ದೊಡ್ಡ ಪರಂಪರೆಯ ಭಾಷೆ ಕನ್ನಡ: ಹೆಚ್ ಶಿವರಾಮೇಗೌಡ

0
17

ಕಲಬುರಗಿ: ಭಾರತದ ಬೇರೆ ಯಾವೊಂದು ಭಾಷೆಗೂ ಇಲ್ಲದಂತ ಪರಂಪರೆ ಕನ್ನಡ ಭಾಷೆಗಿದೆ. ಅದಕ್ಕಾಗಿಯಾದರೂ ಕನ್ನಡ ಭಾಷೆಗೆ ಎಂತಹ ಶಕ್ತಿಯಿದೆ ಎನ್ನುವುದನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಹೆಚ್. ಶಿವರಾಮೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಕುಸನೂರು ರಸ್ತೆಯ ಕೃಷ್ಣಾ ನಗರದಲ್ಲಿ ಹೆಚ್. ಶಿವರಾಮೇಗೌಡರ ಕರವೇ ಜಿಲ್ಲಾಧ್ಯಕ್ಷ ಶರಣು ಹೊಸಮನಿ ಆಯೋಜಿಸಿದ್ದ 67 ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನಡೆದ ಕಲಬುರಗಿ ಕನ್ನಡಿಗರ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಭಾಷೆ ವಿಚಾರದಲ್ಲಿ ನಮ್ಮ ನಾಡು ತಲ್ಲಣದ ಸ್ಥಿತಿಯಲ್ಲಿದೆ. ಇದು ಕೇವಲ ಕನ್ನಡಕ್ಕಷ್ಟೆ ಅಲ್ಲ. ಭಾರತದ ಎಲ್ಲಾ ಭಾಷೆಗಳು ಈ ಸಮಸ್ಯೆಯನ್ನು ಎದುರಿಸುತ್ತಿವೆ. ಕನ್ನಡ ಭಾಷೆಯ ಶಕ್ತಿ, ಸೌಂದರ್ಯ, ಘನತೆಯನ್ನು ಮರೆಯುತ್ತಿದ್ದೇವೆ. ಸರ್ಕಾರಿ ಶಾಲೆಗಳಲ್ಲಿ ಓದಿದವರು ವಿಜ್ಞಾನಿಗಳು, ದೊಡ್ಡ ದೊಡ್ಡ ಅಧಿಕಾರಿಗಳು, ಜ್ಞಾನಪೀಠ ಪ್ರಶಸ್ತಿ ಪುರುಸ್ಕøತರಾಗಿದ್ದಾರೆ. ಇದ್ಯಾವುದನ್ನು ಗೌರವಿಸದೆ ಇಂದಿನ ಬಹುಪಾಲು ಪೆÇೀಷಕರುಗಳು ತಮ್ಮ ಮಕ್ಕಳು ಖಾಸಗಿ ಶಾಲೆಗೆ ಸೇರಿ ಇಂಗ್ಲಿಷ್ ಮಾತನಾಡಬೇಕೆಂಬ ವ್ಯಾಮೋಹದಲ್ಲಿರುವುದು ನಿಜಕ್ಕೂ ಕನ್ನಡಕ್ಕೆ ಅಗೌರವ ತೋರಿದಂತಾಗುತ್ತದೆ ಎಂದು ವಿಷಾಧಿಸಿದರು.

ಕನ್ನಡಿಗರಿಗೆ ಅನ್ಯ ಭಾಷೆಗಳ ಬಗ್ಗೆ ವಿಚಿತ್ರವಾದ ಮನೋಭಾವನೆಯಿರುವುದರಿಂದ ಕನ್ನಡ ಭಾಷೆಯನ್ನು ಸರಿಯಾಗಿ ಕಲಿಯುತ್ತಿಲ್ಲ. ಭಾಷೆ ಎಂದರೆ ಸಂಸ್ಕೃತಿ, ಪರಂಪರೆ, ಭಾಷೆ ಎನ್ನುವುದು ಒಂದು ವಾಹನವಿದ್ದಂತೆ. ಹಳೆಗನ್ನಡ ಸಂಪೂರ್ಣವಾಗಿ ಮರೆತು ಹೋಗಿದೆ. ಯಾವ ವಿಶ್ವವಿದ್ಯಾನಿಲಯಗಳು ಕನ್ನಡ ಭಾಷೆ ಉಳಿವಿನ ಕಡೆ ಗಮನಹರಿಸುತ್ತಿಲ್ಲ. ಪರಂಪರೆ ಎಂದರೆ ಏನು? ಅದರಿಂದ ಏನು ಪಡೆದುಕೊಂಡಿದ್ದೇವೆ. ಯಾವುದನ್ನು ಕಳೆದುಕೊಂಡಿದ್ದೇವೆ ಎನ್ನುವುದನ್ನು ಚಿಂತಿಸಬೇಕಿದೆ ಎಂದರು.

ಒಂದು ಧರ್ಮ ಮತ್ತೊಂದು ಧರ್ಮವನ್ನು ಗೌರವಿಸುವುದೇ ಸಂಸ್ಕೃತಿ. ಕೋಮುವಾದ, ಜಾತಿ, ಧರ್ಮ ಘರ್ಷಣೆಯಲ್ಲಿ ದೇಶ ಮುಳುಗಿದೆ. ಹನ್ನೆರಡನೇ ಶತಮಾನದ ಕ್ರಾಂತಿಕಾರಿ ಬಸವಣ್ಣನವರ ಸಮಾನತೆ ಇನ್ನು ಕನಸಾಗಿಯೇ ಉಳಿದಿದೆ. ವಚನ ಚಳುವಳಿ, ಶರಣರ ಹೋರಾಟದಲ್ಲಿ ಇತಿಹಾಸವಿದೆ. ಪಂಚೇದ್ರಿಯಗಳ ಮೇಲೆ ಯಾರು ವಿಜಯ ಸಾಧಿಸುತ್ತಾರೋ ಅವರು ನಿಜವಾದ ಸ್ವತಂತ್ರರು ಎಂದರು.

ಸಮಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಗಟ್ಟಿಮೇಳ ಧಾರಾವಾಹಿ ನಟಿ ಆದಿತಿ (ಪ್ರೀಯಾ) ಚಾಲನೆ ನೀಡಿದರು. ಪಾಳಾದ ಗುರುಮೂರ್ತಿ ಶಿವಾಚಾರ್ಯರು ದಿವ್ಯ ಸಾನ್ನಿಧ್ಯ ವಹಿಸಿದ್ದರು. ಸಚಿನ್ ಫರತಾಬಾದ, ಶಿವಮೊಗ್ಗ ಬಂದೀಖಾನೆ ಆರಕ್ಷಕ ಶಿವಾನಂದ ವಾಕ್ಸೆ, ಮಲ್ಲಿಕಾರ್ಜುನ ಕಿಳ್ಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ವಿವಿಧ ಕ್ಷೇತ್ರದ ಸಾಧಕರಾದ ಲಕ್ಷ್ಮಣ ಗರೂರು, ಮಂಜುನಾಥ ಜಮಾದಾರ, ಹಣಮಂತ ಹೊಸಮನಿ, ಗೋಪಾಲ ನಾಟೀಕಾರ, ಯುವರಾಜ ಕಟ್ಟಿಮನಿ, ಶರಣಬಸಪ್ಪ ಸುಗೂರು ಅವರನ್ನು ಸನ್ಮಾನಿಸಲಾಯಿತು.

ಯುವ ಘಟಕ ಅಧ್ಯಕ್ಷ ಆನಂದ ತೆಗನೂರು, ಮಹಿಳಾ ಘಟಕದ ಅಧ್ಯಕ್ಷೆ ಅನ್ನಪೂರ್ಣ, ಭಾಗ್ಯಶ್ರೀ, ನಗರಾಧ್ಯಕ್ಷ ಶ್ರೀನಿವಾಸ ಕಡ್ಲಾ, ನಾಗೇಶ ಎಸ್., ಪವನ್, ದೀಪಕ್, ಸಚಿನ್, ವಿನೋದ, ಸಿದ್ರಾಮ ಭಾಗೋಡಿ, ಶಿವಕುಮಾರ ಗರೂರು, ಸುಭಾಷ್, ಪ್ರಭು, ವಿಠ್ಠಲ್ ಸೇರಿದಂತೆ ಇನ್ನಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here