ವಿವಿಧ ಕ್ಷೇತ್ರದ ಸಾಧಕರಿಗೆ ಕಸಾಪದಿಂದ ‘ರಾಜ್ಯೋತ್ಸವ’ ಪ್ರಶಸ್ತಿ ಪ್ರದಾನ ನಾಳೆ

0
1189

ಕಲಬುರಗಿ: ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಲವು ಸಾಧಕರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮೊದಲ ಬಾರಿಗೆ `ರಾಜ್ಯೋತ್ಸವ’ ಗೌರವ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.

ಬುಧವಾರ ಬೆಳಗ್ಗೆ 11.30 ಕ್ಕೆ ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ನಾಡೋಜ ಡಾ.ಜೆ.ಎಸ್.ಖಂಡೇರಾವ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದು, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವುರ ಅಧ್ಯಕ್ಷತೆ ವಹಿಸಲಿದ್ದಾರೆ. ಮಹಾನಗರ ಪಾಲಿಕೆ ಆಯುಕ್ತ ಪಾಟೀಲ ಭುವನೇಶ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನದ ಬಸವರಾಜ ಕೋನೆಕ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

Contact Your\'s Advertisement; 9902492681

ಪ್ರಶಸ್ತಿಗೆ ಆಯ್ಕೆಗೊಂಡ ಸಾಧಕರು: ಡಾ.ಎಸ್.ಹೆಚ್.ದೇಶಪಾಂಡೆ, ರೇವಣಸಿದ್ದಪ್ಪ ಮಾಸ್ತರ್ ಚಿಂಚೊಳಿ, ಡಾ.ಗುಂಡಣ್ಣಾ ಬಾಳಿ, ಸೋಮಶೇಖರ ಮಠ, ಜಗನ್ನಾಥ ಹಲಂಗಿ, ಅಶೋಕ ಸಾಹು ಗೋಗಿ, ಮಹಾಲಿಂಗಪ್ಪ ಇಂಗಿನಶೆಟ್ಟಿ, ಹಣಮಂತಪ್ಪ ಬೆಳಗುಂಪಿ, ಡಾ. ಸಿ.ಎಸ್.ರಗಟೆ, ಅನೀತಾ ಪವನಕುಮಾರ ವಳಕೇರಿ, ಬಸವರಾಜ ವಿಶ್ವಕರ್ಮ ಯಡ್ರಮಿ, ಶ್ರೀನಿವಾಸ ಕಾಸೋಜ, ಡಾ.ಶಾಹೀದ್ ಪಾಷಾ, ಡಾ.ಮಲ್ಲಿಕಾರ್ಜುನ ಭಾಗೋಡಿ, ಮನೋಹರ ಬೀರನೂರ, ನಾಗರಾಜ ಕೋಟನೂರ (ಡಿ) ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here