ನ. 13 ರಿಂದ ಎರಡು ದಿನ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿಯವರ ಜನ್ಮದಿನಾಚರಣೆ

0
18

ಕಲಬುರಗಿ; ಶರಣಬಸವೇಶ್ವರ ಸಂಸ್ಥಾನದ ಮಹಾದಾಸೋಹ ಪೀಠಾಧಿಪತಿ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿ ಅವರ 88ನೇ ಜನ್ಮದಿನಾಚರಣೆಯನ್ನು ನವೆಂಬರ್ 13 ಮತ್ತು 14ರಂದು ಕಲಬುರಗಿ ನಗರದಲ್ಲಿ ಎರಡು ದಿನಗಳ ಕಾಲ ಅದ್ಧೂರಿಯಾಗಿ ಆಚರಿಸಲಾಗುವುದು.

ಕಲಬುರಗಿ ನಗರದಲ್ಲಿ ಬುಧವಾರ ಪತ್ರಿಕಾ ಪ್ರಕಟಣೆ ನೀಡಿರುವ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವಾಜಿ ಹಾಗೂ ಸಂಘದ ಕಾರ್ಯದರ್ಶಿ ಶ್ರೀ ಬಸವರಾಜ ದೇಶಮುಖ, ಈ ಸಲ 1000 ಪುಟಗಳ ಅಭಿನಂದನಾ ಗ್ರಂಥ ಬಿಡುಗಡೆ ಮಾಡುತ್ತಿರುವುದು ಸಂಭ್ರಮದ ಪ್ರಮುಖ ಆಕರ್ಷಣೆಯಾಗಿರುತ್ತದೆÉ. ಈ ಗ್ರಂಥ ತತ್ವಜ್ಞಾನಿ, ದಾರ್ಶನಿಕ ಮತ್ತು ದೂರದೃಷ್ಟಿಯ ಶಿಕ್ಷಣತಜ್ಞ ಪೂಜ್ಯ ಡಾ ಅಪ್ಪಾಜಿ ಅವರ ಜೀವಮಾನದ ಕೊಡುಗೆಯ ಕುರಿತು ವಿವಿಧ ವ್ಯಕ್ತಿಗಳು, ಹಿರಿಯ ಬರಹಗಾರರು ಮತ್ತು ವಿವಿಧ ಕ್ಷೇತ್ರಗಳ ಗಣ್ಯರ ಬರಹಗಳನ್ನು ಒಳಗೊಂಡಿದೆ. ಪೂಜ್ಯ ಅಪ್ಪಾಜಿಯವರ ಜೀವನದ ಪ್ರಮುಖ ಘಟನಾವಳಿಗಳ ಕುರಿತು ಸಂಸ್ಥಾನದ ಐತಿಹಾಸಿಕ ದಾಖಲೆಗಳಿಂದ ಕೆಲವು ಅಪರೂಪದ ಛಾಯಾಚಿತ್ರಗಳನ್ನು ಈ ಸಂಪುಟ ಒಳಗೊಂಡಿದೆ.

Contact Your\'s Advertisement; 9902492681

ಡಾ.ಶಿವರಾಜ್ ಶಾಸ್ತ್ರಿ ಹೇರೂರು ಅವರು ಬರೆದಿರುವ “ಶ್ರೀ ಶರಣಬಸವ ಮಹಾದಾಸೋಹ ದರ್ಶನಂ” ಮಹಾಕಾವ್ಯ ಹಾಗೂ ಡಾ.ನೀಲಾಂಬಿಕಾ ಪೆÇಲೀಸ್ ಪಾಟೀಲ್ ಅವರ 11111 ತ್ರಿಪದಿಗಳನ್ನು (ಮೂರು ಸಾಲಿನ ಪದ್ಯಗಳು) ಒಳಗೊಂಡಿರುವ “ದಾಸೋಹ ಭಂಡಾರಿ ಶರಣಬಸವ ಜನಪದ ಮಹಾಕಾವ್ಯ” ಎಂಬ ಎರಡು ಪುಸ್ತಕಗಳೊಂದಿಗೆ ಅಭಿನಂದನಾ ಗ್ರಂಥವನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುವುದು. ಈ ಮೂರೂ ಪುಸ್ತಕಗಳನ್ನು ಶರಣಬಸವ ವಿಶ್ವವಿದ್ಯಾಲಯದಿಂದ ಶರಣಬಸವೇಶ್ವರ ದೇವಸ್ಥಾನದವರೆಗೆ ವಿಧ್ಯುಕ್ತವಾಗಿ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುವುದು. ನಂತರ, ದಾಸೋಹ ಮಹಾಮನೆಯಲ್ಲಿ ಪುಸ್ತಕಗಳನ್ನು ಬಿಡುಗಡೆ ಮಾಡುವ ಮೊದಲು ಮೂರು ಸಂಪುಟಗಳನ್ನು, ಅಲಂಕರಿಸಿದ ಆನೆಯ ಮೇಲೆ ಇರಿಸಿ ದೇವಾಲಯದ ಸುತ್ತಲೂ ಮೆರವಣಿಗೆ ಮಾಡಲಾಗುವುದು.

ನ.14ರಂದು ದಾಸೋಹ ಮಹಾಮನೆಯಲ್ಲಿ ಪೂಜ್ಯ ಡಾ.ಅಪ್ಪಾಜಿಯವರ ಜನ್ಮದಿನಾಚರಣೆಯ ಮಹೋತ್ಸವವು ವಿವಿಧ ಸಮಾಜದ ಗಣ್ಯರು, ರಾಜಕೀಯ ಮುಖಂಡರು, ವಿವಿಧ ಧಾರ್ಮಿಕ ಮಠಾಧೀಶರು, ಶಿಕ್ಷಣಾಭಿಮಾನಿಗಳು, ಭಕ್ತರು ಹಾಗೂ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ನಡೆಯಲಿದೆ. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ಎಲ್ಲಾ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಶರಣಬಸವ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಜನ್ಮದಿನಾಚÀರಣೆಯಲ್ಲಿ ಭಾಗವಹಿಸಲಿದ್ದಾರೆ.

ಪೂಜ್ಯ ಅಪ್ಪಾಜಿಯವರ ಜನ್ಮದಿನದ ಅಂಗವಾಗಿ ಶರಣಬಸವ ವಿಶ್ವವಿದ್ಯಾಲಯದ ಬೋಧಕ ವೃಂದ ಹಾಗೂ ವಿದ್ಯಾರ್ಥಿಗಳು ಶರಣಬಸವೇಶ್ವರ ದೇಗುಲದಲ್ಲಿ 11 ಸಾವಿರ ದೀಪಗಳನ್ನು ಬೆಳಗಿಸುವ ಮೂಲಕ ದೀಪೆÇೀತ್ಸವವನ್ನು ಏರ್ಪಡಿಸಿದ್ದಾರೆ.
ಎರಡು ದಿನಗಳ ಕಾಲ ನಡೆಯುವ ಪೂಜ್ಯ ಡಾ. ಅಪ್ಪಾಜಿಯವರ ಜನ್ಮದಿನಾಚರಣೆಯ ಪೂರ್ವಭಾವಿಯಾಗಿ ನವೆಂಬರ್ 09 ರಿಂದ, ಪೂಜ್ಯ ಡಾ.ಅಪ್ಪಾಜಿಯವರ ಜೀವನ ಮತ್ತು ಕೊಡುಗೆ ಕುರಿತು ಸಾಂಸ್ಕøತಿಕ ಕಾರ್ಯಕ್ರಮಗಳು, ಕ್ರೀಡಾಕೂಟಗಳು, ಚರ್ಚಾಸ್ಪರ್ಧೆಗಳು ಮತ್ತು ಪ್ರಬಂಧ ಸ್ಪರ್ಧೆಗಳು ಐದು ದಿನಗಳ ಕಾಲ ನಡೆಯಲಿವೆ. ಹಾಗೆಯೇ ಬಡವರಿಗೆ ಕಂಬಳಿ, ಬಟ್ಟೆ, ಆಹಾರ ಮತ್ತು ಹಣ್ಣುಗಳನ್ನು ವಿತರಿಸಲಾಗುವುದು.

ಶರಣಬಸವ ವಿಶ್ವವಿದ್ಯಾಲಯವು ಡಾ. ಅಪ್ಪಾಜಿಯವರ ಜನ್ಮದಿನದಂಗವಾಗಿ ವಿವಿಯ ವಿದ್ಯಾರ್ಥಿಗಳಿಗೆ ಬೃಹತ್ ಕ್ರೀಡಾಕೂಟವನ್ನು ಆಯೋಜಿಸುವುದರ ಜೊತೆಗೆ ಪೂಜ್ಯ ಡಾ.ಅಪ್ಪಾಜಿಯವರ ಜೀವನದ ಕುರಿತು ಪ್ರಬಂಧ, ಭಾಷಣ ಮತ್ತು ಚರ್ಚಾ ಸ್ಪರ್ಧೆಗಳನ್ನು ಸಹ ನಡೆಸಲಾಗುತ್ತದೆ. ಬೋಧಕ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ತಂಡವು ಕಲಬುರಗಿ ನಗರದ ಗುಲ್ಬರ್ಗ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸೆಸ್(ಜಿಮ್ಸ್) ಆಸ್ಪತ್ರೆಯಲ್ಲಿ ಜನ್ಮದಿನಾಚರಣೆಯ ಅಂಗವಾಗಿ ರೋಗಿಗಳಿಗೆ ಮಧ್ಯಾಹ್ನದ ಊಟವನ್ನು ವಿತರಿಸುವರು. ಬೋಧಕ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಇನ್ನೊಂದು ತಂಡವು ನಗರ ಮತ್ತು ಹೊರವಲಯದಲ್ಲಿರುವ ಕನಿಷ್ಠ ಮೂರು ಗೋಶಾಲೆಗಳಿಗೆ ಭೇಟಿ ನೀಡಿ ಈ ಗೋಶಾಲೆಗಳಲ್ಲಿ ಆಶ್ರಯ ಪಡೆದಿರುವ ಗೋವುಗಳಿಗೆ ಆಹಾರವನ್ನು ನೀಡಲಿದ್ದಾರೆ.

ಗೋದುತಾಯಿ ಮಹಿಳಾ ಪದವಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ನಗರದ ಮಹಾತ್ಮಗಾಂಧಿ ಕುಷ್ಠರೋಗ ಕಾಲೋನಿಯ ನಿವಾಸಿಗಳೊಂದಿಗೆ ಒಂದು ದಿನ ಕಳೆದು ಕುಷ್ಠರೋಗ ಪೀಡಿತರಿಗೆÀ ಹಾಗೂ ರೋಗದಿಂದ ಗುಣಮುಖರಾದವರಿಗೆ ಕಂಬಳಿ, ಬಟ್ಟೆ ವಿತರಿಸುವರು. ಜನ್ಮದಿನಾಚರಣೆಯ ಅಂಗವಾಗಿ ಬಡಾವಣೆಯ ಎಲ್ಲಾ ನಿವಾಸಿಗಳಿಗೂ ಮಧ್ಯಾಹ್ನದ ಊಟವನ್ನು ವಿತರಿಸುವರು.
ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಬಸವೇಶ್ವರ ಆಸ್ಪತ್ರೆಗೆ ಭೇಟಿ ನೀಡಿ ಜನ್ಮದಿನಾಚರಣೆಯ ಅಂಗವಾಗಿ ಎಲ್ಲಾ ಒಳರೋಗಿಗಳಿಗೆ ಮಧ್ಯಾಹ್ನದ ಊಟವನ್ನು ವಿತರಿಸುವರು ಹಾಗೂ ನಗರದ ಸರ್ಕಾರಿ ಅಂಧ ಮಕ್ಕಳ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಹಣ್ಣು ಹಂಪಲು ವಿತರಿಸುವರು.

ಶರಣಬಸವ ವಿಶ್ವವಿದ್ಯಾಲಯದ ಪ್ರವಾಸೋದ್ಯಮ ವಿಭಾಗವು ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸುತ್ತಿದೆ ಮತ್ತು ಜನ್ಮದಿನಾಚರಣೆಯ ಅಂಗವಾಗಿ ಎಲ್ಲಾ ವಿದ್ಯಾರ್ಥಿಗಳಿಗೆ ನೇತ್ರದಾನ ಪ್ರತಿಜ್ಞೆಯನ್ನು ನಡೆಸಲಾಗುತ್ತದೆ. ಇತರ ಕಾಲೇಜುಗಳೂ ಹುಟ್ಟುಹಬ್ಬದ ಅಂಗವಾಗಿ ವಿದ್ಯಾರ್ಥಿಗಳಿಗೆ ವಿಶೇಷ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಸ್ಪರ್ಧೆಗಳನ್ನು ಆಯೋಜಿಸುತ್ತಿವೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here