ಸಾಲಬಾಧೆಗೆ ಯಳಸಂಗಿ ರೈತ ನೇಣಿಗೆ ಶರಣು

0
194

ಕಲಬುರಗಿ: ಆಳಂದ ತಾಲ್ಲೂಕಿನ ಯಳಸಂಗಿ ಗ್ರಾಮದಲ್ಲಿ ರೈತನೊರ್ವ ಸಾಲಕ್ಕೆ ಹೆದರಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಭೀಮರಾವ ಮಲ್ಕಣ್ಣಾ ಯಲ್ದೆ (47) ಮೃತ ದುರ್ದೈವಿ. ಪತ್ನಿ ಸೇರಿದಂತೆ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಮಗಳು ಇದ್ದಾಳೆ. ಮೃತ ರೈತನು ಕರ್ನಾಟಕ ಗ್ರಾಮೀಣ ಬ್ಯಾಂಕ್ ಮಾಡಿಯಾಳ 25 ಸಾವಿರ ಮತ್ತು ಮಾದನಹಹಿಪ್ಪರಗಾ ಸಮೃದ್ಧಿ ಬ್ಯಾಂಕಿನಲ್ಲಿ 35 ಸಾವಿರ ಸೇರಿದಂತೆ ಇತರರ ಹತ್ತಿರ ಬೇಸಾಕ್ಕಾಗಿ ಹಾಗೂ ಮಗಳ ಮದುವೆಗಾಗಿ ಒಟ್ಟು 13.5ಲಕ್ಷ್ಯ ಕೈಗಡ ಮತ್ತು ಸಾಲ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ.

Contact Your\'s Advertisement; 9902492681

ಆದರೆ, ಪ್ರಸಕ್ತ ವರ್ಷದಲ್ಲಿ ಮಳೆ ಹೆಚ್ಚಳವಾದರಿಂದ ಇದ್ದ ಬೆಳೆಗಳು ಕೈಕೊಟ್ಟ ಪರಿಣಾಮ ಮಾಡಿದ ಸಾಲ ಹೇಗೆ ಮುಟ್ಟಿಸಬೇಕು ಇಂಬ ಚಿಂತೆ ರೈತನಿಗೆ ಆಗಾಗ ಕಾಡುತ್ತಿತ್ತು ಎನ್ನಲಾಗಿದೆ.

ಬುಧವಾರ ಮದ್ಯಾಹ್ನ 2.30ಕ್ಕೆ ಮನೆಯಲ್ಲಿ ಊಟ ಮುಗಿಸಿಕೊಂಡು ತಮ್ಮ ಹೊಲಕ್ಕೆ ಹೊಲಕ್ಕೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದಾನೆ. ಆದರೆ ಹೊಲದಲ್ಲಿರುವ ಬೇವಿನ ಮರಕ್ಕೆ ಸಂಜೆ ನೇಣು ಹಾಕಿಕೊಂಡಿದ್ದಾನೆ. ಇದನ್ನು ಕಂಡ ಅಕ್ಕಪಕ್ಕದ ರೈತರು, ಗ್ರಾಮಸ್ಥರು ಸೇರಿ ಹಗ್ಗ ಬಿಚ್ಚಿ ನೋಡುವಾಗ ಇನ್ನು ಸ್ವಲ್ಪ ಉಸಿರಾಡುತ್ತಿದದ್ದನ್ನು ನೋಡಿ ರೈತನಿಗೆ ರಾತ್ರಿ ನಿಂಬರ್ಗಾ ಸರಕಾರಿ ಆಸ್ಪತ್ರೆಗೆ ಒಯ್ಯುವ ಮಾರ್ಗ ಮಧ್ಯೆದಲ್ಲಿ ಅಸುನಿಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಳು ಹೇಳಿ ಕೊಂಡಿದ್ದಾರೆ. ಪ್ರಕರಣ ನಿಂಬರ್ಗಾ ಠಾಣೆಯಲ್ಲಿ ದಾಖಲಾಗಿದೆ.

ರೈತ ಆತ್ಮಹತ್ಯೆಯ ಸುದ್ದಿ ಅರಿತು ಸ್ಥಳಕ್ಕೆ ಶಾಸಕ ಸುಭಾಷ ಆರ್. ಗುತ್ತೇದಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಸರಕಾರಿ ಮಟ್ಟದಲ್ಲಿ ಮೃತನ ಕುಟುಂಬಕ್ಕೆ ಸಿಗುವ ಎಲ್ಲಾ ಪರಿಹಾರವನ್ನು ಪ್ರಮಾಣಿಕವಾಗಿ ದೊರಕಿಸಿಕೊಡುವ ಭರವಸೆ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here