ಕನ್ನಡ ಭಾಷೆ ಬಳಸಿದಷ್ಟು ಬೆಳೆಯುತ್ತದೆ

0
8

ಕಲಬುರಗಿ: ಕನ್ನಡ ಭಾಷೆ ನಾವು ಬಳಸಿದಷ್ಟು ಹೆಚ್ಚು ಬೆಳೆಯುತ್ತದೆ ಎಂದು ಪಿಡಿಎ ಇಂಜಿನಿರಿAಗ್ ಕಾಲೇಜಿನ ಸಿರಾಮಿಕ್ ಮತ್ತು ಸಿಮೆಂಟ್ ವಿಭಾಗದ ಮುಖ್ಯಸ್ಥ ಡಾ.ಬಾಬುರಾವ ಶೇರಿಕಾರ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಹಳೆ ಜೇವರ್ಗಿ ರಸ್ತೆಯ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ದಕ್ಷಿಣ ವಲಯ ಹಾಗೂ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಕನ್ನಡ ಸಾಹಿತ್ಯಕ್ಕೆ ಶರಣರ ಕೊಡುಗೆ ಕುರಿತ ವಿಶೇಷ ಉಪುನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅನ್ಯ ಭಾಷೆಗಳನ್ನು ಗೌರವಿಸಬೇಕು ಆದರೆ ಮಾತೃ ಭಾಷೆಯನ್ನು ಪ್ರೀತಿಸಬೇಕು ಎಂದ ಅವರು, ಸಮಾಜದಲ್ಲಿ ಮಾತೃಶಕ್ತಿ ದೊಡ್ಡದಾಗಿದೆ. ಮಹಿಳೆಯರಿಂದ ಮಾತ್ರ ಸಮಾಜ ಸುಧಾರಣೆ ಸಾಧ್ಯ. ಮಕ್ಕಳಿಗೆ ಸಂಸ್ಕಾರದ ಜತೆ ಕನ್ನಡ ನಾಡಿನ ಅಭಿಮಾನದ ಬೀಜ ಬಿತ್ತುವ ಕೆಲಸ ಮಾತೆಯರು ಮಾಡಬೇಕು ಎಂದು ಸಲಹೆ ನೀಡಿದರು.

Contact Your\'s Advertisement; 9902492681

ಕನ್ನಡ ಸಾಹಿತ್ಯಕ್ಕೆ ಶರಣರ ಕೊಡುಗೆ ಕುರಿತು ವಿಶೇಷ ಉಪನ್ಯಾಸ ನೀಡಿದ ಕಾಳಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಶಿವಶರಣಪ್ಪ ಮೋತಕಪಲ್ಲಿ, ಧರ್ಮವು ಸಮಾಜದ ಒಂದು ಭಾಗವಾಗಿದೆ. ಧಾರ್ಮಿಕ ಭಾವನೆಗಳೇ ಜೀವನ ರೂಪಿಸುತ್ತವೆ ಧರ್ಮತಪ್ಪಲ್ಲ. ಧರ್ಮದ ತತ್ವವೂ ತಪ್ಪಲ್ಲ ಆದರೆ ಧರ್ಮವನ್ನು ಅನುಷ್ಠಾನಕ್ಕೆ ತರುವಲ್ಲಿ ನಾವು ತಪ್ಪಿದ್ದೇವೆ ಎಂದರು.

ಧರ್ಮದ ನಿಜಾರ್ಥ ಶರಣರು ಜನ ಸಾಮಾನ್ಯರಿಗೆ ತಿಳಿಸಿಕೊಟ್ಟಿದ್ದಾರೆ. ಸೌಲಭ್ಯಗಳಿಲ್ಲದÀ ಅಂದಿನ ಸಂದರ್ಭದಲ್ಲಿ ಬಸವಣ್ಣನವರು ಶರಣರನ್ನು ಸಂಘಟಿಸಿದ್ದಾರೆ. ಮಹಿಳೆಯರಿಗೆ ಸ್ಥಾನ ಮಾನ ನೀಡಿದ್ದಾರೆ. ವಚನ ಸಾಹಿತ್ಯ ಜನಾಶಯ ಭಾಷೆಯಾಗಿದೆ ಸಮಾಜ ಪರಿವರ್ತನೆಯ ಉದ್ದೇಶದಿಂದ ಶರಣ ಸಾಹಿತ್ಯ ಹುಟ್ಟಿಕೊಂಡಿದೆ ಎಂದರು.

ರಾಜಾಶ್ರಯದಲ್ಲಿದ್ದ ಭಾಷೆಯನ್ನು ಸಾಮಾನ್ಯ ಜನರಿಗೆ ತಲುಪಿಸುವ ಕೆಲಸ ಶರಣರು ಮಾಡಿದ್ದಾರೆ. ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯ ಬಹುದೊಡ್ಡ ಕೊಡುಗೆ ನೀಡಿದೆ. ಮೂಢ ನಂಬಿಕೆ, ಕಂದಾಚಾರ ದಿಂದ ತುಂಬಿದ್ದ ಅಂದಿನ ಸಮಾಜವನ್ನು ಸುಧಾರಿಸಿದ ಕೀರ್ತಿ ವಚನ ಸಾಹಿತ್ಯಕ್ಕೆ ಸಲ್ಲುತ್ತದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ ದಕ್ಷಿಣ ವಲಯದ ಅಧ್ಯಕ್ಷ ಶಾಮಸುಂದರ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿ, ಪರಿಷತ್ತಿನ ಚಟುವಟಿಕೆ ಕುರಿತು ವಿವರಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ ಮುಖ್ಯ ಅತಿಥಿಯಾಗಿದ್ದರು. ಪ್ರಾಚಾರ್ಯೆ ಡಾ. ಶಮೀಮ್ ಸುಲ್ತಾನಾ ಅಧ್ಯಕ್ಷತೆ ವಹಿಸಿದ್ದರು.

ಕಸಾಪ ದಕ್ಷಿಣ ವಲಯದ ಗೌರವ ಕಾರ್ಯದರ್ಶಿಗಳಾದ ರವಿಕುಮಾರ ಶಹಾಪುರಕರ್, ಧನೇಶ ಮಾಲಗತ್ತಿ, ಮಹಿಳಾ ಪ್ರತಿನಿಧಿ ಜ್ಯೋತ್ಸನಾ ಹೇರೂರ, ಸಂಘಟನಾ ಕಾರ್ಯದರ್ಶಿ ಮಲ್ಲಿನಾಥ ಸಂಗಶೆಟ್ಟಿ, ಸಹ ಕಾರ್ಯದರ್ಶಿ ಶಿವಕುಮಾರ ಸಿ.ಎಚ್, ಹಿರಿಯ ಉಪನ್ಯಾಸಕಿ ಶೈಲಜಾ ಕೊಪ್ಪರ, ಉಪನ್ಯಾಸಕಿ ಪ್ರಿಯದರ್ಶನಿ, ರಾಜೇಂದ್ರ ಹೇರೂರ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ಘಟಕದ ಕಾರ್ಯದರ್ಶಿ ಮೀನಾಕ್ಷಿ ಸ್ವಾಗತಿಸಿದರು. ಕಸಾಪ ದಕ್ಷಿಣ ವಲಯದ ಮಹಿಳಾ ಪ್ರತಿನಿಧಿ ಮಂದಾಕಿನಿ ವಂದಿಸಿದರು. ಸಂಘಟನಾ ಕಾರ್ಯದರ್ಶಿ ಶಿವಯ್ಯ ಮಠಪತಿ ಕಾರ್ಯಕ್ರಮ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here