ಕನ್ನಡ ಸಾಹಿತ್ಯ ಸಂಘದ ಸಹಸ್ರ ಚಂದ್ರಮಾನೋತ್ಸವ | ಮೂರು ಕೃತಿಗಳ ಬಿಡುಗಡೆ

0
21

ಸುರಪುರ: ಇಲ್ಲಿಯ ಕನ್ನಡ ಸಾಹಿತ್ಯ ಸಂಘದ 80ನೇ ವರ್ಷದ ಸಹಸ್ರ ಚಂದ್ರಮಾನೋತ್ಸವ ಹಾಗೂ ರಾಜ್ಯೋತ್ಸವದ ಅಂಗವಾಗಿ ಸಂಘದಿಂದ ಪ್ರಕಟಿಸಲಾದ ಮೂರು ಕೃತಿಗಳ ಬಿಡುಗಡೆ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕಲಬುರ್ಗಿಯ ಪತ್ರಕರ್ತ ಮಹಿಪಾಲರಡ್ಡಿ ಮುನ್ನೂರ ಮಾತನಾಡಿ,ರಾಜ್ಯದಲ್ಲಿಯೇ ಅತ್ಯಂತ ಹಳೆಯ ಸಂಘಟನೆಗಳಲ್ಲಿ ಸುರಪುರದ ಕನ್ನಡ ಸಾಹಿತ್ಯ ಸಂಘ ರಾಜ್ಯದಲ್ಲಿ ಎರಡನೇ ಸಂಘಟನೆ ಎನ್ನುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.ಅಲ್ಲದೆ ಹಿಂದೆ ನಿಜಾಮರ ಆಳ್ವಿಕೆ ಸಂದರ್ಭದಲ್ಲಿಯೂ ಕನ್ನಡವನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಿದ ಸಂಘದ ಕಾರ್ಯ ಹಾಗೂ ಇಲ್ಲಿಯ ಅರಸರು ಕೂಡ ಕನ್ನಡ ನಾಡು ನುಡಿಯ ಬೆಳವಣಿಗೆಗೆ ನೀಡಿದ ಕೊಡುಗೆ ಅಮೋಘವಾಗಿದೆ ಎಂದರು.

Contact Your\'s Advertisement; 9902492681

ಅಲ್ಲದೆ ಸಂಘದ ಬೆಳವಣಿಗೆಯಲ್ಲಿ ದಿ:ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕರ ಕೊಡುಗೆ ದೊಡ್ಡದಿದೆ ಅದನ್ನು ಇಂದು ಬಸವರಾಜ ಜಮದ್ರಖಾನಿಯವರು ಮುಂದುವರೆಸಿಕೊಂಡು ಹೋಗುತ್ತಿರುವುದು ಅಭಿಮಾನದ ಸಂಗತಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಖ್ಯಾತ ಅಂಕಣಕಾರ ಮಲ್ಲಿಕಾರ್ಜುನ ಕಡಕೋಳ ಗೋಪಣ್ಣ ಯಾದವ್ ಅವರ ಹೆಬ್ಬಂಡೆಯ ಮೇಲೆ ಹೆಜ್ಜೆ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿ,ಇಂದು ಅನೇಕ ಸಾಹಿಥಿಗಳು ಭಟ್ಟಂಗಿತನಕ್ಕೆ ನಿಂತಿದ್ದಾರೆ ಪ್ರಶಸ್ತಿಗಳಿಗಾಗಿ ಲಾಭಿ ನಡೆಸುವ,ತಾವೇ ಹಣ ಕೊಟ್ಟು ಕಾರ್ಯಕ್ರಮ ಮಾಡಿಸಿ ಸನ್ಮಾನ ಮಾಡಿಸಿಕೊಳ್ಳುವಂತ ಸಾಹಿತಿಗಳು ಹೆಚ್ಚಾಗುತ್ತಿದ್ದಾರೆ.ಸಾಹಿತಿಯಾದವನು ಯಾವುದಕ್ಕೂ ಹೆದರದೆ ಇರುವುದನ್ನು ನೇರವಾಗಿ ಹೇಳು ಛಾತಿ ಬೆಳೆಸಿಕೊಳ್ಳ ಬೇಕು ಎಂದರು.ರಾಜ್ಯದಲ್ಲಿ ಎರಡು ಜಾತಿಗಳಾದ ಲಿಂಗಾಯತ ಮತ್ತು ಒಕ್ಕಲಿಗ ಗೌಡ್ರ ರಾಜಕಾರಣ ನೋಡುತ್ತೇವೆ,ಅದಕ್ಕಿಂತಲೂ ಸಾಹಿತಿಕ ರಾಜಕಾರಣ ಇನ್ನಷ್ಟು ಡೇಂಜರಾಗಿದೆ ಎಂದರು.

ನಂತರ ಪಾರ್ವತಿ ದೇಸಾಯಿಯವರ ಭಾವ ಬಾಂದಳ ಕೃತಿಯನ್ನು ಬಿಡುಗಡೆಗೊಳಿಸಿ ಕಲಬುರ್ಗಿಯ ಸಾಹಿತಿ ಸಂಧ್ಯಾ ಹೊನಗುಂಡಿಕರ್ ಹಾಗೂ ಶ್ರೀನಿವಾಸ ಜಾಲವಾದಿಯವರ ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕ ಕೃತಿ ಬಿಡುಗಡೆಗೊಳಿಸಿ ಬಾಗಲಕೋಟೆಯ ಸಾಹಿತಿ ಡಾ:ಪ್ರಕಾಶ ಖಾಡೆ ಮಾತನಾಡಿದರು.ನಂತರ ಕೃತಿ ರಚನಾಕಾರರಾದ ಗೋಪಣ್ಣ ಯಾದವ್,ಪಾರ್ವತಿ ದೇಸಾಯಿ ಹಾಗೂ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಸಂಘದ ಉಪಾಧ್ಯಕ್ಷ ಜೆ.ಅಗಷ್ಟಿನ್ ಮಾತನಾಡಿದರು.

ಇದೇ ಸಂದರ್ಭದಲ್ಲಿ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಮಾರ್ಗದರ್ಶಿ ಮಂಡಳಿಯ ಸಲಹೆಗಾರರಾಗಿ ನೇಮಕಗೊಂಡ ಶ್ರೀನಿವಾಸ ಜಾಲವಾದಿಗೆ ಹಾಗೂ ಇಬ್ಬರು ಕೃತಿ ರಚನೆ ಕಾರರಿಗೆ ಸನ್ಮಾನಿಸಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಬಸವರಾಜಪ್ಪ ನಿಷ್ಠಿ ದೇಶಮುಖ,ಸುರಪುರ ಕಸಾಪ ಅಧ್ಯಕ್ಷ ಶರಣಬಸಪ್ಪ ಯಾಳವಾರ,ಹುಣಸಗಿ ಕಸಾಪ ಅಧ್ಯಕ್ಷ ವೆಂಕಟಗಿರಿ ದೇಶಪಾಂಡೆ,ಬಸವರಾಜ ಮೇಲಿನಮನಿ,ಮಹೇಶ ಯಾದವ್,ನಿಂಗಣಗೌಡ ದೇಸಾಯಿ,ವೀರಣ್ಣ ಕಲಕೇರಿ,ಎ.ಕಮಲಾಕರ,ದೇವಿಂದ್ರಪ್ಪ ಕುಂಬಾರ,ಪ್ರಕಾಶ ಚಂದ್ ಜೈನ್,ಸತ್ಯನಾರಾಯಣ ಅಲ್ದರ್ತಿ,ಮಹಾಂತೇಶ ಗೋನಾಲ,ಕನಕಪ್ಪ ವಾಗಣಗೇರ,ಕುಮಾರಸ್ವಾಮಿ ಗುಡ್ಡಡಗಿ,ಗಿರಿಯಪ್ಪ ಕಿರಸೂರ,ಜ್ಯೋತಿ ದೇವಣಗಾಂವ್,ಜಯಲಲಿತಾ ಪಾಟೀಲ್ ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.ಉಪನ್ಯಾಸಕ ದೇವು ಹೆಬ್ಬಾಳ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಸಾಹಿತ್ಯಕ್ಕೆ ಬೆಂಗಳೂರು ಭಾಗಕ್ಕೆ ಸರಕಾರ ಹೆಚ್ಚು ಒತ್ತು ನೀಡುತ್ತಿದೆ ಇದು ಸರಿಯಲ್ಲ,ಬೆಂಗಳೂರು ಭಾಗದಂತೆ ಈ ಭಾಗಕ್ಕೂ ಪ್ರತಿಷ್ಠಾನ ನೀಡುವ ಮೂಲಕ ಸರಕಾರ ಸಾಹಿತ್ಯದ ಬೆಳವಣಿಗೆಗೆ ಒತ್ತು ನೀಡಬೇಕು.ರಾಜ್ಯದಲ್ಲಿ ಸುರಪುರ ಕನ್ನಡ ಸಾಹಿತ್ಯ ಸಂಘ ಎರಡನೇಯದಲ್ಲ ಮೂರನೇಯ ಸಂಘವಾಗಿದೆ-ಮಲ್ಲಿಕಾರ್ಜುನ ಕಡಕೋಳ ಸಾಹಿತಿ ಅಂಕಣಕಾರ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here