ಕಲಬುರಗಿ: ಕರ್ನಾಟಕ ರಾಜ್ಯ ದ್ವಿದಳ ಮತ್ತು ಬೇಳೆ ಕಾಳು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ವಿದ್ಯಾಸಾಗರ ಶಾಬಾದಿಯವರು ಇಂದು ಅಧಿಕಾರ ಸ್ವೀಕರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೀಮಾ ಪಲ್ಸ್ ಬ್ರಾಂಡಿಂಗ್‍ಗೆ ಕಾಯಕಲ್ಪ ಯೋಜನೆ ಸಿದ್ಧಪಡಿಸಲಾಗುವುದು. ಇದರಿಂದಾಗಿ ರೈತರಿಗೆ ಹಾಗೂ ಗ್ರಾಹಕರಿಗೆ ಅನುಕೂಲವಾಗುವುದು. ಇದು ನನ್ನ ಮೊದಲ ಆದ್ಯತೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ್ ಮಾತನಾಡಿ, ನೂತನ ಅಧ್ಯಕ್ಷ ಶಾಬಾದಿ ನೇತೃತ್ವದಲ್ಲಿ ನಿಯೋಗದ ಮೂಲಕ ಸಿಎಂ ಬಳಿ ತೆರಳಿ ಮಂಡಳಿಯನ್ನು ವಿಶ್ವದರ್ಜೆಗೆ ಏರಿಸುವ ನಿಟ್ಟಿನಲ್ಲಿ 100 ಕೋಟಿ ರೂ. ಅನುದಾನ ಪಡೆದು ಕಾಫಿ ಮಂಡಳಿ, ಅಡಿಕೆ ಮಂಡಳಿಗಳಂತೆ ದ್ವಿದಳ ಮತ್ತು ಬೇಳೆ ಕಾಳು ಅಭಿವೃದ್ಧಿ ಮಂಡಳಿ ಬಲಿಷ್ಠಗೊಳಿಸಲು ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ತೊಗರಿ ಮಂಡಳಿಯ ಪುನಶ್ಚೇತನಕ್ಕಾಗಿ ಮಂಡಳಿಯಿಂದ ಪ್ರಸ್ತಾವನೆ ಬಂದರೆ ಡಿಸಿ ಬ್ಯಾಂಕ್‍ನಿಂದ ಸಾಲ ಸೌಲಭ್ಯ ಸಹ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು. ಶಾಸಕರಾದ ಬಸವರಜ ಮತ್ತಿಮಡು, ಶಶೀಲ್ ಜಿ. ನಮೋಶಿ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಇತರರಿದ್ದರು.