ಸರ್ವರು ಕನ್ನಡ ನುಡಿಯುವ ಮೂಲಕ ಕನ್ನಡಾಂಬೆಗೆ ನಮನ ಸಲ್ಲಿಸಿ: ಅಂಜಲಿ ಕಂಬಾನೂರ

0
51

ಶಹಾಬಾದ: ಪ್ರತಿಯೊಬ್ಬ ಕನ್ನಡಿಗರು ಕನ್ನಡ ನುಡಿಯುವ ಮೂಲಕ ನಿತ್ಯ ಕನ್ನಡಾಂಬೆಗೆ ನುಡಿ ನಮನ ಸಲ್ಲಿಸುವಂತಾಗಬೇಕು, ಆಗ ಎಲ್ಲರ ಬಾಯಲ್ಲೂ ಕನ್ನಡ ಹರಿದಾಡುತ್ತದೆ ಎಂದು ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ ಹೇಳಿದರು.

ಅವರು ಶುಕ್ರವಾರ ನಗರದ ಮಿನಿ ರೋಜ್ ಶಾಲೆ ಸಹಯೋಗದಲ್ಲಿ 67 ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕೋಟಿ ಕಂಠ ಗಾಯನಕ್ಕೆ ಚಾಲನೆ ನೀಡಿ ಮಾತನಾಡಿದರು.

Contact Your\'s Advertisement; 9902492681

ಕನ್ನಡ ಕೇವಲ ನವೆಂಬರ ತಿಂಗಳಿಗೆ ಮಾತ್ರ ಸಿಮೀತವಾಗಿರದೇ, ಕನ್ನಡಿಗರಾದ ನಮ್ಮ ಮನೆ, ಮನಗಳಲ್ಲಿ ನಿತ್ಯ ನೂತನ ಕನ್ನಡವಾಗಿರಬೇಕು.ಅಲ್ಲದೇ ಇತರರೊಂದಿಗೆ ಬೇರೆ ಭಾμÉಯಲ್ಲಿ ವ್ಯವಹರಿಸದೆ ನಮ್ಮ ಕನ್ನಡದಲ್ಲಿಯೆ ವ್ಯವಹಾರ ಮಾಡಿದಾಗ ಕನ್ನಡ ಉಳಿಯುತ್ತದೆ ಮತ್ತು ಬೆಳೆಯುತ್ತದೆ. ಭಾμÉ ತಾಯಿ ಸಮಾನ. ಭಾμÉ ಮರೆತರೆ ತಾಯಿಯನ್ನೆ ಮರೆತಂತೆ. ಸರಕಾರದ ಯಾವುದೇ ಇಲಾಖೆಯಾಗಲಿ ಅಲ್ಲಿ ಕನ್ನಡದಲ್ಲಿಯೆ ವ್ಯವಹರಿಸುವಂತಾಗಬೇಕು. ನಮ್ಮ ಭಾμÉ ಶ್ರೀಮಂತ ಹಾಗೂ ಪುರಾತನ ಭಾμÉಯಾಗಿದೆ. ಅದನ್ನು ಉಳಿಸಿ ಮುಂದಿನ ಪೀಳಿಗೆಗೆ ಬಳುವಳಿಯಾಗಿ ನಿಡೋಣ ಎಂದರು.

ನಂತರ ಎಲ್ಲಾ ವಿದ್ಯಾರ್ಥಿಗಳಿಂದ, ನಾಡಗೀತೆಯಾದ ಜಯಭಾರತ ಜನನಿಯ ತನುಜಾತೆ, ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಬಾರಿಸು ಕನ್ನಡ ಡಿಂ ಡಿಂ ಮವ, ಹಚ್ಚೆವು ಕನ್ನಡದ ದೀಪ,ವಿಶ್ವ ವಿನೂತ ವಿದ್ಯಾ ಚೇತನ, ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು ಸೇರಿ ಒಟ್ಟು 6 ಹಾಡು ಸಾಮೂಹಿಕವಾಗಿ ಹಾಡಲಾಯಿತು.ನಂತರ ಸಂಕಲ್ಪ ಪ್ರಮಾಣ ವಚನವನ್ನು ಬೋಧಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶಾಲೆಯ ಅಧ್ಯಕ್ಷ ಮೊಹಮ್ಮದ್ ಶಬ್ಬೀರ್ ಅಹ್ಮದ್, ಪರಶುರಾಮ ಮುತ್ತಗಿಕರ್ ಬೋಧಕ-ಬೋಧಕೇತರ ಸಿಬ್ಬಂದಿಯವರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸರಕಾರಿ ಪ್ರೌಢಶಾಲೆ ಭಂಕೂರ: ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಡಿವಾಯ್‍ಪಿಸಿ ಚಂದ್ರಶೇಖರ ಪಾಟೀಲ, ಶಿಕ್ಷಣಾಧಿಕಾರಿ ಶಿವಗುಂಡಪ್ಪ ಕಣ್ಣಿ ಅವರ ಸಮ್ಮುಖದಲ್ಲಿ ಕೋಟಿ ಕಂಠ ಗಾಯನ ಹಾಡಲಾಯಿತು. ಮುಖ್ಯಗುರು ಶಂಕರ ಜಾಧವ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಈರಣ್ಣ ಕೆಂಬಾವಿ, ದತ್ತಪ್ಪ ಕೋಟನೂರ್,ಶಾಂತಮಲ್ಲಶಿವಭೋ, ವಿಷ್ಣುತೀರ್ಥ ಆಲೂರ, ಎನ್.ಡಿ.ಜಕಾತೆ, ಅನೀಲಕುಮಾರ, ಸೀತಮ್ಮ.ಎನ್,ಶಶಿಕಲಾ ಕೊಕಟನೂರ್ ಇತರರು ಇದ್ದರು.

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗೋಳಾ(ಕೆ): ಸಿಆರ್‍ಪಿ ಶರಣಗೌಡ ಪಾಟೀಲ ಸಮ್ಮುಖದಲ್ಲಿ ಕೋಟಿ ಕಂಠ ಗಾಯನ ಹಾಡಲಾಯಿತು.ಈ ಸಂದರ್ಭದಲ್ಲಿ ಮುಖ್ಯಗುರುಮಾತೆ ಹೇಮಾಬಾಯಿ,ಶಿಕ್ಷಕರಾದ ಬನ್ನಪ್ಪ ಸೈದಾಪೂರ,ಅಶ್ವಿನಿ ನೀಲಗಾರ, ಸುಮಿತ್ರಬಾಯಿ, ಕಮಲಾ,ಶರಣಮ್ಮ.ರಮಾಎಸ್.ಪಿ ಇತರರು ಇದ್ದರು.

ಎಸ್.ಜಿ.ವರ್ಮಾ ಹಿಂದಿ ಶಾಲೆ : ಎಲ್ಲಾ ಪ್ರಕಲ್ಪಗಳ ಮುಖ್ಯಸ್ಥರು, ಶಿಕ್ಷಕರು, ಉಪನ್ಯಾಸಕರು, ಸಿಬ್ಬಂದಿ ವರ್ಗ ಹಾಗೂ ಮಕ್ಕಳ ಸಮ್ಮುಖದಲ್ಲಿ ಕೋಟಿ ಕಂಠ ಗಾಯನ ಹಾಡಲಾಯಿತು.ಸಂಕಲ್ಪ ಪ್ರಮಾಣ ವಚನವನ್ನು ಬೋಧಿಸಲಾಯಿತು.

ಗಂಗಮ್ಮ ಶಾಲೆ: ಗಂಗಮ್ಮ ಶಾಲೆ ಹಾಗೂ ಕಂದಾಯ ಇಲಾಖೆಯ ವತಿಯಿಂದ ನಡೆಸಲಾಯಿತು.ಈ ಸಂದರ್ಭದಲ್ಲಿ ಶಿರಸ್ತೆದಾರ ರವಿಕುಮಾರ,ಸಯ್ಯದ್ ಹಾಜಿ, ಕಂದಾಯ ಅಧಿಕಾರಿ ಹಣಮಂತರಾವ ಪಾಟೀಲ,ಮುನೀರ,ರುದ್ರಮುನಿ, ರೇವಣಸಿದ್ದಪ್ಪ ಪಾಟೀಲ,ಶಿವಾನಂದ ಹೂಗಾರ,ಶ್ರೀನಿವಾಸ, ಶಾಲೆಯ ಮುಖ್ಯಸ್ಥರು ಹಾಗೂ ಶಿಕ್ಷಕರು, ಮಕ್ಕಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here