ಜೆಪಿ ಜಯಂತಿ ಆಚರಣೆ

0
170

ಆಳಂದ: ತಾಲ್ಲೂಕಿನ ಮಾಡ್ಯಾಳ್ ಗ್ರಾಮದಜೆಪಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಸಮಾಜವಾದಿ ನೇತಾರಜಯಪ್ರಕಾಶ್ ನಾರಾಯಣಜಯಂತಿ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು. ಭಾವಚಿತ್ರದ ಪೂಜೆಯನ್ನುಊರಿನಗಣ್ಯರಾದ ಶರಣಬಸಪ್ಪ ಕಲಶೆಟ್ಟಿ ನೆರವೇರಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಸ್ಥಾಪಕರು ಹಾಗೂ ಕಲಬುರ್ಗಿ ನಗರಅಭಿವೃದ್ಧಿ ಪ್ರಾಧಿಕಾರದ ಮಾಜಿಅಧ್ಯಕ್ಷ ಶ್ಯಾಮರಾವ್ ಪ್ಯಾಟಿ ಮಾತನಾಡಿ, ಜೆಪಿ ಅವರು ಸಂಪೂರ್ಣಕ್ರಾಂತಿಯ ಮೂಲಕ ದೇಶದರಾಜಕೀಯಚಿತ್ರಣವನ್ನೇ ಬದಲಾಯಿಸಿದ ಮಹಾನ್ ವ್ಯಕ್ತಿ.ಸ್ವಾತಂತ್ರ ಹೋರಾಟಗಾರರು, ಮಹಾತ್ಮಗಾಂಧೀಜಿಯ ಸಲಹೆಗಾರರು, ಸಮಾಜವಾದದ ಪರಿಕಲ್ಪನೆ ಹೊಂದಿದ್ದಜೆಪಿಯವರು ಆಳುವವರಿಗೆ ಕೇಳುವವರು ಇರುವುದು ಸಂವಿಧಾನದ ಹಕ್ಕು ಎಂದು ಪ್ರತಿಪಾದಿಸುತ್ತಿದ್ದರುಎಂದು ಹೇಳಿದರು.

Contact Your\'s Advertisement; 9902492681

ಜೆಪಿ ಅವರನ್ನು ಬಹಳ ಹತ್ತಿರದಿಂದತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನೋಡಿದ್ದೆ.ನಾನು ಕೂಡ ಸೆರೆಮನೆ ವಾಸ ಅನುಭವಿಸಿದ್ದೇನೆ. ಜೆಪಿಯವರು ವಿದ್ಯಾರ್ಥಿಗಳ ಹಾಗೂ ಯುವಕರ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು.ಅವರಕ್ರಾಂತಿಯಿಂದದೇಶದ ಪ್ರಧಾನ ಮಂತ್ರಿಯಾಗಿದ್ದಇಂದಿರಾಗಾಂಧಿಯವರನ್ನು ಮನೆಗೆ ಕಳುಹಿಸಿ ಮೊರಾರ್ಜಿದೇಸಾಯಿಅವರನ್ನುದೇಶದ ಪ್ರಧಾನಮಂತ್ರಿಯಾಗಿ ಮಾಡಿದಕೀರ್ತಿಜೆಪಿ ಅವರಿಗೆ ಸಲ್ಲುತ್ತದೆಎಂದು ಉಲ್ಲೇಖಿಸಿದರು.

ಮುಖ್ಯ ಅತಿಥಿಗಳಾಗಿ ಶರಣಬಸಪ್ಪಕಲ್ಶೆಟ್ಟಿ, ಸಂತೋಷ್‍ಕುಮಾರ್, ಕಿರಣ್‍ಕುಮಾರ್, ಅರವಿಂದ್ ಮೇತ್ರಿ ಮುಖ್ಯ ಗುರುಗಳಾದ ಆರತಿ ಬೆಳಮಗಿ, ಶರಣಮ್ಮ ನಾಸಿ ಆಗಮಿಸಿದ್ದರು.ಶರಣಬಸಪ್ಪಉಪ್ಪಿನ್ ಸ್ವಾಗತಿಸಿದರು.ರಾಜಶೇಖರ ಬಿರಾದಾರ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here