ಪ್ರಾಮಾಣಿಕ ವ್ಯಕ್ತಿಯ ನೆನಪುಗಳೆ ಪ್ರೇರಣೆ

0
179

ಕಲಬುರಗಿ: ದಿ. ಶಿವಶರಣಪ್ಪ ಅಂಡಗಿ ಅವರು ನಮ್ಮ ಮದ್ಯ ಬದುಕಿ 3 ವರ್ಷಗಳ ಹಿಂದೆಯೇ ಯಾವ ರೀತಿಯಾಗಿ ಧಾರ್ಮಿಕ ಮತ್ತು ಸಾಮಾಜಿಕ ಜೀವನ ನಡೆಸಬೇಕೆಂಬ ಅನೇಕ ಆದರ್ಶ ಪಾಠಗಳನ್ನು ಬಿಟ್ಟಿದ್ದಾರೆ 45 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಧಾರ್ಮಿಕ ಸೇವೆ ಈ ಕಾರ್ಯಕ್ರಮಕ್ಕೆ ಜೀವನೀಡಿದೆ ಎಂದು ಟೆಂಗಳಿ ಹಾಗೂ ಮಂಗಲಗಿ ಶಾಂತೇಶ್ವರ ಮಠದ ಪೂಜ್ಯ ಡಾ. ಸೋಮನಾಥ ಶಿವಾಚಾರ್ಯರು ಟೆಂಗಳಿ ನುಡಿದರು.

ಟೆಂಗಳಿ ಗ್ರಾಮದ ಅಂಬಾ ಭವಾನಿ ದೇವಸ್ಥಾನದಲ್ಲಿ ಸೀಗಿ ಹುಣ್ಣಿಮೆ ದಿನದಂದು 45ನೇ ಉಡಿ ತುಂಬುವ ವಾರ್ಷಿಕೋತ್ಸವ ಸಮಾರಂಭ ನಿಮಿತ್ಯ ಉತ್ತಮ ಶಿಕ್ಷಕರಿಗೆ ಸನ್ಮಾನಿಸಿ ಮಾತನಾಡಿದರು.

Contact Your\'s Advertisement; 9902492681

ದಿ. ಶಿವಶರಣಪ್ಪ ಅಂಡಗಿ ಅವರದು ಅಸಾಧಾರಣ ವ್ಯಕ್ತಿತ್ವ ಅವರಲ್ಲಿ ಧಾರ್ಮಿಕ ಸೃದ್ದಾ ಭಕ್ತಿ ಹೊಂದಿದವರು ಟೆಂಗಳಿ ಗ್ರಾಮಕ್ಕೆ ಅವರ ಸಾಮಾಜಿಕ ಸೇವೆ ಅನನ್ಯವಾಗಿದೆ. ನ್ನುತ್ತಾ ಊರಿಗೆ ಸೇತುವೆ, ಶಾಲೆ, ಸ್ವಚ್ಚ ಗ್ರಾಮದ ಯೋಜನೆಯಲ್ಲಿ ಇಡೀ ಗ್ರಾಮವೇ ಸಿಸಿ ರಸ್ತೆ ವಿಶೇಷವಾಗಿ ಗ್ರಾಮ ಪಂಚಾಯತಿ ಬೇರೆ ಜಿಲ್ಲಾ ಪಂಚಾಯತಿಗೆ ವರ್ಗಾವಣೆ ಆದ ಹಿನ್ನೆಲೆಯಲ್ಲಿ ತಮ್ಮ ಮುಂದಾಳತ್ವದಲ್ಲಿ ಮುತುವರ್ಜಿ ವಹಿಸಿ ಮರಳಿ ಟೆಂಗಳಿ ಜಿಲ್ಲಾ ಪಂಚಾಯತ ಕ್ಷೇತ್ರಕ್ಕೆ ಮರಳಿ ತೆಗೆದುಕೊಂಡು ಬಂದಿರುವುದು ಅವರ ರಾಜಕೀಯ ಸೇವೆ ಬಹಳ ಅನನ್ಯ. ನಾವೆಲ್ಲರು ರಾಜಕೀಯ ಕ್ಷೇತ್ರದಿಂದ ಗುತಿಸಿಕೊಂಡಿರುವುದಕ್ಕೆ ಹೆಮ್ಮೆ. ಉತ್ತಮ ಶಿಕ್ಷಕರಿಗೆ ಸನ್ಮಾನಿಸುವ ಮೂಲಕ ಸಾಮಾಜಿಕ ಕಾರ್ಯಚಟುವಟಿಕೆ ನಡೆಸುತ್ತಿರುವುದು ಇನ್ನೊಬ್ಬರಿಗೆ ಮಾದರಿಯಾವಂತಹ ಕಾರ್ಯ ಎಂದು ಗ್ರಾಮದ ಪ್ರಮುಖರಾದ ವೀರಭದ್ರಯ್ಯಾ ಸಾಲಿಮಠ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ದಿ. ಶಿವಶರಣಪ್ಪ ಅಂಡಗಿ ಅವರ ಪತ್ನಿ ಹೂವಮ್ಮ ಅಂಡಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ವಚನೋತ್ಸವ ಪ್ರತಿಷ್ಠಾನ ಯುವ ಘಟಕದ ಅಧ್ಯಕ್ಷ ಶಿವರಾಜ ಅಂಡಗಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ರೇಖಾ ಅಂಡಗಿ ಪ್ರಾರ್ಥಿಸಿದರು ಪ್ರೊ. ಸಿದ್ರಾಮಪ್ಪ ಅಂಡಗಿ ಸ್ವಾಗತಿಸಿದರು, ಓಂಪ್ರಕಾಶ ಹೆಬ್ಬಾಳ ವಂದಿಸಿದರು.

ಟೆಂಗಳಿ ಶಿಕ್ಷಕರು ರಾಜ್ಯ, ಜಿಲ್ಲಾ ಮತ್ತು ತಾಲೂಕು ಉತ್ತಮ ಶಿಕ್ಷಕರೆಂದು ಪ್ರಶಸ್ತಿ ಪಡೆದ ಐದು ಶಿಕ್ಷಕರಾದ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಟೇಂಗಳಿ, ಗಂಗಮ್ಮ ನಾಲವಾರ, ಸರಕಾರಿ ಪ್ರೌಢ ಶಾಲೆ, ಟೇಂಗಳಿ ಶ್ರೀಮತಿ ಸೇವಂತ ಚವ್ಹಾಣ, ಸರಕಾರಿ ಮಾದರಿಯ ಪ್ರಾಥಮಿಕ ಶಾಲೆ, ಟೇಂಗಳಿ, ಸಂಗೀತಾ ಜಾಂತೆ, ಸರಕಾರಿ ಮಾದರಿಯ ಪ್ರಾಥಮಿಕ ಶಾಲೆ ಸಾತನೂರ, ಮಹೇಶ ಪೂಜಾರಿ, ಸರಕಾರಿ ಮಾದರಿಯ ಪ್ರಾಥಮಿಕ ಶಾಲೆ, ಟೇಂಗಳಿ, ಮಲ್ಲಣ್ಣ ಹರಸೂರ, ಜೊತೆಗೆ ಇತ್ತೀಚೆಗೆ ಕಾಳಗಿ ತಾಲೂಕಿನ ಟೆಂಗಳಿ ವಲಯದ ಕನ್ನಡ ಸಾಹಿತ್ಯ ಪರಿಷತ್ತು ವಲಯ ಘಟಕಕ್ಕೆ ಟೆಂಗಳಿ ಗ್ರಾಮದ ಭೀಮಾಶಂಕರ ಅಂಕಲಗಿ ಅವರನ್ನು ನೇಮಕ ಮಾಡಿದ ಹಿನ್ನೆಲೆಯಲ್ಲಿ ಅವರು ಕೂಡಾ ಇದೇ ಸಂದರ್ಭದಲ್ಲಿ ವಚನೋತ್ಸವ ಪ್ರತಿಷ್ಠಾನ ಯುವ ಘಟಕದ ವತಿಯಿಂದ ಸನ್ಮಾನಿಸಿ, ಸದ್ಭಾವನಾ ಪತ್ರ ನೀಡಿ ಗೌರವಿಸಲಾಯಿತು.

ನಂತರ ಕಲಾವಿದರಾದ ಮಡಿವಾಳಯ್ಯ ಸಾಲಿಮಠ, ವಿಶ್ವನಾಥ ಬಾಳದೆ,  ಚಂದ್ರಶೇಖರ ಎಲೇರಿ ಮತ್ತು ಬೀರಣ್ಣ ಪೂಜಾರಿ, ಚಂದ್ರಶೇಖರ ಬಸ್ತೆ, ಶಂಬುಲಿಂಗ ಭೋಗಿ, ರವಿ ಬಾರಿಗಿಡದ, ಅರುಣ ಕುದ್ರಿಕಾರ, ಬಸವರಾಜ ತುಪ್ಪದ, ಬಸಣ್ಣ ಸರಡ, ಚಂದ್ರಶೇಖರ ಬಸ್ತೆ, ನಾಗರಾಜ ಪಟ್ಟೇದ, ಶಿವಯ್ಯಾ ಸ್ವಾಮಿ ಮಠಪತಿ, ದೇವಿಂದ್ರಪ್ಪ ಡೋಣಗಾಂವ, ಮಲ್ಲಿಕಾರ್ಜುನ ಹೊಸಹಳ್ಳಿ, ಶೀಖರ ಮುತ್ತಗಿ, ಚಂದ್ರಶೇಖರ ಕಡ್ಲಿ, ಅನೀಲಕುಮಾರ ತುಪ್ಪದ, ಬಸವರಾಜ ಘಂಟಿ, ಬಸವರಾಜ ಬಾಳ್ದೆ, ಶೇಖಪ್ಪ ಸಾತಖೇಡ, ವಿಶ್ವನಾಥ ಕುದ್ರಿಕಾರ ಹಾಗೂ ಇತರರೊಂದಿಗೆ ರಾತ್ರಿ ಭಜನೆ ಮೂಲಕ ಜಾಗರಣೆ ನಡೆಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here