ರಾಷ್ಟ್ರಕೂಟರ ಉತ್ಸವ ಆಚರಣೆಗೆ ಸರ್ಕಾರ ಮುಂದಾಗಲಿ

0
10

ಕಲಬುರಗಿ: ಕಿತ್ತೂರ, ಬನವಾಸಿ, ಹಂಪಿ ಉತ್ಸವ ಮಾದರಿಯಲ್ಲಿ ಕಲಬುರಗಿ ಭಾಗದಲ್ಲಿ  ಪ್ರತಿವರ್ಷ ರಾಷ್ಟ್ರಕೂಟರ ಉತ್ಸವ ಆಚರಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಕಲ್ಯಾಣ ಕರ್ನಾಟಕದ ಸಾಂಸ್ಕøತಿಕ ಸಮ್ಮೇಳನದ ಅಧ್ಯಕ್ಷ ಸಿದ್ದಲಿಂಗಯ್ಯ ಸ್ವಾಮಿ ಕೊಡಗಿಮಠ ಹೇಳಿದರು.

ನಗರದ ಕನ್ನಡ ಭವನದಲ್ಲಿ ಭಾನುವಾರ ಹೈದರಾಬಾದ ಕರ್ನಾಟಕ ನಾಗರಿಕರ ವೇದಿಕೆ, ಬೆಂಗಳೂರಿನ ಬೆಳಕು ಸಾಹಿತ್ಯ ಸಾಂಸ್ಕøತಿಕ ಟ್ರಸ್ಟ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ ಕಲ್ಯಾಣ ಕರ್ನಾಟಕದ ಸಾಂಸ್ಕøತಿಕ ಸಮ್ಮೇಳನ, ರಾಜ್ಯ ಮಟ್ಟದ ಅಮೋಘವರ್ಷ ನೃಪತುಂಗ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು. ಹಿಂದಿನ ಸರ್ಕಾರವು ಸ್ಥಳೀಯರ ಒತ್ತಡಕ್ಕೆ ಮಣಿದು ಒಮ್ಮೆ ರಾಷ್ಟ್ರಕೂಟರ ಉತ್ಸವ ಆಯೋಜಿಸಿತು. ಈಗ ನಿರಂತರವಾಗಿ ಉತ್ಸವ ಆಚರಿಸಿಕೊಂಡು ಈ ಭಾಗದ ಕಲೆ, ಸಾಹಿತ್ಯ, ಸಂಸ್ಕøತಿ, ಇತಿಹಾಸ ಮೇಲೆ ಬೆಳಕು ಚೆಲ್ಲುವಂತಾಗಬೇಕು ಎಂದರು.

Contact Your\'s Advertisement; 9902492681

ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ.ಸತೀಶಕುಮಾರ ಹೊಸಮನಿ, ಮನೂರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಸಂಸ್ಥಾಪಕ ನಿರ್ದೇಶಕ ಡಾ.ಫಾರುಖ್ ಅಹ್ಮದ್ ಮನೂರ ಸಮ್ಮೇಳನ ಉದ್ಘಾಟಿಸಿದರು. ಪತ್ರಕರ್ತ ಮಹಿಪಾಲರಡ್ಡಿ ಮುನ್ನೂರ್ ನಿರ್ಗಮನದ ಹಾದಿಯಲ್ಲಿ ಟೀಸರ ಬಿಡುಗಡೆಗೊಳಿಸಿದರು. ಟ್ರಸ್ಟ್ ಅಧ್ಯಕ್ಷ ಕೆ. ವೀರೇಶ, ಸಾಂಸ್ಕøತಿಕ ಸಂಭ್ರಮದ ಅಧ್ಯಕ್ಷೆ ಪಾರ್ವತಿದೇವಿ ಹೊಂಬಾಳ, ಸಂಚಾಲಕ ಮಹೇಶ ಸುರ್ವೆ, ಮರಾಠ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಜಿ.ಮೂಳೆ, ಮಾನ್ವಿ ತಹಸೀಲ್ದಾರ ಅಬ್ದುಲ್ ವಾಜೀದ್, ಸಮಾಜ ಸೇವಕಿ ದೀಪಾಲಿ ಲಿಂಗರಾಜ್‍ಅಪ್ಪಾ, ಚಲನಚಿತ್ರ ನಿರ್ದೇಶಕ ಪಾಂಡವಪುರ ಮಂಜುನಾಥ, ಜಿ. ಎಸ್. ಮಾಲಿ ಪಾಟೀಲ್, ಸೇರಿ ಅನೇಕ ಗಣ್ಯರು ವೇದಿಕೆ ಮೇಲಿದ್ದರು.

ಅಮೋಘ ವರ್ಷ ನೃಪತುಂಗ ಪ್ರಶಸ್ತಿಗೆ ಭಾಜನರಾದವರು: ಡಾ. ಸತೀಶಕುಮಾರ ಹೊಸಮನಿ (ಡಿಜಿಟಲ್ ಗ್ರಂಥಾಲಯ), ಅಕ್ರಂಪಾಷಾ ಮೋಮಿನ್ (ಪತ್ರಿಕೋದ್ಯಮ), ಡಾ.ಲಕ್ಷ್ಮೀಕಾಂತ ಮೇತ್ರಿ, (ವೈದ್ಯಕೀಯ ಸೇವೆ), ಡಾ.ಕೃಷ್ಣಪ್ಪಗೌಡ (ತಾರಸಿ ಕೃಷಿ), ಆನಂದ ಬಡಿಗೇರ (ಶಿಲ್ಪಿ), ಮಾರುತಿ ಭಂಡಾರಿ (ಧಾರ್ಮಿಕ), ಮಲ್ಲಿಕಾರ್ಜುನಗೌಡ (ಸಮಾಜ ಸೇವೆ), ಮಲ್ಲಿಕಾರ್ಜುನ ಗಿರಿ (ಆಡಳಿತ), ಶೇಖರ ತೆಗ್ಗಿ (ರಂಗಭೂಮಿ), ಚನ್ನಬಸವಯ್ಯ ಜಿ.ಟಿ. (ಆಡಳಿತ), ರಾಜಕುಮಾರ ಹಿರೇಮಠ (ತಬಲಾ ವಾದನ), ಅಶ್ವಿನಿ ರಾಜಕುಮಾರ (ಗಾಯನ), ಡಾ. ರೇಣುಕಾ ಹಾಗರಗುಂಡಗಿ (ಸುಗಮ ಸಂಗೀತ), ಬಸಯ್ಯ ಚಿದ್ರಿಮಠ (ಸಮಾಜ ಸೇವೆ), ಭೀಮಾಶಂಕರ ಫಿರೋಜಾಬಾದ (ಪತ್ರಿಕಾ ಮಾಧ್ಯಮ), ಅನ್ನಪೂರ್ಣ ಮನ್ನಾಪುರ (ಸುಗಮ ಸಂಗೀತ), ಗುರಪ್ಪ ಪಾಟೀಲ್ (ರಂಗಕರ್ಮಿ), ನಾಗರಾಜ್ (ನೃತ್ಯ), ಸಂಗಣ್ಣ ಅಲ್ದಿ (ರಂಗಭೂಮಿ ನಟ), ಸುವರ್ಣಾ ಸಿಂದಗಿ (ಗಾಯನ), ಗುರುರಾಜ್ ಪವಾರ (ನೃತ್ಯ), ಚಂದ್ರಯ್ಯ ಸ್ವಾಮಿ (ಸಮಾಜಸೇವೆ), ರಸಿಕಾ ಕುಲಕರ್ಣಿ (ಶಿಕ್ಷಣ), ಯಶವಂತರಾಯ ಕೋಲಾರ (ಪ್ರಗತಿಪರ ರೈತ), ಶಿವಾನಂದ ಮೈತ್ರಿ (ತಹಸೀಲ್-ಆಡಳಿತ), ರಾಜೇಶ್ವರಿ ಬಿರಾದಾರ್ (ಆಡಳಿತ), ಸಂತೋಷ ವನದುರ್ಗ (ಸಂಘಟನೆ), ಅನಂತ ಕುಲಕರ್ಣಿ (ಶಿಕ್ಷಣ), ಉಜ್ವಲ ಡಾಕುಲಗಿ (ಶಿಕ್ಷಣ), ಡಾ. ದಿಲೀಪಕುಮಾರ ಡೊಂಗರ್ಗೆ (ವೈದ್ಯಕೀಯ) ಅವರಿಗೆ ರಾಜ್ಯಮಟ್ಟದ ಅಮೋಘ ವರ್ಷ ನೃಪತುಂಗ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಂತರ ಸಾಂಸ್ಕøತಿಕ ಕಾರ್ಯಕ್ರಮ ಜರುಗಿದವು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here