ಕಲಬುರಗಿ: ಜೈಕನ್ನಡಿಗರ ಸೇನೆಯಿಂದ ನ.1 ರಂದು ಬೆಳಗ್ಗೆ 10.30ಕ್ಕೆ ನಗರದ ಸರ್ದಾರ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿ 67ನೇ ಕನ್ನಡರಾಜ್ಯೋತ್ಸವ ಹಿನ್ನೆಲೆತಾಯಿ ಭುವನೇಶ್ವರಿಗೆ ನಮನ ಕಾರ್ಯಕ್ರಮ ಹಾಗೂ ವಿವಿಧಕ್ಷೇತ್ರದ ಸಾಧಕರಿಗೆ ವಿಶೇಷ ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದುಜೈಕನ್ನಡಿಗರ ಸೇನೆಯ ಸಂಸ್ಥಾಪಕ ದತ್ತು ಬಾಸಗಿ ತಿಳಿಸಿದರು.
ಅಂದುಗಜಲಖೇಡ ನಾಗೇಶ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಕೆಕೆಆರ್‍ಡಿಅಧ್ಯಕ್ಷದತ್ತಾತ್ರೇಯ ಸಿ.ಪಾಟೀಲ್ ರೇವೂರಉದ್ಘಾಟಿಸಲಿದ್ದಾರೆ. ಶಾಸಕ ಬಸವರಾಜ ಮತ್ತಿಮೂಡ್‍ಅವರತಾಯಿ ಭುವನೇಶ್ವರಿಭಾವಚಿತ್ರಕ್ಕೆ ಪೂಜೆ ಸಲ್ಲಿಸಲಿದ್ದಾರೆಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿಧಾನಪರಿಷತ್ ಮಾಜಿ ಸದಸ್ಯಅಲ್ಲಮಪ್ರಭು ಪಾಟೀಲ, ಎಂಎಲ್ಸಿಶÀಶೀಲ ನಮೋಶಿ, ಕಾಂಗ್ರೆಸ್ ಮುಖಂಡ ನೀಲಕಂಠರಾವ್ ಮೂಲಗೆ, ಪಾಲಿಕೆ ಸದಸ್ಯೆ ಲತಾರಾಠೋಡ, ಹೋರಾಟಗಾರ ಲಕ್ಷ್ಮಣ ದಸ್ತಿ, ಬೀದಿ ವ್ಯಾಪಾರಿಗಳ ಸಂಘದಅಧ್ಯಕ್ಷಜಗನ್ನಾಥ ಸೂರ್ಯವಂಶಿ, ಮಾಜಿ ಮೇಯರ್ ಶರಣು ಮೋದಿ, ಬಿಜೆಪಿ ಮುಖಂಡ ಶಿವಕಾಂತ ಮಹಾಜನ, ಜೆಡಿಎಸ್ ಮುಖಂಡಕೃಷ್ಣಾರೆಡ್ಡಿ, ಕಾಂಗ್ರೆಸ್ ಮುಖಂಡ ಸಂತೋಷ ಬಿಲಗುಂದಿ ಸೇರಿದಂತೆಅನೇಕರುಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.
ಕನ್ನಡಅಭಿವೃದ್ಧಿ ಪ್ರಾದಿಕಾರದಮಾಜಿಸದಸ್ಯ ಸುರೇಶ ಬಡಿಗೇರ ಮುಖ್ಯ ಭಾಷಣ ಮಾಡಲಿದ್ದಾರೆಎಂದರು.ಪ್ರಮುಖರಾದಜಗನ್ನಾಥ ಸೂರ್ಯವಂಶಿ, ಹುಸೇನ್, ಮಲ್ಲಿಕಾರ್ಜುನ, ಶರಣುಇತರರುಇದ್ದರು.