ಎನ್.ಪಿ.ಎಸ್ ರದ್ದುಗೊಳಿಸಿ | ಓಪಿಎಸ್ ಮರುಸ್ಥಾಪಿಸಿ ಒತ್ತಾಯ

0
125

ಚಿತ್ತಾಪುರ; ಎನ್.ಪಿ.ಎಸ್ ರದ್ದುಗೊಳಿಸಿ ಓಪಿಎಸ್ ಮರುಸ್ಥಾಪಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಎನ್.ಪಿ.ಎಸ್ ನೌಕರರ ಸಂಘ ತಾಲೂಕು ಘಟಕದ ವತಿಯಿಂದ ಪಟ್ಟಣದಲ್ಲಿ ಸಂಕಲ್ಪ ಯಾತ್ರೆ ಹಮ್ಮಿಕೊಳ್ಳಲಾಯಿತು.

ನಂತರ ಕರ್ನಾಟಕ ರಾಜ್ಯ ಸರ್ಕಾರಿ ಎನ್.ಪಿ.ಎಸ್ ನೌಕರರ ಸಂಘದ ತಾಲೂಕು ಅಧ್ಯಕ್ಷ ಮಾಲತೇಶ ಬಬ್ಬಜ್ಜಿ ಮಾತನಾಡಿ, 2006 ರಿಂದ ನೇಮಕವಾದ ಸರ್ಕಾರಿ ನೌಕರರಿಗೆ ಎನ್.ಪಿ.ಎಸ್ ಜಾರಿಗೆ ಬಂದಿರುವುದರಿಂದ ಎನ್.ಪಿ.ಎಸ್ ನೌಕರರಿಗೆ ಭದ್ರತೆ ಇಲ್ಲದಂತಾಗಿದೆ. ಇದರಿಂದ ಸಾಕಷ್ಟು ಕುಟುಂಬಗಳು ಬೀದಿಗೆ ಬಂದಿವೆ. ಈ ಹಿಂದೆ ಇದ್ದ ಹಳೆ ಪಿಂಚಣಿ ಯೋಜನೆಯನ್ನು ಪರುಸ್ಥಾಪಿಸಬೇಕು. ಈಗಾಗಲೇ ಐದು ರಾಜ್ಯಗಳು ಹಳೆ ಪಿಂಚಣಿ ಯೋಜನೆಯನ್ನು ಮತ್ತೆ ಜಾರಿಗೆ ತರುತ್ತಿವೆ. ಆದ್ದರಿಂದ ಕರ್ನಾಟಕ ರಾಜ್ಯದಲ್ಲಿ ಕೂಡ ಎನ್.ಪಿ.ಎಸ್ ನೌಕರರಿಗೂ ಹಳೆ ಪಿಂಚಣಿ ಯೋಜನೆಯನ್ನು ಮತ್ತೆ ಜಾರಿಗೆ ತರಬೇಕು ಎಂದರು.

Contact Your\'s Advertisement; 9902492681

ಕರ್ನಾಟಕ ರಾಜ್ಯದಲ್ಲಿ ಎನ್.ಪಿ.ಎಸ್ ರದ್ದುಗೊಳಿಸಬೇಕೆಂದು ನ.19 ರಂದು ಬೆಂಗಳೂರಿನ ಪ್ರೀಡಂ ಪಾರ್ಕಿನಲ್ಲಿ ಮಾಡು ಇಲ್ಲವೇ ಮಡಿ ಹೋರಾಟ ನಿಗದಿಯಾಗಿದೆ. ಆದ್ದರಿಂದ ತಾಲೂಕಿನ ಸರ್ಕಾರಿ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಬಸ್ ನಿಲ್ದಾಣ ವೃತ್ತ, ಬಸವೇಶ್ವರ ವೃತ್ತದ ಮೂಲಕ ತಹಶೀಲ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ನಂತರ ಗ್ರೇಡ್-2 ತಹಶೀಲ್ದಾರ್ ಅಮೀತ್ ಕುಲಕರ್ಣಿ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎನ್.ಪಿ.ಎಸ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕೊಟ್ರೇಶ ಎಸ್.ಬಿ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಬಳೂಂಡಗಿ, ನೀಲಗಂಗಾ ಬಬಲಾದ, ಸಿದ್ದಣ್ಣ ಅಣಬಿ, ಮಲ್ಲಿಕಾರ್ಜುನ ಸೇಡಂ, ರಾಜಕುಮಾರ ರಾಠೋಡ, ಸಂತೋಷಕುಮಾರ ಶಿರನಾಳ, ರಮೇಶ ಬಟಗೇರಿ, ಶರಣಬಸಪ್ಪ ಬೊಮ್ಮನಳ್ಳಿ, ಮಸ್ತಾನ್ ಪಟೇಲ್, ಆನಂದ್ ಮುಡಬೂಳಕರ್, ಮಧುಸೂಧನ್ ಘಾಳೆ, ಶರಣಪ್ಪ ಸೈದಾಪುರ, ತಮನ್ನ ಕೌಸರ್, ದೇವಿಂದ್ರಪ್ಪ ದೊರೆ ಸೇರಿದಂತೆ ವಿವಿಧ ಇಲಾಖೆಯ ಸರ್ಕಾರಿ ನೌಕರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here