ತಳವಾರಗೆ ಪರಿಶಿಷ್ಟ ಪಂಗಡ ಮೀಸಲಾತಿ | ನುಡಿದಂತೆ ನಡೆದ ಸರ್ಕಾರ; ಶಾಸಕ ತೇಲ್ಕೂರ

0
18

ಕಲಬುರಗಿ: ತಳವಾರ ಮತ್ತು ಪರಿವಾರ ನಾಯಕ ಜಾತಿಗಳನ್ನು ರಾಜ್ಯದ ಹಿಂದುಳಿದ ವರ್ಗಗಳ ಮೀಸಲಾತಿ ಜಾತಿ ಪಟ್ಟಿಯಿಂದ ಕೈ ಬಿಟ್ಟು ಪರಿಶಿಷ್ಟ ಪಂಗಡದ ಮೀಸಲಾತಿ ಪಟ್ಟಿಗೆ ಸೇರ್ಪಡೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿರುವುದು ಐತಿಹಾಸಿಕ ಹಾಗೂ ಹಲವು ದಶಕಗಳ ಬೇಡಿಕೆ ಸಾಕಾರಗೊಂಡಂತಾಗಿದೆ ಎಂದು ಬಿಜೆಪಿ ರಾಜ್ಯವಕ್ತಾರರು  ವಿಭಾಗೀಯ ಪ್ರಭಾರಿ ಆಗಿರುವ ಸೇಡಂ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ತಿಳಿಸಿದ್ದಾರೆ.

ಚುನಾವಣಾ ಸಂದರ್ಭದಲ್ಲಿ ತಳವಾರ ಹಾಗೂ ಹಾಗೂ ಪರಿವಾರ ನಾಯಕ ಜಾತಿಗಳನ್ನು ಪರಿಶಿಷ್ಟ ಪಂಗಡದ ವರ್ಗಕ್ಕೆ ಸೇರಿಸಲಾಗುವುದು ಎಂದು ಭರವಸೆ ನೀಡಲಾಗಿತ್ತು. ಈಗ ನೀಡಲಾಗಿರುವ ಭರವಸೆ ಸಾಕಾರಗೊಳಿಸುವ ಮುಖಾಂತರ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ ಎಂಬುದನ್ನು ನಿರೂಪಿಸಲಾಗಿದೆ ಎಂದು ತಿಳಿಸಿದ್ದಾರೆ.

Contact Your\'s Advertisement; 9902492681

ತಳವಾರ ಹಾಗೂ ಪರಿಹಾರ ನಾಯಕ ಜಾತಿಗಳ ನ್ನು ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಬೇಕೆಂದು ಜನಾಂಗದವರು ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here