ತಳವಾರ ಸಮುದಾಯದ ಪೂರ್ವಭಾವಿ ಸಭೆ 16ಕ್ಕೆ

0
235

ಕಲಬುರಗಿ: ಎಸ್.ಟಿ ಮೀಸಲಾತಿ ಪ್ರಮಾಣ 3 ರಿಂದ7ರವರೆಗೆ ಹೆಚ್ಚಿಸಿದ ನಂತರವು ತಳವಾರರಿಗೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ನೀಡುತ್ತಿಲ್ಲ ಆದ್ದರಿಂದ ಮುಂದಿನ ಹೋರಾಟದ ಕುರಿತು 16 ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ಪೂರ್ವ ಭಾವಿ ಸಭೆ ಕರೆಯಲಾಗಿದೆ ಎಂದು ಕರ್ನಾಟಕ ರಾಜ್ಯ ತಳವಾರ ಎಸ್.ಟಿ ಹೋರಾಟ ಸಮಿತಿಯ ರಾಜ್ಯಧ್ಯಕ್ಷರಾದ ಡಾ. ಸರ್ದಾರ ರಾಯಪ್ಪ ಪತ್ರಿಕಾ ಪ್ರಕಟಣೆಯ ಮುಖಾಂತರ ತಿಳಿಸಿದ್ದಾರೆ.

ತಳವಾರರು ಕೂಡ ಜನರೇ, ತಳವಾರರು ಕೂಡ ಈ ದೇಶದ ಪ್ರಜೆಗಳೇ ತಳವಾರ ಬೇಡಿಕೆ ಸಂಕಲ್ಪಗಳನ್ನು ಈಡೇರಿಸದೆ ಮುಖ್ಯಮಂತ್ರಿಗಳು ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಜನಸಂಕಲ್ಪ ಯಾತ್ರೆ ಕೈಗೊಂಡಿದ್ದಾರೆ. ಸಿಂದಗಿ, ಮಸ್ಕಿ, ಬಸವಕಲ್ಯಾಣ ಉಪಚುನಾವಣೆಗಳಲ್ಲಿ ಹಾಗೂ ಕಲ್ಬುರ್ಗಿಯ ಪತ್ರಕರ್ತರ ಸಮ್ಮೇಳನದಲ್ಲಿ 48 ಗಂಟೆಗಳಲ್ಲಿ ತಳವಾರರಿಗೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ನೀಡುತ್ತೇನೆ ಎಂದು ಸಂಕಲ್ಪ ಮಾಡಿದ್ದ ಇನ್ನೂ ಪ್ರಮಾಣ ಪತ್ರ ನೀಡಿಲ್ಲ. ಆದ್ದರಿಂದ ಅದು ಜನ ಸಂಕಲ್ಪ ಯಾತ್ರೆ ಅಲ್ಲ, ನಿಮ್ಮ ಪಕ್ಷದ ಪ್ರಚಾರ ಯಾತ್ರೆವಾಗಿದೆ ಎಂದು ಟೀಕಿಸಿದ್ದಾರೆ.

Contact Your\'s Advertisement; 9902492681

ಜನರ ಸಂಕಲ್ಪ ಈಡೇರಿಸದೆ ಅದು ಹೇಗೆ ನೀವು ಜನ ಸಂಕಲ್ಪ ಯಾತ್ರೆ ಎನ್ನುತ್ತಿರುವಿರಿ? ಬದಲಾಗಿ ಅದು ನಿಮ್ಮ ಸುಳ್ಳಿನ ಸಂಕಲ್ಪ ಯಾತ್ರೆ ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು ಮತ್ತು ಸಚಿವರು, ಸುಳ್ಳಿನ ಸಂಕಲ್ಪ ಯಾತ್ರೆ ಹಾಕಿಕೊಂಡು ಉತ್ತರ ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ.

ಹಿಂದೂಳಿದ ಜಾತಿಗಳ ಪ್ರವಗ೯-1ರ ಪಟ್ಟಿಯಲ್ಲಿ ಇರುವ ತಳವಾರ ತೆಗೆದು ಹಾಕಿ ಸಮಾಜದವರಿಗೆ ಎಸ್.ಟಿ ಜಾತಿ ಪ್ರಮಾಣ ಪತ್ರ ನೀಡುವವರಿಗೆ ನಿರಂತರವಾಗಿ ಹೋರಾಟಗಳು ಮುಂದುವರೆಸಲಾಗುವುದು, ಮುಂದಿನ ಹೋರಾಟದ ಸಿದ್ಧತೆಗಳನ್ನು ಮಾಡಿಕೊಳ್ಳಲು ನಗರದ ಓಜಾ ಲೇಔಟಿನಲ್ಲಿರುವ ಕೋಲಿ ಭವನದಲ್ಲಿ 16 ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ಸಭೆ ಕರೆಯಲಾಗಿದೆ.

ಈ ಸಭೆಗೆ ಸಮಾಜದ ಬುದ್ಧಿಜೀವಿಗಳು, ಹಿರಿಯ ಮುಖಂಡರು, ಯುವ ಮುಖಂಡರು, ನೌಕರರು ಜನಸಾಮಾನ್ಯರೆಲ್ಲರೂ ಪಕ್ಷಬೇಧ ವಿಲ್ಲದೆ ಹಾಜರೆ ಆಗಬೇಕೆಂದು ಡಾ. ಸರ್ದಾರ ರಾಯಪ್ಪ ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here