ಸ್ವಸ್ಥ ಸಮಾಜ ನಿರ್ಮಾಣಕ್ಕೆ ರತ್ನಗಿರಿ ಕರೆ

0
18

ಕಲಬುರಗಿ: ಸ್ತಳಿಯ ಸರ್ಕಾರಿ ಕೈಗಾರಿಕೆ ತರಬೇತಿ ಸಂಸ್ಥೆ (ಪು) ದಲ್ಲಿ ನಹೆರು ಯುವ ಕೇಂದ್ರ ಕಲಬುರಗಿ ಮತ್ತು ನಿಸರ್ಗ ಗ್ರಾಮೀಣಾಭಿವೃದ್ದಿ ಸೇವಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ “ವಿಶ್ವ ಮಾನಸಿಕ ದಿನಚಾರಣೆ” ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಈ ಮೇಲಿನಂತೆ ಹೆಳಿದ ಪ್ರಾಂಶುಪಾಲರಾದ ಮುರಳಿಧರ ರತ್ನಿಗಿರಿ ಇಂದಿನ ಯುವಕರು ಮಾನಸಿಕ ನೆಮ್ಮದಿಯಿಂದ ವಂಚಿತರಾಗಿ ವಿವಿಧ ಸಮಸ್ಯೆಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗುತ್ತಿರುವುದು ಖೆದಕರ ಸಂಗತಿ ಎಂದು ಹೆಳಿ ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಇಂದಿನ ಯುವಕರು ಮುಂದಾಗಲು ತಿಳಿಸಿದರು.

Contact Your\'s Advertisement; 9902492681

ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ ಪತ್ರಕರ್ತರಾದ ಪ್ರಭುಲಿಂಗ ನಿಲೂರೆ ಮಾತನಾಡಿ ಕಾಲೇಜು ಹಂತದಲ್ಲಿ ಇಂಥ ಕಾರ್ಯಕ್ರಮ ಆಯೋಜಿಸಿ ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ಶಿಕ್ಷಣಕ್ಕೆ ಪ್ರೇರಣೆಯಾಗಿದೆ. ವಿದ್ಯಾರ್ಥಿಗಳು ಒಳ್ಳೆಯ ಸದೃಢ ಆರೋಗ್ಯಕ್ಕೆ ಮಾನಸಿಕ ಶಿಕ್ಷಣ ತಿಳುವಳಿಕೆ ನೀಡುತ್ತಿರುವ ನಿಸರ್ಗ ಸಂಸ್ಥೆಯ ಸೇವೆ ಮೆಚ್ಚುವಂತಹದಾಗಿದೆ ಎಂದು ಹೇಳಿದರು.

ಖ್ಯಾತ ಜಾನಪದ ವೈದ್ಯರಾದ ಡಾ. ಖಾಜಾಮಿಯಾ ಯಲಗಾರ ವಿಶೇಷ ಉಪನ್ಯಾಸ ನೀಡಿ ಭಾರತದಲ್ಲಿ ಮಾನಸಿಕ ತೊಂದರೆಗೆ ಹೆಚ್ಚಾಗಿ ಯುವ ಜನತೆ ಮೊಬಾಯಿಲ್ ಚಟಕ್ಕೆ ಬಲಿಯಾಗುತ್ತಿರುವುದು ಮಾನಸಿಕ ನೆಮ್ಮದಿ ಇಲ್ಲದಂತಾಗಿದೆ. ಇದು ಕುಟುಂಬ, ಪರಿಸರ, ಶಿಕ್ಷಣ. ಸಂಸ್ಥೆ, ಸಮಾಜದ ಇತರೆ ಹಂತಗಳಲ್ಲಿ ಕಾಣಬಹುದಾಗಿದೆ ಎಂದು ವಿದ್ಯಾರ್ಥಿಗಳಿಗೆ ಮನ ಮುಟ್ಟುವಂತೆ ತಿಳಿಸಿದರು.

ವೇದಿಕೆಯಲ್ಲಿ ಪ್ರಾಚಾರ್ಯರು ಮುರಳಿಧರ ರತ್ನಗಿರಿ, ಆಡಳಿತ ಅಧಿಕಾರಿ ಸುರೇಶ ವಗ್ಗೆ, ತರಬೇತಿ ಅಧಿಕಾರಿ ಸಿದ್ರಾಮಪ್ಪ, ಕಿರಿಯ ತರಬೇತಿ ಅಧಿಖಾರಿ ಬಿ.ಎಚ್ ಪಾಟೀಲ್ ಪ್ರಾಸ್ತವಿಕವಾಗಿ, ಧರಣಿ ಸಂಸ್ಥೆಯ ಜ್ಯೋತಿ ಪಾಟೀಲ್ ವಕೀಲರಾದ ಚನ್ನಪ್ಪ ಸುರಪೂರಕರ್, ಸಂಸ್ಥೆಯ ಕಾರ್ಯದರ್ಶಿ ಧೂಳಪ್ಪ ದ್ಯಾಮನಕರ ಮಾತನಾಡಿ ಸಂಸ್ಥೆಯು ಗ್ರಾಮೀಣ ನಗರ ಪ್ರದೇಶದ ಯುವ ಜನತೆಗೆ ಶಿಕ್ಷಣ ಆರೋಗ್ಯ ತರಬೇತಿ ಸ್ಲಂ ಮಕ್ಕಳ ಶಿಕ್ಷಣ, ಹೀಗೆ ಹಲವಾರು ಸೇವೆ ಮಾಡುತ್ತಲೇ ಇದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಸಿಬ್ಬಂದಿಗಳು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಲ್ಗೊಂಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here