ಭ್ರಷ್ಟಾಚಾರದ ವಿಚಾರದಲ್ಲಿ ಚರ್ಚೆಗೆ ಬರುವಂತೆ ಬಿಜೆಪಿಗರಿಗೆ ಪ್ರಿಯಾಂಕ್ ಖರ್ಗೆ ಪಂಥಾವ್ಹಾನ

0
15

ಕಲಬುರಗಿ: “ನಿಜ, ನಾನು ಕಳೆದ ೫೦ ದಿನದಿಂದ ಕ್ಷೇತ್ರಕ್ಕೆ ಬಂದಿಲ್ಲ. ರಾಹುಲ್ ಗಾಂಧಿ ಅವರ ಭಾರತ ಜೋಡೋ ಯಾತ್ರೆಯಲ್ಲಿ ಭಾಗವಹಿಸಿ ೫೧೧ ಕಿಮಿ ನಡೆದಿದ್ದೇನೆ. ಆ ನಂತರ ಖರ್ಗೆ ಸಾಹೇಬರ ಎಐಸಿಸಿ ಅಧ್ಯಕ್ಷ ಚುನಾವಣೆಯಲ್ಲಿದ್ದೆ. ಅದಾದ ನಂತರ ಕೋಲಿ ಕಬ್ಬಲಿಗ ಹಾಗೂ ಕುರುಬ ಜನಾಂಗದವರನ್ನು ಎಸ್ ಟಿ ಸೇರಿಸುವಂತೆ ಒತ್ತಾಯಿಸಲು ಕೇಂದ್ರ ಸಚಿವರನ್ನು ಭೇಟಿ ಮಾಡಲು ಮೂರು ದಿನ ದಿಲ್ಲಿಯಲ್ಲಿದ್ದೆ. ಇದು ಕ್ಷೇತ್ರದ ಜನರಿಗೆ ಗೊತ್ತಿದೆ. ನಾನು ಎಲ್ಲಿದ್ದೆ ಎಂದು ಬಿಜೆಪಿಗೆ ಉತ್ತರಿಸುವ ಅಗತ್ಯವಿಲ್ಲ” ಎಂದು ಶಾಸಕ ಹಾಗೂ ಕೆಪಿಸಿಸಿ ಸಂವಹನ ವಿಭಾಗದ ಅಧ್ಯಕ್ಷರಾದ ಪ್ರಿಯಾಂಕ್ ಖರ್ಗೆ ಅವರು ತಮ್ಮ ವಿರುದ್ಧ ಚಿತ್ತಾಪುರದಲ್ಲಿ ಬಿಜೆಪಿ ನಡೆಸಿದ ಪೋಸ್ಟರ್ ಅಭಿಯಾನಕ್ಕೆ ತಿರುಗೇಟು ನೀಡಿದರು.

ಕಲಬುರಗಿ ಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಅವರು ” ಕೊರೋನಾ ಸಂದರ್ಭದಲ್ಲಿ ಬಿಜೆಪಿಗರು ಎಲ್ಲಿ ಹೋಗಿದ್ದರು ? ನಾನು ಬಿಟ್ ಕಾಯಿನ್ ನಿಂದ‌ ಹಿಡಿದು ಪಿಎಸ್ ಐ ಹಗರಣದವರೆಗೆ ಈ ಸರ್ಕಾರದ 40% ಕಮಿಷನ್ ಹೊಡೆದಿರುವುದರ ಬಗ್ಗೆ ಹೋರಾಟ ಮಾಡಿದ್ದೇನೆ ಜೊತೆಗೆ ಪೇ ಸಿಎಂ ಅಭಿಯಾನ ಮಾಡಿದ್ದೇನೆ ಹಾಗಾಗಿ ಅದಕ್ಕೆ ಪ್ರತಿಯಾಗಿ ಬಿಜೆಪಿಗರು ನನ್ನ ವಿರುದ್ದ ಪೋಸ್ಟರ್ ಅಭಿಯಾನ ಮಾಡಿದ್ದಾರೆ. ಮಾಡಲಿ‌ಬಿಡಿ‌ ಅದಕ್ಕೂ ಮೊದಲು ನನ್ನೊಂದಿಗೆ ಚರ್ಚೆಗೆ ಬರಲಿ. ಆಮೇಲೆ ಪೋಸ್ಟರ್ ಅಭಿಯಾನ‌ ಮಾಡಲಿ ಬೇಕಿದ್ದರೆ ಅವರಿಗೆ ಕಲರ್ ಪೋಸ್ಟರ್ ಪ್ರಿಂಟ್ ಮಾಡಿಸಿ ನಾನೇ ಒದಗಿಸುತ್ತೇನೆ ” ಎಂದು‌ ಚಾಟಿ ಬೀಸಿದರು.

Contact Your\'s Advertisement; 9902492681

ಬಿಜೆಪಿಗರಿಗೆ ನೀವು ಯಾಕೆ ಟಾರ್ಗೆಟ್ ಆಗುತ್ತಿದ್ದೀರಾ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ಸರ್ಕಾರದ‌ ಹಗರಣವನ್ನು ಹೊರಗೆಳೆದಿದ್ದೇವೆ ಭಾರತ‌ಜೋಡೋ‌ ಯಾತ್ರೆಯಲ್ಲಿ ಸರ್ಕಾರದ‌ ಭ್ರಷ್ಟಾಚಾರ ಬಗ್ಗೆ, 40% ಕಮಿಷನ್ ಬಗ್ಗೆ ಜನರಿಗೆ ಮನವರಿಕೆ‌ ಮಾಡಿ‌ಕೊಟ್ಟಿದ್ದೇವೆ ಇದರಿಂದಾಗಿ ಬಿಜೆಪಿಗರಿಗೆ ಕನಸಲ್ಲೂ ಬೆಚ್ಚಿ ಬೀಳುವಂತಾಗಿದೆ. ಸಹಜವಾಗಿ ನನ್ನನ್ನು ಟಾರ್ಗೇಟ್ ಮಾಡುತ್ತಿದ್ದಾರೆ. ಈ ಮೊದಲು ನಾನು ಟಾಪ್ ಒನ್‌ನಲ್ಲಿದ್ದೇ ಬಹುಶಃ ಈಗ ಮೂರನೇ ಸ್ಥಾನದಲ್ಲಿರುಬಹುದು ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೋಳಿ ಅವರ ‘ ಹಿಂದೂ’ ಪದದ ವಿವಾದದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಖರ್ಗೆ ಅವರು, ಹಿಂದೂ ಎಂಬ ಪದ ಪರ್ಶಿಯನ್ ಭಾಷೆಯಿಂದ ಬಂದಿರುವುದಾಗಿ ತಾವು ಅಧ್ಯಯನ ಮಾಡಿದ್ದಾಗಿ ಮಾನವ ಬಂಧುತ್ವ ವೇದಿಕೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಹೇಳಿರುವುದಾಗಿ ಅವರು ಹೇಳಿದ್ದಾರೆ. ಆ ಬಗ್ಗೆ ಚರ್ಚೆಗೆ ಬರುವಂತೆ ಬಿಜೆಪಿಗರಿಗೆ ಆವ್ಹಾನ‌ ನೀಡಿದ್ದಾರೆ. ಚರ್ಚೆಗೇಕೆ ಅವರು ಹೋಗಿಲ್ಲ? ಈ ಬಗ್ಗೆ ಜಾರಕಿಹೊಳಿ ಅವರು ಎಲ್ಲ ಟಿವಿ ಮಾಧ್ಯಮದವರೊಂದಿಗೆ ಲೈವ್ ಬಂದು ಸ್ಪಷ್ಟನೆ ನೀಡಿದ್ದಾರೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಕಾಲದಲ್ಲಿ‌ ಅನುಮೋದನೆಗೊಂಡ ಯೋಜನೆಗಳ ಉದ್ಘಾಟನೆ ಮಾಡುತ್ತಿದ್ದಾರೆ ಅಷ್ಟೇ. ಅವರಿಗೆ ಅಭಿವೃದ್ದಿ ಬೇಕಿಲ್ಲ‌ ಆದರೆ ಚುನಾವಣೆ ಬೇಕು. ಗುಜರಾತ್ ಜೊತೆಗೆ ಹಿಮಾಚಲ ಚುನಾವಣೆ ನಡೆಸಬೇಕಿತ್ತು. ಆದರೆ ಕೇವಲ ಹಿಮಾಚಲ ದಲ್ಲಿ ಮಾತ್ರ ಚುನಾವಣೆ ನಡೆಸುವುದಾಗಿ ಹೇಳಿ ಈಗ ಗುಜರಾತ್ ನಲ್ಲೂ‌ ಚುನಾವಣೆ ನಡೆಸುತ್ತಿದ್ದಾರೆ. ಈಗ ರಾಜ್ಯದಲ್ಲಿಯೂ‌ ಚುನಾವಣೆ ಸಮೀಪಿಸುತ್ತಿದೆ ಹಾಗಾಗಿ ಪದೇ ಪದೇ ರಾಜ್ಯಕ್ಕೆ ಬರುತ್ತಿದ್ದಾರೆ ಎಂದು ಟೀಕಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here