ಗೋವತ್ಸ ದ್ವಾದಶಿ ಪ್ರಯುಕ್ತ – ಗೋಪೂಜೆ ಕಾರ್ಯಕ್ರಮ

0
71

ಕಲಬುರಗಿ: ಗೋವುಗಳನ್ನು ಬರೀ ಪೂಜೆಗೆ ಸೀಮಿತಗೊಳಿಸದೇ ಪ್ರತಿಯೊಬ್ಬರು ಪ್ರತಿನಿತ್ಯ ಬೆಳಿಗ್ಗೆ ಮತ್ತು ರಾತ್ರಿಹೊತ್ತು ದಿನಕ್ಕೆ 2 ಬಾರಿ ಗೋವಿನ ಹಾಲು ಕುಡಿಯುವ ಅಭ್ಯಾಸ ಹಾಕಿಕೊಂಡು ಹಾಲು ಕುಡಿಯುವ ಮೂಲಕ ಗೋವಿನ ಸಂತತಿಗೆ ಪ್ರೋತ್ಸಾಹಿಸಬೇಕು. ಗೋವು ಪೂಜೆಯ ಜೊತೆ ಉತ್ಪನ್ನ ಬಳಸಿ ಹೆಚ್ಚಿಸಬೇಕೆಂದು ವಚನೋತ್ಸವ ಪ್ರತಿಷ್ಠಾನದ ಯುವ ಘಟಕದ ಅಧ್ಯಕ್ಷರಾದ ಶಿವರಾಜ ಅಂಡಗಿಯವರು ಕಳವಳ ವ್ಯಕ್ತಪಡಿಸಿದ್ದರು.

ಚಿತ್ತಾಪೂರ ತಾಲೂಕಿನ ಮರಗೂಳ ಗ್ರಾಮದಲ್ಲಿ ಪ್ರಗತಿಪರ ರೈತರಾದ ಮಲ್ಲಣ್ಣ ಯರಗೋಳ ಅವರ ನೂತನವಾಗಿ ಕಟ್ಟಿಸಿದ ಗೃಹ ಪ್ರವೇಶ ಅಂಗವಾಗಿ ಗೋ ವತ್ಸ ದ್ವಾದಶಿ ಪ್ರಯುಕ್ತ – ಗೋ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಗೋವಿಗೆ ಪೂಜೆ ಸಲ್ಲಿಸಿ ಮಾತನಾಡುತ್ತಾ ಗೋವುಗಳಿಗೆ ಸ್ನಾನ ಮಾಡಿಸಿ ದೇವಸ್ಥಾನಗಳಿಗೆ ಕರೆತಂದು ಕುಂಕುಮ ಅರಿಶಿಣದಿಂದ ಪೂಜೆ ಮಾಡಿ ಹೂಗಳಿಂದ ಅಲಂಕರಿಸಿ ಅಕ್ಕಿ, ಬೆಲ್ಲ, ಮತ್ತು ಹಣ್ಣುಗಳನ್ನು ತಿನಿಸಿ ಗೌರವಿಸುವುದು ತಪ್ಪಲ್ಲ. ಗೋಮಾತೆಯನ್ನು ಗೌರವಿಸುವುದು ಮತ್ತು ಪೂಜಿಸುವುದು ನಮ್ಮ ನೆಲದ ಸಂಸ್ಕøತಿ ಹಾಗೆಂದು ಪೂಜೆಗೆ ಸೀಮಿತಗೊಳಿಸದೇ ಅದರ ಉತ್ಪನ್ನಗಳಾದ ಹಾಲು, ತುಪ್ಪ ಹಾಗೂ ಮೊಸರು ಹೆಚ್ಚು ಹೆಚ್ಚು ಬಳಸಿದರೇ ಅದರ ಸಂಸ್ಕøತಿ ಹೆಚ್ಚಾಗುತ್ತದೆ ಎಂದು ನೆರೆದಿದ್ದ ಜನರಿಗೆ ಕರೆಕೊಟ್ಟರು.

Contact Your\'s Advertisement; 9902492681

ಜಿಲ್ಲಾ ಪಂಚಾಯತನ ಮಾಜಿ ಅಧ್ಯಕ್ಷರಾದ ರಮೇಶ ಮರಗೂಳ, ನಾಗಣ್ಣಗೌಡ ಮಾಲಿ ಪಾಟೀಲ, ಶರಣಪ್ಪ ಯರಗೋಳ ಇವರುಗಳು ಆಕಳ ಹಾಲಿನ ಉಪಯೋಗ ಮತ್ತು ಅದರ ಮಹತ್ವದ ಬಗ್ಗೆ ತಮ್ಮ ತಮ್ಮ ಅನುಭವಗಳು ಹಂಚಿಕೊಂಡರು.

ಇದೇ ಸಂದರ್ಭದಲ್ಲಿ ನ್ಯಾಯವಾದಿ ವಿನೋದಕುಮಾರ ಜನೆವರಿ ಅವರು ಮಾತನಾಡುತ್ತಾ ಇತ್ತೀಚೆಗೆ ರಾಜ್ಯದ ಮುಜರಾಯಿ ಇಲಾಖೆಯ ಒಳಪಡುವ ಎಲ್ಲಾ ದೇವಸ್ಥಾನಗಳಲ್ಲಿ ಗೋಪೂಜೆ ಮಾಡಲು ಆದೇಶ ಹೊರಡಿಸಿದ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತಾ ಅರ್ಥಪೂರ್ಣ ಆದೇಶ ಎಂದು ಹರ್ಷ ವ್ಯಕ್ತಪಡಿಸಿದರು.

ನಂತರ ಆಕಾಶವಾಣಿ ಮತ್ತು ದೂರದರ್ಶನ ಕಲಾವಿದರು ಹಾಗೂ ಗವಾಯಿಗಳಾದ ಶಾಂತು ಪಾಟೀಲ ಬೆಣ್ಣೂರ, ಮಲ್ಲಿಕಾರ್ಜುನ ಗೋಳಾ (ಕೆ), ಹುಣಚಿರಾಯ ಮುತ್ಯಾ ಮರತೂರ, ನಾಗರಾಜ ಪಾಟೀಲ ಶಹಾಬಾದ, ನಿಂಗಣ್ಣ ಬಾಗೊಂಡಿ ಶಹಾಬಾದ, ಕಾಳಪ್ಪ, ಮರಗೋಳ ಗ್ರಾಮದ ಮಾರುತೇಶ್ವರ ಭಜನಾ ಮಂಡಳಿ ಹಿರಿಯರಾದ ರಾಣಪ್ಪ ಮುಗಟೆ ಇವರಿಂದ ವಿಶೇಷ ಸಂಗೀತೋತ್ಸವವ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದಲ್ಲಿ ಶಿವಶರಣಪ್ಪ ಬಿರಾದಾರ, ಶರಣಪ್ರಸಾದ ಜನೇವರಿ, ಶರಣಪ್ಪ ಬಿರಾದಾರ, ವಿಜಯಕುಮಾರ ಹುಡುಗಿ, ಶಿವಕುಮಾರ ಪಾಟೀಲ, ಶರಣಪ್ಪ ಪಡಶೆಟ್ಟಿ, ಸೋಮೇಶ ಯರಗೋಳ, ರೇವಣಸಿದ್ದ ಬಿರಾದಾರ, ಜಗು, ವಿರೇಶ, ಅನೀಲಕುಮಾರ, ವೀರಣ್ಣಗೌಡ, ಬಸವರಾಜ, ಅಂಬರೀಷ, ಶರಣು, ವೀರಭದ್ರ, ನಿತಿನ್ ಕೋರಿ, ಮಲ್ಲಿಕಾರ್ಜುನ ಬೋಲಕ್, ಶಾಂತಕುಮಾರ, ಪೃಥ್ವಿರಾಜ, ಸಿದ್ದಾರ್ಥ, ಸಚಿನ್, ಮುನಿಯಪ್ಪ, ಪಿಂಟೂ, ರೇಖಾ ಅಂಡಗಿ ಗುಣವಂತಿ ಬಿರಾದಾರ, ಶರಣಮ್ಮ, ಸುಜ್ಜಮ್ಮ, ಗೌರಮ್ಮ, ಶೇಖಮ್ಮ ನಾಗಮ್ಮ ಹಾಗೂ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here