ಪ್ರತ್ಯೇಕ ಹೋರಾಟಕ್ಕೆ ರೈತ-ಕಾರ್ಮಿಕರ ಸಿದ್ಧತೆ

0
35

ಆಳಂದ: ವೈಜ್ಞಾನಿಕ ಬೆಲೆ ಆಧರಿಸಿ ಪ್ರತಿಟನ್ ಕಬ್ಬಿಗೆ 3500ರೂಪಾಯಿ, ಪಂಪಸೆಟ್‍ಗಳಿಗೆ ಸಮರ್ಪಕ ವಿದ್ಯುತ್, ಶಿಕ್ಷಣ ಇಲಾಖೆ ವ್ಯವಸ್ಥೆ ಸುಧಾರಣೆ ಒಳಗೊಂಡಂತೆ ಸ್ಥಳೀಯ ಪುರಸಭೆಯಲ್ಲಿ ಬಡವರಿಗೆ ನಿವೇಶನ ಮನೆ ನೀಡುವಂತೆ ಶೀಘ್ರವೇ ಸರಣಿಯಾಗಿ ಹಲವು ಸಂಘಟನೆ ಆಶ್ರಯದಲ್ಲಿ ಪ್ರತ್ಯೇಕ ಹೋರಾಟಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ರೈತ ಮುಖಂಡ ಮಲ್ಲಿನಾಥ ಯಲಶೆಟ್ಟಿ ಅವರು ಇಂದಿಲ್ಲಿ ಹೇಳಿದರು.

ಪಟ್ಟಣದ ಅಖಿಲ ಭಾರತ ಕಿಸಾನಸಭಾ ತಾಲೂಕು ಕಚೇರಿಯಲ್ಲಿ ನರೆದ ರೈತ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು. ಮಾಗಿ ಬೆಳೆ ಹಾಗೂ ಬೇಸಿಗೆ ಬೆಳೆಯಲು ನೀರಿದ್ದ ರೈತರಿಗೆ ವಿದ್ಯುತ್ ಸಮರ್ಪಕವಾಗಿ ಸಿಗುತ್ತಿಲ್ಲ. ಇದರಿಂದಾಗಿ ಕಳೆದೊಂದು ವರ್ಷದಿಂದ ಜೆಸ್ಕಾಂಗೆ ಸಮರ್ಪ ವಿದ್ಯುತ್‍ಗೆ ಒತ್ತಾಯಿಸಿದರು ಬೇಡಿಕೆ ಈಡೇರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Contact Your\'s Advertisement; 9902492681

ಪಂಪಸೆಟ್‍ಗಳಿರುವ ಕಡೆ ಅಗತ್ಯಕ್ಕೆ ತಕ್ಕ ಟ್ರಾನ್ಸಫಾಂಗಳು ಅಳವಡಿಸಬೇಕು. ಹೊಸ ಅರ್ಜಿಗೆ ಠೇವಣಿ ಆಧಾರ ಮೇಲೆ ಆರ್‍ಆರ್‍ಸಂಖೆ ನೀಡಿ ಅಧಿಕೃತ ವಿದ್ಯುತ್ ಸಂಪರ್ಕ ಒದಗಿಸಬೇಕು ಎಂಬ ಬೇಡಿಕೆಯಿದೆ. ಅಮರ್ಜಾಗೆ ಸೇರುವ ಹಳ್ಳದ ನೀರಿನ ನೀರುಣಿಸುವ ರೈತರಿಗೆ ವಿದ್ಯುತ್ ನಿರಂತರ ವಿದ್ಯುತ್ ಕೊಡಬೇಕು ಎಂದರು.

ಶಿಕ್ಷಣ ಇಲಾಖೆಗೆ ಸರ್ಕಾರ ನೀಡಿದ ಕಂಪ್ಯೂಟರ್ ಒದಗಿಸದರೆ ಶಾಲೆಗಳಲ್ಲಿ ವಿದ್ಯುತ್ ಇಲ್ಲದೆ ಯೋಜನೆ ವ್ಯರ್ಥವಾಗಿದೆ ಈ ಎಲ್ಲ ಬೇಡಿಕೆಗೆ ಒತ್ತಾಯಿಸಿ ಹೋರಾಟ ನಡೆಯಲಿದೆ ಎಂದರು.

ಕಿಸಾನಸಭಾ ರಾಜ್ಯ ಕಾರ್ಯಾಧ್ಯಕ್ಷ ಮೌಲಾ ಮುಲ್ಲಾ ಮಾತನಾಡಿ, ಗ್ರಾಪಂಗಳ ಮೇಲೆ ನಿಯಂತ್ರಣ ತಪ್ಪಿಹೋಗಿದೆ. ಅಧಿಕಾರಿಗಳು ಮಹಾರಾಜರಂತೆ ನಡೆದುಕೊಳ್ಳುತ್ತಿದ್ದು, ಇದು ಪ್ರಜಾಪ್ರಭುತ್ವ ವ್ಯವಸ್ಥೆಯಂತೆ ಸಾಗಬೇಕು ಇದರ ವಿರುದ್ಧ ಚಳವಳಿಯೊಂದೆ ಮಾರ್ಗವಾಗಿದೆ ಎಂದರು.

ಕಬ್ಬಿಗೆ ಸಕ್ಕರೆ ಉತ್ಪನ್ನದ ಮೇಲೆ ಬೆಲೆ ನಿಗಧಿ ಪಡಿಸಿದೆ ಇದರ ಉಪ ಉತ್ಪನ್ನಗಳ ಆಧಾರದ ಲಾಭದ ಶೇ 10ರಷ್ಟು ಸೇರಿ ಪ್ರತಿಟನ್‍ಗೆ ವೈಜ್ಞಾನಿಕವಾಗಿ 3500 ರೂಪಾಯಿ ಬೆಲೆ ನೀಡಬೇಕು. ಬೆಲೆ ನಿಗದಿಗೆ ಕೇಂದ್ರ ಸರ್ಕಾರ ಜವಾಬ್ದಾರಿಯಿÉದೆ. ಇದಕ್ಕಾಗಿ ಹೋರಾಟ ಕೈಗೊಳ್ಳಲಾಗುವುದು ಎಂದರು.

ಡಿಸಿಸಿ ಬ್ಯಾಂಕನಲ್ಲಿ ಖಾತೆದಾರರಿಗೆ ದಿನಕ್ಕೆ 50 ಸಾವಿರ ಮಾತ್ರ ನೀಡಲಾಗುತ್ತಿದೆ. ಇದರಿಂದ ನಿತ್ಯ ಬ್ಯಾಂಕಿಗೆ ಹೆಚ್ಚಿನವರ ಬರುವುದರಿಂದ ವಾರವಾದರು ಸರಣಿಗೆ ನಿಂತರು ದುಡ್ಡು ಸಿಗುತ್ತಿಲ್ಲ. ಈ ಅವ್ಯವಸ್ಥೆ ವಿರುದ್ಧ ಡಿಸಿಸಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದರು.

ಈ ವೇಳೆ ತಡೋಳಾ ಗ್ರಾಪಂ ಅಧ್ಯಕ್ಷ ಮೈಲಾರಿ ಜೋಗೆ, ರಾಜಶೇಖರ ಬಸ್ಮೆ ಹಿರೋಳಿ, ಪುರಸಭೆ ಮಾಜಿ ಸದಸ್ಯ ಸೈಫಾನ ಜವಳೆ, ಭಾಖರ ಅಲಿ ಜಮಾದಾರ, ಸೀರಾಜ್ ಖಾಜಿ, ಗಿಲಾನಿ ಪಟೇಲ ಮತ್ತಿತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here