ಮತದಾರರ ಪಟ್ಟಿ ಪ್ರಕಟ 18ವರ್ಷಕ್ಕೆ 3ತಿಂಗಳ ಕಡಿಮೆ ಇದ್ದರು ಹೆಸರು ಸೇರ್ಪಡೆಗೆ ಅವಕಾಶ

0
104

ಕಲಬುರಗಿ: ಹದಿನೆಂಟು ವರ್ಷ ತುಂಬಲು ಕೇವಲ ಮೂರು ತಿಂಗಳು ಕಡಿಮೆ ಇದ್ದರೆ ಅವರು ಕೂಡ ಮತದಾನ ಮಾಡಲು ಅರ್ಹರಿರುತ್ತಾರೆ. ಅರ್ಹ ಯುವಕರು ಬೇಗನೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆಗೆ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಯಶವಂತ ವಿ ಗುರುಕರ್ ಅವರು ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ 2023 ಕರಡು ಪಟ್ಟಿ ಪ್ರಕಟ ಹಿನ್ನೆಲೆಯಲ್ಲಿ ಚುನಾವಣಾ ಜಾಗೃತಿ ಮೂಡಿಸಲು ವಾಕಥಾನ್ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದರು.

Contact Your\'s Advertisement; 9902492681

ವಿಧಾನ ಸಭಾ ಮತಕ್ಷೇತ್ರದಲ್ಲಿ ಚುನಾವಣೆ ಅಯೋಗದ ನಿರ್ದೇಶನದಂತೆ ಇಂದು ಎಲ್ಲಾ ಮತದಾರರ ಪಟ್ಟಿ ಪ್ರಚುರಪಡಿಸಲಾಗಿದೆ ಜಿಲ್ಲೆಯಲ್ಲಿ 18-20 ವರ್ಷದ ಮಕ್ಕಳು ನೋಂದಣೆ ಮಾಡುವುದನ್ನು ಕಡಿಮೆಯಾಗಿದೆ ಎಲ್ಲರೂ ನೋಂದಣಿ ಮಾಡಬೇಕೆಂದು ತಿಳಿಸಿದರು.

ವೋಟರ್ ಹೆಲ್ಪೆಲೈನ್ ಆ್ಯಪ್ ಅಥವಾ ವೆಬ್‍ಸೈಟ್‍ದಲ್ಲಿ ಆನ್‍ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು ಎಂದರು.

ಸಾರ್ವಜನಿಕರು ಹಾಗೂ ಮತದಾರರು ಪಟ್ಟಿ ಪರೀಕ್ಷಿಸಿ ಆಕ್ಷೇಪಣೆಗಳಿದ್ದರೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ತಿದ್ದುಪಡಿ ಮಾಡಲು ಹೆಸರು ತೆಗೆದು ಹಾಕಲು ವರ್ಗಾವಣೆ ಮಾಡಲು ಸಂಬಂಧಿತ ಮತಗಟ್ಟೆ ಅಧಿಕಾರಿ (ಬಿ.ಎಲ್.ಒ) ಹತ್ತಿರ ಅವಶ್ಯವಿರುವ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಮತದಾರರ ಪಟ್ಟಿ ಪರಿಷ್ಕರಣೆ ವೇಳಾಪಟ್ಟಿಯಂತೆ 2022 ನವೆಂಬರ್ 9 ರಿಂದ 2023 ಜನವರಿ 5 ರ ವರೆಗೆ ನಡೆಯಲಿದೆ ಎಂದು ತಿಳಿಸಿದರು.

ಜಾಥದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ ದಿ. ಬದೋಲೆ, ಮಹಾನಗರ ಪಾಲಿಯ ಆಯುಕ್ತರಾದ ಪಾಟೀಲ ಭುವನೇಶ ದೇವಿದಾಸ, ಅಪರ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಮಹಾನಗರ ಪಾಲಿಕೆ ಉಪ-ಆಯುಕ್ತರಾದ ಪ್ರಕಾಶ ರಜಪೂತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ,. ರಾಜೇಶೇಖರ ಮಾಲಿ, ಜಿ.ಪಂ.ಯೋಜನಾ ನಿರ್ದೇಶಕ ಜಗದೇವಪ್ಪ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಈ.ಜಾಥವು ಜಗತ್ ಸರ್ಕಲ್‍ನಲ್ಲಿ ಮುಕ್ತಾಗೊಂಡಿತ್ತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here