ಬಂಡಾಯ ಸಾಹಿತ್ಯ ಸಂಘಟನೆ | “ಒಡಲ ದನಿ” ಕವಿಗೋಷ್ಠಿ

0
16

ಕಲಬುರಗಿ: ನಗರದ ಕನ್ನಡ ಭವನದಲ್ಲಿ ಬಂಡಾಯ ಸಾಹಿತ್ಯ ಸಂಘಟನೆ ಜಿಲ್ಲಾ ಘಟಕದ ವತಿಯಿಂದ “ಒಡಲ ದನಿ” ಕವಿಗೋಷ್ಠಿಯನ್ನು ಹಮ್ಮಿಕೊಳ್ಳಲಾಯಿತು.

ವಿಜ್ಞಾನಿಗಳಾದ ರಮೇಶ್ ಲಂಡನಕರ್ ಅವರು ಭಾರತ ಸಂವಿಧಾನದ ಪೂರ್ವ ಪೀಠಿಕೆ ಓದುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಬಂಡಾಯ ಸಾಹಿತ್ಯ ಸಂಘಟನೆಯ ಮೂಲಕ ಇಂದಿನ ಯುವ ಪೀಳಿಗೆ ಹೊಸ ವೈಚಾರಿಕ ಚಿಂತನೆಗಳನ್ನು ಸಾಮಾಜಿಕ ಮೌಲ್ಯವನ್ನು ಎತ್ತಿ ಹಿಡಿಯುವ ಬರಹಗಳು ಮತ್ತು ಬರಹಗಾರರು ಸೃಷ್ಟಿಯಾಗಬೇಕಿದೆ. ಯಾವುದೋ ಪ್ರೇರತ ಶಕ್ತಿಗಳ ಕ್ರಿಯೆಗೆ ಪ್ರತಿಕ್ರಿಯೆ ಪ್ರತಿಕ್ರಿಯೆಸದೆ ಹೊಸ ವಿಚಾರ ಬಿತ್ತರಿಸುವ ದಾರಿಯನ್ನು ಪುನರ್ ವಿಮರ್ಶೆಗೆ ತೆಗೆದುಕೊಂಡು ಹೆಜ್ಜೆ ಇಡಬೇಕಾಗಿದೆ ಅಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಸಣ್ಣ ಸಿಂಗೆ ಮಾತನಾಡುತ್ತಾ ದಲಿತಗೋಷ್ಠಿಯನ್ನು ಇಡಬೇಕೆಂದು ಒತ್ತಾಯಿಸಿ ಬಂಡಾಯ ಚಳುವಳಿ ನಡೆಯಿತು.

ಬಂಡಾಯ ಸಾಹಿತ್ಯ ಸಂಘಟನೆಯ ಹುಟ್ಟು ಸಾಹಿತ್ಯ ಲೋಕಕ್ಕೆ ಒಂದು ಕ್ರಾಂತಿಕಾರಿ ಹೆಜ್ಜೆಯಾಗಿದೆ. ಹಲವು ವರ್ಷಗಳ ನಂತರ ಬಂಡಾಯದ ವೇದಿಕೆ ಮತ್ತೆ ಕಲ್ಬುರ್ಗಿಯಲ್ಲಿ ಕ್ರಿಯಾಶೀಲವಾಗಿದ್ದು ಅಭಿನಂದನಾರ್ಹವಾಗಿದೆ ಎಂದು ಮಾತನಾಡಿದರು. ಮುಖ್ಯ ಅತಿಥಿಗಳಾದ ಡಿ.ಎಮ್ ನದಾಫ್ ಅವರು ಕವಿತೆ ಓದುವ ಮೂಲಕ ಮಾತನಾಡಿದರು.

ಒಡಲ ದನಿಯ ಕವಿಗೋಷ್ಠಿಯಲ್ಲಿ ಪಿ ನಂದಕುಮಾರ್, ಭವಾನಿ ಪ್ರಸಾದ್, ರೇಣುಕಾ ಹೇಳುವಾರ, ರವಿ ಕೊಳಕೂರ್, ಸಿದ್ದಪ್ಪ ಹೆಚ್ ಎಂ, ಶಿವಕರಣ ಬಿರಾದಾರ್, ಲೋಕೇಶ್ ಪೂಜಾರಿ, ಕವಿತಾ ಹಿರಾಪುರ, ರಾಹುಲ್ ಕಟ್ಟಿ, ಬಿ ಎಂ ರಾವ್ ಕವಿತೆ ವಾಚಿಸಿದರು. ದತ್ತಾತ್ರೇಯ ಇಕ್ಕಳಕಿ, ಸುರೇಶ ಬಡಿಗೆರ, ಧರ್ಮಣ್ಣ ಕೊಣೇಕರ್, ಅಕ್ಷತಾ ನೆಲ್ಲೂರ,ನಾಗಮೂರ್ತಿ ಶಿಲವಂತ,  ದಿಲೀಪ್ ಕಾಯಂಕರ, ಸಂಜುಕುಮಾರ ಲಂಡನಕರ ಇದ್ದರು. ಮಹಂತೇಶ್ ನವಲಕಲ್ ಅವರು ಅಧ್ಯಕ್ಷತೆ ವಹಿಸಿಕೊಂಡರು ಕೈಲಾಶ್ ದೋಣಿ ಸ್ವಾಗತಿಸಿದರು ವೆಂಕಟೇಶ ಕೊಲ್ಲಿ ನಿರೂಪಿಸಿದರು ಬಂಡಾಯ ಸಾಹಿತ್ಯ ಸಂಘಟನೆಯ ಸಂಚಾಲಕಿ ಅಶ್ವಿನಿ ಮದನಕರ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here