ಚಿತ್ತಾಪುರ:ಇಂದಿನ ವಿದ್ಯಾರ್ಥಿಗಳು ಮುಂದಿನ ಭವ್ಯ ಭಾರತದ ಸತ್ ಪ್ರಜೆಗಳು ಎಂದು ಸಂಸ್ಥೆಯ ಅಧ್ಯಕ್ಷ ಜಗದೇವ ದಿಗ್ಗಾಂವಕರ್ ಹೇಳಿದ್ದಾರೆ.
ಪಟ್ಟಣದ ಪ್ರಾರ್ಥನಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೋಮವಾರ ಮಕ್ಕಳ ದಿನಾಚರಣೆಯ ಕಾರ್ಯಕ್ರಮದಲ್ಲಿ ಬಾಗವಹಿಸಿ ಮಾತನಾಡಿದ ಅವರು ದೇಶಕ್ಕೆ ನಮ್ಮದೇ ಆದ ಕೊಡುಗೆ ನೀಡಬೇಕು.ನಾವು ಒಳ್ಳೆಯ ರೀತಿ ಓದಿ ನಮ್ಮ ದೇಶಕ್ಕೆ ಒಳ್ಳೆಯ ಹೆಸರು ತರಬೇಕು ಎಂದು ಹೇಳಿದರು.
ಸಹಶಿಕ್ಷಕಿ ಸಿದೇಶ್ವರಿ ಪಾಟೀಲ್ ಮಾತನಾಡಿ ಚಾಚಾ ನೆಹರು ಅವರು ಮಕ್ಕಳ ಮೇಲೆ ಅತಿ ಹೆಚ್ಚು ಪ್ರಿಯನ್ನು ಹೊಂದುದ್ದರು ಅವರಿಗೆ ಮಕ್ಕಳೆಂದರೆ ಪಂಚ ಪ್ರಾಣ ಎಂದು ಹೇಳಿದರು.
ಶಿಕ್ಷಕಿ ಭಾಗ್ಯಜ್ಯೋತಿ ವಿಶ್ವಕರ್ಮ ಮಾತನಾಡಿದ ನೆಹರು ಅವರು ದೇಶದ ಮೊದಲ ಪ್ರಧಾನಮಂತ್ರಿಗಳು ಅವರ ಹೋರಾಟದ ಬದುಕು ಅವರ ಜೀವನವನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ವಿವಿಧ ಮನೋರಂಜನೆ ಕಾರ್ಯಕ್ರಮಗಳು ನಡೆದವು. ಮಕ್ಕಳ ದಿನಾಚರಣೆ ಅಂಗವಾಗಿ ವಿವಿಧ ಕ್ರೀಡೆಯಲ್ಲಿ ಭಾಗವಹಿಸಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮವನ್ನು ಶಿಕ್ಷಕಿ ಶಮೀಮ್ ಸ್ವಾಗತಿಸಿದರು.ಸುಶೀಲಾ ರಾಠೋಡ ನಿರೂಪಿಸಿದರು. ರೋಸ್ ಮೇರಿ ವಂದಿಸಿದರು.