ತೊಗರಿ ಒಣ ನೆಟೆ ಸೊರಗು ರೋಗ | ರೈತರು ವಹಿಸಬೇಕಾದ ಮುನ್ನೆಚ್ಚರಿಕೆಗಳೇನು?

0
292

ಕಲಬುರಗಿ: ಜಿಲ್ಲೆಯ ವಿವಿಧತಾಲೂಕಿನಲ್ಲಿತೊಗರಿಯು ಒಣ ಬೇರು ನೆಟೆರೋಗದಿಂದರೋಗ ಹೆಚ್ಚಾಗುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಭೂಮಿಯಲ್ಲಿತೇವಾಂಶಕಡಿಮೆಯಾಗಿ, ಭೂಮಿ ಬಿರುಕಾಗುರಿತ್ತಿರುವುದರಿಂದ, ವಾತಾವರಣದ ಕಡಿಮೆ ಆರ್ದತೆ, ಬೀಸುತ್ತಿರುವ ಮೂಲಿ ಗಾಳಿ ಹಾಗೂ ಹವಾಮಾನ ವೈಪರೀತ್ಯದಿಂದ ಭೂಮಿಯ ಮೇಲ್ಭಾಗz Àತೇವಾಂಶ ಕಡಿಮೆಯಾಗಿ ಗಿಡಗಳ ಕಾಯಿ ಕಟ್ಟುವಿಕೆ, ಬಲಿಯುವಿಕೆ ಹಾಗೂ ಬೆಳವಣಿಗೆಗೆ ವ್ಯಾಪಕ ಹಾನಿಯಾಗುತ್ತಿದೆ.

ಈ ವರ್ಷ 1125 ಮಿ.ಮೀ ಮಳೆಯಾಗಿದ್ದರೂ ಪ್ರಸ್ತುತ ಸನ್ನಿವೇಶದಲ್ಲಿ ಮಳೆಯಾಶ್ರಿತ ಕಪ್ಪು ಭೂಮಿಯಲ್ಲಿರುವ ಮೇಲ್ಭಾಗದ ತೇವಾಂಶ ಕಡಿಮೆಯಾಗಿ ತೊಗರಿ ವಾರದೊಳಗೆ ಸೊರಗಿ ಸಾಯುತ್ತಿದೆ. ಬೇರು, ಕಾಂಡ ಹಾಗೂ ಟೊಂಗೆಗಳಲ್ಲಿ ಕಂದು ಬಣ್ಣಕ್ಕೆತಿರುಗಿ ಬೆಳೆಯು ಕಟಾವು ಹಂತಕ್ಕೆ ಸಮೀಪಿಸಿದಂತೆ ಕಾಣುತ್ತದೆ.ಮೇಲ್ಭಾಗದ ಕಾಯಿ ಜೊಳ್ಳಾಗುವಿಕೆ ಕಂಡುಬಂದಿದೆ.

Contact Your\'s Advertisement; 9902492681

ಹೂ ಹಂತದಲ್ಲಿಚೆನ್ನಾಗಿದ್ದ ಬೆಳೆಯು ಹೆಚ್ಚಿನ ಮಳೆಯ ನಂತರ ಭೂಮಿಯಲ್ಲಿ ಪೋಷಕಾಂಶ ಸತ್ವಕಡಿಮೆಯಾಗಿರೋಗಕ್ಕೆತುತ್ತಾಗುತ್ತಿವೆ. ನವ್ಹೆಂಬರ್‍ನಲ್ಲಿ ಬದಲಾದ ಹವಾಮಾನ 50-54% ಕುಸಿದ ಆರ್ದತೆ ಏರುತ್ತಿರುವ ಮಧ್ಯಾನ್ಹದ ತಾಪಮಾನ ರೋಗ ಉಲ್ಬಣಗೊಳ್ಳಲು ಸಹಾಯಕವಾಗಿದೆ.

ರೈಜಾಕ್ಟೋನಿಯಾ ಮಣ್ಣಿನ ಶಿಲೀಂದ್ರ ಆಹಾರ ಸರಬರಾಜು ಮಾಡುವ ಸಸ್ಯ ಬೇರುಗಳಿಗೆ ಧಕ್ಕೆ ಮಾಡಿರುವುದರಿಂದಗಿಡದಲ್ಲಿ ಪೋಷಕಾಂಶ ಸರಬರಾಜುಏರುಪೇರಾಗುತ್ತಿದೆ. ಮುಂಗಾರಿನಆರಂಭದಲ್ಲಿ ಫೈಟಾಪ್ತರಾ ಶಿಲೀಂದ್ರಕ್ಕೆ ತುತ್ತಾದ ಹೊಲಗಳನ್ನು 50 % ರೈತರುಎರಡರಿಂದ ಮೂರು ಸಲ ಎಡೆಹೊಡೆದುಅಂತರ ಬೇಸಾಯಕೈಗೊಂಡು, ಹೂ ಮತ್ತು ಮೊಗ್ಗು ಉದರದಂತೆ ಪಲ್ಸ ಮ್ಯಾಜಿಕ ಹಾಗೂ ಕಾರ್ಬನ್‍ಡೈಜಿಮ್ ಸಿಂಪರಣೆ ಮಾಡಿರುತ್ತಾರೆಎಂದು ಕೆ.ವಿ.ಕೆ ಯ ಮುಖ್ಯಸ್ಥರಾದ ಡಾ. ರಾಜು ತೆಗ್ಗಳ್ಳಿ ಹಾಗೂ ಸಸ್ಯರೋಗತಜ್ಞರಾದ ಝಹೀರ ಅಹಮ್ಮದ್ ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಒಣಬೇರು, ಒಣಕಾಂಡರೋಗದಿಂದ ಗಿಡಗಳು ಅಲ್ಲಲ್ಲಿ ವ್ಯಾಪಕವಾಗಿ ಒಣಗುತ್ತಿರುವುದುಕಂಡು ಬಂದಿದೆ. ಈ ಹಂತದಲ್ಲಿ ಭೂಮಿಯಿಂದ ಬರುವರೋಗಕ್ಕೆ ಜೈವಿಕ ಹಾಗೂ ರಾಸಾಯನಿಕ ಸಿಂಪರಣಾ ಚಿಕಿತ್ಸೆಗಳು ಕಷ್ಟಕರ. ರೈತರು ಸಮಗ್ರರೋಗ ಹತೋಟಿ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಅಳವಡಿಸಿಕೊಳ್ಳಬೇಕು. ಫಿಜೇರಿಯಂ ಮತ್ತು ಮ್ಯಾಕ್ರೋಪೋಮಿನಾ ರೈಜಾಕ್ಟೋನಿಯಾ, ಶಿಲೀಂದ್ರಗಳು, ಒಣಸನ್ನಿವೇಶದಲ್ಲಿ ಹೆಚ್ಚಾಗಿ ಕಂಡು ಬಂದಿದ್ದು, ಗಿಡಒಣಗುವಿಕೆಗೆ ಕಾರಣವಾಗಿದೆ. ಮಂಜಿನ ದಿನಗಳಲ್ಲಿ, ಉತ್ತರ ಭಾಗದಿಂದ ಬೀಸುತ್ತಿರುವ ಗಾಳಿಯ ಸನ್ನಿವೇಶದಲ್ಲಿ ಮೇಲ್ಪದರದ ಮಣ್ಣಿನ ತೇವಾಂಶದ ಕುಸಿವುತ್ತಿದೆ. ಗಿಡಗಳಲ್ಲಿ ಎಲೆಗಳು ಒಣಗಿರುವ ಚಿನ್ಹೆಗಳು ಕಾಣಿಸುತ್ತಿವೆ.

ಮಣ್ಣು ಪರೀಕ್ಷೆ ಆದರಿಸಿ ಮುಖ್ಯ ಮತ್ತು ಲಘು ಪೋಷಕಾಂಶಗಳನ್ನು ಕೊಡುವುದು .ಭೂಮಿಗೆ ಸಾಕಷ್ಟು ಸಾವಯವ ಗೊಬ್ಬರಗಳನ್ನು ಸೇರಿಸಿವುದು .ಟ್ರೈಕೋಡರ್ಮಾಜೈವಿಕ ಶಿಲೀಂದ್ರ ನಾಶಕವನ್ನು ಬೀಜಕ್ಕೆ ಹಾಗೂ ಭೂಮಿU Éಉಪಚರಿಸುವುದು.ತೊಗರಿ ನಾಟಿಗೆ ಮುಂಚೆ ಹಸಿರೆಲೆ ಗೊಬ್ಬರ ಸೆಣಬನ್ನು ಭೂಮಿಗೆ ಸೇರಿಸಿವುದು.ಬೀಜೋಪಚಾರ ಔಷಧಿಗಳಾದ ಟೆಬುಕೊನಜಾಲ್ 1 ಗ್ರಾಂ ಅಥವಾ ಕ್ಯಾಪ್ಟಾನ್+ಹೆಕ್ಜಾಕೊನಜಾಲ್ 2ಮಿಲಿ ಅಥವಾ ಟ್ರೈಕೋಡರ್ಮಾಜೈವಿಕ 10 ಗ್ರಾಂ ಅಥವಾ ಕಾರ್ಬನ್‍ಡೈಜಿಮ್ ಹಾಗೂ ಮ್ಯಾಂಕೊಜೆಬ್ 2ಗ್ರಾಂ ಸಂಯುಕ್ತ ಶಿಲೀಂದ್ರನಾಶಕವನ್ನು ಬೀಜೋಪಚರಿಸುವುದು ಹಾಗೂ ರೋಗ ಕಂq Àತಕ್ಷಣನೇ ಕಾಂಡ ಮತ್ತು ಬೇರು ಬಡ್ಡೆ ಭಾಗ ನೆನೆಯುವಂತೆ ಸಿಂಪಡಿಸುವುದು.ಬೆಳೆಯ ನಿಗದಿತ ಹಂತದಲ್ಲಿ ಭೂಮಿ ಬಿರುಕಾದಂv ಎಡೆಹೊಡೆದು ಅಂತರ ಬೇಸಾಯ ಮಾಡುವುದು. ನೀರಾವರಿ ರೈತರು ಮಣ್ಣಿನ ಗುಣಧರ್ಮ ಹಾಗೂ ತಳಿಯ ಅವಧಿ ನೋಡಿಕೊಂಡುರಕ್ಷಣಾತ್ಮಕ ನೀರು ಕಾಯಿಯ ಆರಂಭದ ಹಂತದಲ್ಲಿ ನೀಡುವುದು.

ಭೂಮಿ ಬಿರುಕಾಗಿದ ತಕ್ಷಣನೇ ಗಿಡ ಒಣಗಿ ಬಾರಿಗೆ ಕಡ್ಡಿಯಾದಂತೆ ಒಣಗುತಿದೆ.ನೋಡು ನೋಡುತ್ತಿದಂತೆಯೇ ಇಳುವರಿ ಹಂತದಲ್ಲಿ ಈ ರೋಗ ಕಂಡುಬಂದಿದ್ದು ಆಶ್ಚರ್ಯಕರವಾಗಿದೆ. -ಚಂದ್ರಕಾಂತ ಅಷ್ಟಗಿ ಕಲಬುರಗಿ
ಈ ವರ್ಷಉತ್ತಮ ಮಳೆಯಾದರೂ ಕೊನೆಯ ಹಂತದಲ್ಲಿತೊಗರಿ ಕಾಯಿ ರಚನೆ ವೇಳೆ ಒಣ ನೆಟೆಆರಂಭವಾಗಿರುವುದರಿಂದಕಾಯಿಯ ಒಳಗಡೆ ಬೀಜದ ಗಾತ್ರ ಏರುಪೆರು ಆಗುವ ಸಾಧ್ಯತೆಇದೆ. ಮಳೆಯಾಶ್ರಿತ ತೊಗರಿಯಲ್ಲಿ ಈ ವ್ಯತ್ಯಯ ಕಂಡುಬಂದಿದೆ. – ಡಾ. ಎಸ್. ಕೆ.ಜಯಲಕ್ಷ್ಮಿ, ಸಸ್ಯರೋಗ ಮುಖ್ಯ ಪ್ರಾಧ್ಯಾಪಕರು, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here