ಜಿಮ್ಸ್‍ ಆಸ್ಪತ್ರೆಯ ಡಯಾಲಿಸಸ್‍ ಕೇಂದ್ರ ಆಟಕ್ಕುಂಟು ಲೆಕ್ಕಕ್ಕಿಲ್ಲ!

0
45

ಕಲಬುರಗಿ:ಇಲ್ಲಿನಜಿಮ್ಸ್‍ಆಸ್ಪತ್ರೆಯಲ್ಲಿಡಯಾಲಿಸÀಸ್‍ಕೇಂದ್ರದಲ್ಲಿ ಮೂತ್ರಪಿಂಡ ರೋಗಿಗಳ ವಿಭಾಗದಲ್ಲಿವ್ಯವಸ್ಥೆಸರಿಪಡಿಸಿ, ಕಡುಬಡ ರೋಗಿಗಳ ಜೀವ ಉಳಿಸುವ ಕೆಲಸ ಜಿಲ್ಲಾಡಳಿತ ಮುತುವರ್ಜಿವಹಿಸಬೇಕು ಎಂದು ಕಲ್ಯಾಣಕರ್ನಾಟಕ ವಾಣಿಜ್ಯ ಮತ್ತುಕೈಗಾರಿಕಾ ಸಂಸ್ಥೆ (ಕೆಕೆಸಿಸಿಐ) ಗೌರವ ಕಾರ್ಯದರ್ಶಿ ಶರಣಬಸಪ್ಪ ಎಂ. ಪಪ್ಪಾಮನವಿ ಮಾಡಿದರು.

ವೈದ್ಯಕೀಯ ಸೇವೆಗಾಗಿ ಕಲ್ಕತ್ತಾ ಮೂಲದ ಸಂಜೀವಿನಿ ಎಂಬ ಖಾಸಗಿ ಏಜೆನ್ಸಿಗೆ ಹೊರಗುತ್ತಿಗೆಆಧರದಲ್ಲಿ ಈ ಸಂಸ್ಥೆ ಕೆಲPಸ ಮಾಡುತ್ತಿದೆ.ಇಲ್ಲಿ ಸುಮಾರು 80 ರೋಗಿಗಳಿಗೆ ಡಯಾಲಿಸಸ್ ಸೌಲಭ್ಯಪಡೆಯುತ್ತಿದ್ದು, ಸರಿಯಾದ ವ್ಯವಸ್ಥೆಇಲ್ಲಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿದೂರಿದರು.

Contact Your\'s Advertisement; 9902492681

ಡಯಾಲಿಸರ್‍ಟ್ಯೂಬ್ ಕಳಪೆ ಗುಣಮಟ್ಟದ್ದಾಗಿರುವುದರಿಂದ ವಾರಕ್ಕೆಎರಡು ಬಾರಿಡಯಾಲಿಸಸ್‍ಗೊಳಪಟ್ಟರೂ ರೋಗಿಗಳಿಗೆ ಚಿಕಿತ್ಸೆತೃಪ್ತಿಕರವಾಗಿಲ್ಲ. ಹೆಪ್ರಿನ್ ಚುಚ್ಚು ಮದ್ದುಯೋಗ್ಯವಾಗಿಲ್ಲ. 10-ಕೆ ಚುಚ್ಚು ಮದ್ದನ್ನು ವಾರಕ್ಕೊಮ್ಮೆಯಾದರೂ ನೀಡಬೇಕು. ಆದರೆಇಲ್ಲಿಅದರ ಬಗ್ಗೆ ಪ್ರಸ್ತಾಪ ಮಾಡುತ್ತಿಲ್ಲಎಂದುಅವರು ಆಪಾದಿಸಿದರು.

ತಾಂತ್ರಿಕ ಸಿಬ್ಬಂದಿಗೆ ಸಕಾಲಕ್ಕೆ ವೇತನ ಪಾವತಿಆಗದಿರುವುದರಿಂದ ರೋಗಿಗಳ ಆರೋಗ್ಯದಮೇಲೆ ದುಷ್ಪರಿಣಾಮ ಬೀರುತ್ತದೆಎಂದರು. ಪ್ರಮುಖರಾದ ಮಾಲಾಕಣ್ಣಿ, ಮಾಲಾದಣ್ಣೂರ್, ಸಿದ್ದೇಶ ಕೋಡ್ಲಿ, ಬಸವರಾಜ ಮತ್ತಿತರರಿದ್ದರು.

ಈ ಭಾಗದಅಭಿವೃದ್ಧಿಗಾಗಿ 5000 ಕೋಟಿರೂ.ನೀಡಲಾಗಿದೆ ಎಂದು ಸಿಎಂ ಘೋಷಣೆ ಮಾಡಿದ್ದಾರೆ.ಅದರಂತೆ ಮೂಲಸೌಕರ್ಯಗಳನ್ನು ಜನತೆಗೆಒದಗಿಸಬೇಕು.ಅದರಂತೆಆರೋಗ್ಯಕ್ಕೂ ಹೆಚ್ಚಿನ ಗಮನ ಕೊಡಬೇಕು.ಇಲ್ಲಿನಅವ್ಯವಸ್ಥೆ ಬಗ್ಗೆ ಜನಪ್ರತಿನಿದಿಗಳಿಗೆ ತಿಳಿದಿದೆ.ಆದರೆಅವರು ಸಹ ಜಾಣಕುರಡು ಪ್ರದರ್ಶಿಸುತ್ತಿದ್ದಾರೆ.15 ದಿನದೊಳಗೆ ಗುಣಮಟ್ಟದಚಿಕಿತ್ಸೆ ನೀಡದಿದ್ದರೆ ರೋಗಿಗಳ ಕುಟುಂಬದೊಂದಿಗೆಜಿಮ್ಸ್‍ಆಸ್ಪತ್ರೆಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ. ಶರಣಬಸಪ್ಪ ಪಪ್ಪಾ, ಕಾರ್ಯದರ್ಶಿ, ಕೆಕೆಸಿಐ, ಕಲಬುರಗಿ

ಕಳೆದ ಒಂದೂವರೆ ವರ್ಷಗಳಿಂದ ನಮ್ಮತಾಯಿಗೆಎರಡೂ ಮೂತ್ರಪಿಂಡಗಳು ಹಾಳಾಗಿವೆ. ನಿತ್ಯದುಡಿದು ಬದುಕುವ ನಮಗೆ ಮೂತ್ರಪಿಂಡಗಳ ಡಯಾಲಿಸÀಸ್‍ಚಿಕಿತ್ಸೆದುಬಾರಿಖರ್ಚು ಬರುತ್ತಿದೆ.ಜಿಮ್ಸ್‍ಆಸ್ಪತ್ರೆಯಲ್ಲಿಗುಣಮಟ್ಟದಚಿಕಿತ್ಸೆ ನೀಡುತ್ತಿಲ್ಲ, ಸುಮಾರು 30 ಸಾವಿರರೂ.ವರೆಗೆ ಹೊರಗಿನಿಂದಲೇಚುಚ್ಚುಮದ್ದು, ಇನ್ನಿತರ ಔಷಧಿಗಳನ್ನು ತರಲಾಗುತ್ತಿದೆ.ಇಲ್ಲಿ ತಿಂಗಳಿಗೆ ನಾಲ್ಕು ಜೀವ ಹೋಗುತ್ತಿದ್ದೇವೆ. ಆಸ್ಪತ್ರೆಯಅಧಿಕಾರಿಗಳು ರೋಗಿಗಳ ಗೋಳು ಕೇಳುತ್ತಿಲ್ಲ. -ರಾಹುಲ್, ಡಯಾಲಿಸಸ್‍ಗೊಳಗಾದ ಮಹಿಳೆಯ ಪುತ್ರ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here