ಕಲಬುರಗಿ: ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕರ್ನಾಟಕ ರಕ್ಷಣಾ ವೇದಿಕೆ (ಕಾವಲು ಪಡೆ) ವತಿಯಿಂದ ಪುನೀತ ಗೀತ ಗಾಯನ ವಿವಿಧ ಕ್ಷೇತ್ರದ ಸಾಧಕರಿಗೆ ಸಾಧಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ನಗರದ ಕನ್ನಡ ಭವನ ಸುವರ್ಣ ಸಭಾ ಭವನದಲ್ಲಿ ಭಾನುವಾರ ಸಂಜೆ ೫ ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ಜಿಲ್ಲಾಧ್ಯಕ್ಷ ಮಂಜುನಾಥ ನಾಲ್ವಾರಕರ್ ತಿಳಿಸಿದರು.
ಮಳಖೇಡ ದರ್ಗಾದ ಹಜರತ್ ಸೈಯದ್ ಮುಸ್ತಫಾ ಖಾದ್ರಿ ಸಾನ್ನಿಧ್ಯ ವಹಿಸುವರು. ಶಾಸಕ ದತ್ತಾತ್ರೇಯ ಪಾಟೀಲ ಉದ್ಘಾಟಿಸುವರು. ಶಾಸಕರಾದ ಬಸವರಾಜ ಮತ್ತಿಮಡು, ಖನೀಜ್ ಫಾತಿಮಾ ಆಗಮಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮುಖಂಡರಾದ ಶಿವಕಾಂತ ಮಹಾಜನ, ನಿತೀನ್ ಗುತ್ತೇದಾರ, ವೇದಿಕೆ ರಾಜ್ಯಾಧ್ಯಕ್ಷ ಎಸ್. ಸುರೇಶ, ಜೂ. ಪುನೀತ ಚಂದ್ರ ಮೌರ್ಯ, ಅಲ್ಲಮಪ್ರಭು ಪಾಟೀಲ, ಶರಣು ಮೋದಿ, ಕೃಷ್ಣಾರೆಡ್ಡಿ, ನೀಲಕಂಠ ಮೂಲಗೆ, ಸಂತೋಷ ಬಿಲಗುಂದಿ, ಡಾ. ವಿಕ್ರಮ ಸಿದ್ಧಾರೆಡ್ಡಿ, ಲಿಂಗರಾಜ ತಾರ್ ಫೈಲ್, ಗೀತಾ ರಾಜು ವಾಡೆಕರ್, ಸುರೇಶ ಬಡಿಗೇರ, ಸಚಿನ್ ಫರಹತಾಬಾದ ಇತರರು ಮುಖ್ಯ ಅತಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ವಿವಿಧ ಕ್ಷೇತ್ರದ ಸಾಧಕರಾದ ವೀರಭದ್ರ ಸಿಂಪಿ, ಮಹಾದೇವ ಧನ್ನಿ, ಸುಬ್ಬಯ್ಯ ನೀಲಾ, ಎಂ.ಎಸ್. ಪಾಟೀಲ ನರಿಬೋಳ, ಜೈಭೀಮ, ರವಿ ಸ್ವಾಮಿ, ಸುನಿಲ ಕಾಂಬ್ಳೆ, ರಮೇಶ ಮೇಳಕುಂದಾ, ಈಶ್ವರ ಕಟ್ಟಿಮನಿ, ಡಾ. ಫಾರುಕ್ ಮನೂರ, ಜಾಕಿರ್ ಹುಸೇನ್ ಉಸ್ತಾದ ಇತರರಿಗೆ ಸಾಧಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ವಿವರಿಸಿದರು.
ರವಿ ಎಸ್. ವಾರಿ ಇತರರಿದ್ದರು.