ಸಂಭ್ರಮದ ಹಳಕರ್ಟಿ ಶ್ರೀವೀರಭದ್ರೇಶ್ವರ ರಥೋತ್ಸವ

0
27

ವಾಡಿ: ಸುಕ್ಷೇತ್ರ ಹಳಕರ್ಟಿ ಶ್ರೀವೀರಭದ್ರೇಶ್ವರ ರಥೋತ್ಸವ ರವಿವಾರ ಸಂಜೆ ಸಾವಿರಾರು ಭಕ್ತರ ಮಧ್ಯೆ ಸಂಭ್ರಮದಿಂದ ನಡೆಯಿತು‌. ಜಿಲ್ಲೆ ಸೇರಿದಂತೆ ರಾಜ್ಯದ ವಿವಿದೆಡಿಯಿಂದ ಆಗಮಿಸಿದ ಭಕ್ತರು ತೇರಿಗೆ ಉತ್ತತ್ತಿ ಮತ್ತು ಬಾಳೆ ಹಣ್ಣು ಎಸೆದು ಹರಕೆ ತೀರಿಸಿದರು.

ಸಂಪ್ರದಾಯದಂತೆ ಗ್ರಾಮದ ಶ್ರೀಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ವಗ್ಗಯ್ಯಗಳಿಂದ ಕಳ್ಳ ಸರಪಳಿ ಹರಿಯುವ ಕಾರ್ಯಕ್ರಮ ನಡೆಯಿತು. ಸರಪಳಿ ಹರಿದ ವಗ್ಗಯ್ಯಗಳಿಗೆ ದೇವಸ್ಥಾನ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ನಂತರ ಕುಂಬ ಮೆರವಣಿಗೆ ಹಾಗೂ ಭಕ್ತೀಯ ಚೌಡಮ್ಮ ದೇವಿ ಆಡುವಿಕೆ ನೆರೆದ ಜನರ ಭಕ್ತಿ ಇಮ್ಮಡಿಗೊಳಿಸಿತು.

Contact Your\'s Advertisement; 9902492681

ಕಟ್ಟಿಮನಿ ಹಿರೇಮಠದ ಪೀಠಾಧಿಪತಿ ಪೂಜ್ಯ ಶ್ರೀಮುನೀಂದ್ರ ಸ್ವಾಮೀಜಿ ಅವರು ಶ್ರೀವೀರಭದ್ರೇಶ್ವರ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ ರಥ ಇರುವ ಸ್ಥಳಕ್ಕೆ ಆಗಮಿಸಿದರು. ಜಾತ್ರೆಯ ಪ್ರತೀತಿಯಂತೆ ಹತ್ತಕ್ಕೂ ಹೆಚ್ಚು ಜನ ಅರ್ಚಕರ ಸಹಕಾರದಡಿ ರಥಕ್ಕೂ ಪೂಜೆ ನೆರವೇರಿಸಿದರು. ನಂತರ ಶ್ರೀಗಳು ರಥ ಪ್ರವೇಶ ಮಾಡಿದ ಬಳಿಕ ಶಂಖ ನಾದ ಮೊಳಗಿತು. ಭಕ್ತರು ಜಯಘೋಷ ಮೊಳಗಿಸುತ್ತ ತೇರು ಎಳೆದರು. ರಥೋತ್ಸವದ ನಂತರ ದೇವಸ್ಥಾನದಲ್ಲಿ ವಿವಿಧ ಗಣ್ಯರನ್ನು ಸನ್ಮಾನಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here