ನಡೆಸಲಾಗವುದೆಂದು ಸೈನ್ಯದ ಜಿಲ್ಲಾ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಚಿಂಚನಸೂರ್ ಎಚ್ಚರಿಕೆ ನೀಡಿದ್ದಾರೆ.

ಗಣೇಶ ಕಟ್ಟಿಮನಿ, ಅವಿನಾಶ್ ಮುದ್ದೂಡರ, ಪುಂಡಲಿಕ್, ಗಣೇಶ್ ಸುಭಾನಲ್ಲಾಹ, ದಸ್ತೇಗಿರ್, ಹರ್ಷ, ಗೌತಮ್ ಹಸನೂರ, ಶಿವು ದೊಡ್ಡಮನಿ, ಮಲ್ಲಿಕಾರ್ಜುನ್ ಹೇರೂರ್ಕರ್, ಮಂಜುನಾಥ್ ಶಿಲವಂತ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಇದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here