ಉಚಿತ ಪಶು ಲಸಿಕಾ ಚಿಕಿತ್ಸಾ ಶಿಬಿರ

0
17

ಕಲಬುರಗಿ: ಕಾಳಗಿ ತಾಲೂಕಿನ ಸುಂಠಾಣಗ್ರಾಮದಲ್ಲಿ ಐಸಿಎಆರ್-ಕೃಷಿ ವಿಜ್ಞಾನಕೇಂದ್ರ, ಕಲಬುರಗಿ, ಪಶುಸಂಗೋಪನಾ ಇಲಾಖೆ, ಕಲಬುರಗಿ ಹಾಗೂ ಅಲಂಬಿಕ್ ಫಾರ್ಮ ಕಂಪನಿ ಇವರ ಸಹಯೋಗದಲ್ಲಿಉಚಿತ ಪಶು ಲಸಿಕಾ ಹಾಗೂ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.ಶಿಬಿರದಲ್ಲಿ 460 ದನಗಳಿಗೆ ಹಾಗೂ 30 ಎಮ್ಮೆಗಳಿಗೆ ಕಾಲು ಮತ್ತು ಬಾಯಿ ರೋಗದ ವಿರುದ್ದ ಲಸಿಕೆ ಹಾಕಲಾಯಿತು.

ಈ ಶಿಬಿರದಲ್ಲಿ ಉಣ್ಣೆನಾಶಕ ಔಷಧಿಗಳನ್ನು ಜಾನುವಾರಗಳ ಮೇಲೆ ಬಳಸುವ ರೀತಿಯನ್ನುಪದ್ದತಿ ಪ್ರಾತ್ಯಕ್ಷಿಕೆ ಮುಖಾಂತರರೈತರಿಗೆ ಡಾ. ಮಂಜುನಾಥ ಪಾಟೀಲ್, ಪಶು ವಿಜ್ಞಾನಿ, ಕೆವಿಕೆ, ಕಲಬುರಗಿರವರು ತೋರಿಸಿಕೊಟ್ಟರು.

Contact Your\'s Advertisement; 9902492681

ಅಲಂಬಿಕ್ ಫಾರ್ಮ ಕಂಪನಿ ವತಿಯಿಂದ ಶ್ರೀ ಬಸವರಾಜ ವರ್ಮಾರವರು ಬೆದೆಗೆ ಬರುವ ಮಾತ್ರೆಗಳು, ಹಾಲಿನ ಹೆಚ್ಚಳಕ್ಕಾಗಿ ಲವಣ ಮಿಶ್ರಣ ಹಾಗೂ ಉಣ್ಣೆನಾಶಕ ಔಷಧಿಗಳನ್ನು ರೈತರಿಗೆ ವಿತರಿಸಿದರು. ಪಶುಸಂಗೋಪನಾ ಇಲಾಖೆಯ ಕೊಡ್ಲಿ ಪಶು ವೈದ್ಯಾಧಿಕಾರಿಗಳಾದ ಡಾ. ಸಂದೀಪ ಪಟವಾರಿಹಾಗೂ ಅವರತಂಡ ಕಾಲು ಮತ್ತುಬಾಯಿ ರೋಗದ ವಿರುದ್ದ ಜಾನುವಾರುಗಳಿಗೆ ಲಸಿಕೆ ಹಾಕಿದರು.

ಶಿಬಿರದ ನಂತರಡಾ.ಮಂಜುನಾಥ ಪಾಟೀಲ್, ಪಶು ವಿಜ್ಞಾನಿ, ಕೆವಿಕೆ, ಕಲಬುರಗಿರವರು ಕಾಲು ಮತ್ತು ಬಾಯಿ ರೋಗದ ಬಾದೆ ಹಾಗೂ ನಿಯಂತ್ರಣ ಕ್ರಮಗಳ ಬಗ್ಗೆ ರೈತರಿಗೆತರಬೇತಿ ನೀಡಿದರು.ಈ ಶಿಬಿರದÀಲ್ಲಿ ಸುಂಠಾಣಗ್ರಾಮದ ಪಂಚಾಯತ ಸದಸ್ಯರಾದ ಶ್ರೀ ಚಂದ್ರಕಾಂತ ಪೂಜಾರಿ, ಶ್ರೀ ಪ್ರೇಮಕುಮಾರ ಎಲಮಡಗಿ ಹಾಗೂ ಗ್ರಾಮದ ಮುSಂಡರಾದ ಶ್ರೀ ರೇವಶೇಟ್ಟಿ, ಶ್ರೀ ಯಂಕಪ್ಪಕೋರಿ, ಶ್ರೀ ಸೈಯದ ಪಟೇಲ್, ಶ್ರೀ ಇಸ್ಮಾಯಿಲ್‍ಖಾನ್ ಮತ್ತುಇತರೆಗ್ರಾಮಸ್ಥರು ಭಾಗವಹಿಸಿ ಶಿಬಿರ ಯಶಸ್ವಿಗೊಳಿಸಿದರು.

ಕಾಲು ಬಾಯಿ ಜ್ವರವುಎಲ್ಲಾ ಸೀಳು ಗೊರಸುಳ್ಳ ಪ್ರಾಣಿಗಳಲ್ಲಿ (ಸಾಕು ಮತ್ತುಕಾಡು ಪ್ರಾಣಿಗಳು) ಅಂದರೆದನ, ಎಮ್ಮೆ, ಹಂದಿ, ಮೇಕೆಗಳು ಹಾಗೂ ಕಾಡು ಪ್ರಾಣಿಗಳಾದ ಆನೆ, ಜಿಂಕೆ, ಕಾಡೆಮ್ಮೆ, ಮತ್ತುಇತರೆ ಪ್ರಾಣಿಗಳಲ್ಲಿ ವೈರಾಣುಗಳಿಂದ ಬರುವಒಂದು ಕಾಯಿಲೆ. ಈ ರೋಗವು ಸಾಂಕ್ರಾಮಿಕರೋಗವಾಗಿದ್ದು, ಅತೀ ಬೇಗ ಒಂದು ರಾಸಿನಿಂದ ಇನ್ನೊಂದು ರಾಸಿಗೆ ನೇರ ಸಂಪರ್ಕ ಹಾಗೂ ಗಾಳಿಯ ಮೂಲಕ ಹರಡುತ್ತದೆ. ಈರೋಗವು ಪ್ರಾಣಾಂತಿಕಅಲ್ಲವಾದರು ಈ ರೋಗದಿಂದ ರಾಸುಗಳಲ್ಲಿ ನಿಶ್ಯಕ್ತಿ ಹೆಚ್ಚಿ ಹಾಲಿನ ಇಳುವರಿ ಕಡಿಮೆಯಾಗುತ್ತದೆ.ಈ ರೋಗದಿಂದರಾಷ್ಟ್ರಕ್ಕೆ ಪ್ರತಿ ವರ್ಷ ಸುಮಾರು 4,000 ಕೋಟಿರೂಪಾಯಿ ನಷ್ಟವಾಗುತ್ತಿದೆ.

ರೋಗದ ಲಕ್ಷಣಗಳು : ರೋಗಗ್ರಸ್ಥ ರಾಸುಗಳಲ್ಲಿ ಮೊದಲಿಗೆಜ್ವರಕಾಣಿಸುತ್ತದೆ (104-106ಎಫ್).ಮೇವು ತಿನ್ನುವುದನ್ನು ನಿಲ್ಲಿಸುತ್ತವೆ. ಹಾಲು ಕಡಿಮೆಯಾಗಿ, ಕಾಲು ಕುಂಟು ಬೀಳುತ್ತದೆ.ಬಾಯಿಯಲ್ಲಿಚಿಕ್ಕಚಿಕ್ಕ ನಿರ್ಗುಳ್ಳೆಗಳಾಗಿ ಕ್ರಮೇಣ ಈ ಗುಳ್ಳೆಗಳು ಒಡೆದುಜೊಲ್ಲು ಸುರಿಯುತ್ತದೆ.ಆಗಾಗ ನೋವಿನಿಂದ ಬಾಯಿ ಚಪ್ಪರಿಸುತ್ತದೆ.ಒಮೊಮ್ಮೆ ನಾಲಿಗೆಯ ಮೇಲೆ ಹುಣ್ಣು ಜಾಸ್ತಿಯಾಗಿ ಅದರ ಮೇಲಿನ ಪದರವೇಕಿತ್ತು ಬರುವುದು.ಬಾಯಿ ಹುಣ್ಣಿನಿಂದಾಗಿ ಮೇವು ತಿನ್ನಲಾರವು.ಕಾಲಿನ ಗೊರಸಿನ ಮದ್ಯೆ ಹುಣ್ಣುಗಳಾಗಿ ನೊಣಕೂತುಹುಳುಗಳಾಗುತ್ತವೆ. ಕೆಲವು ಹಸುಗಳಲ್ಲಿ ಕೆಚ್ಚಲಿನ ಮೇಲೆ ಗುಳ್ಳೆಗಳು ಕಾಣಿಸುತ್ತವೆ. ತುಂಬುಗರ್ಭದ ರಾಸುಗಳಲ್ಲಿ ಗರ್ಭಪಾತವಾಗುವ ಸಂಭವ ಹೆಚ್ಚು.ಸುಮಾರು 8 ರಿಂದ 12 ದಿನ ಅಪಾರ ವೇದನೆಯಿಂದ ರಾಸುಗಳು ನರಳುತ್ತವೆ. ನಂತರ ಬಾಯಿಯಲ್ಲಿನ ಹುಣ್ಣುಗಳು ಮಾಯತೊಡಗಿದಂತೆ ನಿಧಾನವಾಗಿ ಚೇತರಿಸಿಕೊಳ್ಳುತ್ತದೆ.ರೋಗಗ್ರಸ್ಥ ಕರುಗಳಲ್ಲಿ ಸಾವು ಉಂಟಾಗುತ್ತದೆ.
ರೋಗ ಹರಡುವ ವಿಧಾನ : ಕಾಲು ಬಾಯಿ ರೋಗವುಒಂದು ರಾಸಿಗೆ ಬಂದರೆ ಸಾಮಾನ್ಯವಾಗಿ ನೆರೆ ಹೊರೆಯಲ್ಲಿರುವಎಲ್ಲಾ ಪ್ರಾಣಿಗಳಿಗೂ ಹರಡುತ್ತದೆ.ಒಂದುರೋಗಗ್ರಸ್ಥ ರಾಸಿನ ಜೊಲ್ಲಿನಲ್ಲಿನ ರೋಗಾಣುಗಳು ಕಲುಷಿತಗೊಂಡ ಮೇವು ಮತ್ತು ನೀರಿನ ಮುಖಾಂತರ ಬೇರೆ ರಾಸುಗಳ ಜೊಲ್ಲಿನಲ್ಲಿ ಮಾತ್ರವಲ್ಲದೇ ಮೂತ್ರ, ಸಗಣಿ, ವೀರ್ಯ ಮತ್ತು ಹಾಲಿನ ಮುಖಾಂತರವೂ ಹರಡುತ್ತದೆ.ದನಗಳ ಜಾತ್ರೆಗಳಲ್ಲಿ ಕಾಣಿಸಿಕೊಂಡಲ್ಲಿ ಅತಿ ಬೇಗ ಒಂದು ರಾಸಿನಿಂದ ಇನ್ನೊಂದು ರಾಸಿಗೆ ಹರಡುತ್ತದೆ. ಕುರಿ, ಮೇಕೆ ಹಾಗೂ ಹಂದಿಗಳಲ್ಲಿ ದನದ ಮಾದರಿರೋಗದಲಕ್ಷಣಗಳು ಕಣ್ಣಿಗೆಕಂಡರೂತೀವ್ರತೆಕಡಿಮೆ. ಹಂದಿ ಮರಿಗಳ ಶೇ 90-95 ರಷ್ಟು ಸಾವು ಸಂಭವಿಸುತ್ತವೆ.
ಚಿಕಿತ್ಸಾ ಕ್ರಮಗಳು:
1. ರೋಗಕಂಡತಕ್ಷಣರೋಗಗ್ರಸ್ಥ ರಾಸುಗಳನ್ನು ಬೇರೆ ದನಗಳಿಂದ ಬೇರ್ಪಡಿಸಿ ಉಳಿದ ದನಗಳಿಗೆ ರೋಗ ಹರಡದಂತೆ ನೋಡಿಕೊಳ್ಳಬೇಕು. ರೋಗದಿಂದ ನರಳುತ್ತಿರುವ ರಾಸುಗಳಿಗೆ ಉತ್ತಮ ಮೇವು, ನೀರುಕೊಟ್ಟುಆರೈಕೆ ಮಾಡಬೇಕು.
2. ರೋಗಗ್ರಸ್ಥ ರಾಸುಗಳ ಕಾಲು, ಬಾಯಿ ಹುಣ್ಣನ್ನು ಶೇ 0.5ರಷ್ಟು ಸೋಡಿಯಂ ಬೈ ಕಾರ್ಬೋನೇಟ್ (ಅಡಿಗೆ ಸೋಡಾ) ದ್ರಾವಣದಿಂದ ದಿನಕ್ಕೆ ಮೂರು ಅಥವಾ ನಾಲ್ಕು ಬಾರಿ ಶುದ್ದಗೊಳಿಸಬೇಕು. ಜೇನುತುಪ್ಪವನ್ನು ಬಾಯಿಯ ಒಳಭಾಗಕ್ಕೆ ಸವರಬೇಕು.
3. ತೀವ್ರವಾಗಿರೋಗದಿಂದ ನರಳುತ್ತಿರುವ ರಾಸುಗಳಿಗೆ ಇತರೆ ವಿಷ ಕ್ರಿಮಿಗಳಿಂದ ಆಗಬಹುದುದಾದಇತರೆ ರೋಗಗಳನ್ನು (ಗಳಲೆ ಮತ್ತು ನೆರಡಿರೋಗ) ತಪ್ಪಿಸಲು ಪ್ರತಿ ರಾಸುಗಳಿಗೆ ಜೀವ ನಿರೋಧಕ(ಅಂಟಿಬಯೋಟಿಕ್ಸ್) ಕೊಡುವುದು ಹಾಗೂ ಸೂಕ್ತ ಲಸಿಕೆಗಳನ್ನು ನೀಡಬೇಕು.
4. ತೀವ್ರರೋಗದಿಂದ ನರಳುತ್ತಿರುವ ಹೆಚ್ಚು ಬೆಲೆ ಬಾಳುವ ವಿದೇಶಿ ಮತ್ತು ಮಿಶ್ರ ತಳಿಯ ರಾಸುಗಳ ಶೀಘ್ರವಾಗಿ ಚೇತರಿಸಿಕೊಳ್ಳಲು ವಿಟಮಿನ್ – ಎ ಅನ್ನಾಂಗದ ಚುಚ್ಚು ಮದ್ದನ್ನು ನೀಡಬೇಕಾಗುತ್ತದೆ.
5. ಮೃದು ಆಹಾರಗಳಾದ ಗಂಜಿ, ಬಾಳೆಹಣ್ಣು, ಹೂರಣ, ರಾಗಿ ಅಂಬಲಿ, ಹಸಿರು ಹುಲ್ಲು ಮುಂತಾದವುಗಳನ್ನು ತಿನ್ನಿಸಬೇಕು. ಕಾಲಿನಲ್ಲಿ ಗಾಯಗಳನ್ನು ಔಷಧಿ ಮಿಶ್ರಿತ ನೀರಿನಲ್ಲಿ (ಪೋಟಾಸಿಯಂ ಪರಮಾಂಗನೇಟ್) ತೊಳೆದು ನೊಣಕೂರದಂತೆ ಬೇವಿನ ಎಣ್ಣೆ ಅಥವಾ ಮುಲಾಮು ಹಚ್ಚಬೇಕು.
6. ದನದಕೊಟ್ಟಿಗೆಯನ್ನು ಶೇ. 5 ರಷ್ಟು ಸೋಡಿಯಂಕಾರ್ಬೋನೇಟ್ (ವಾಶಿಂಗ್ ಸೋಡಾ) ದ್ರಾವಣದಿಂದ ಸ್ವಚ್ಛಗೊಳಿಸುವುದು.
ರೋಗತಡೆಗಟ್ಟಲು ಮುಂಜಾಗ್ರತಕ್ರಮ:
ಕಾಲು ಬಾಯಿ ಜ್ವರವು ವೈರಾಣುಗಳಿಂದ ಬರುವಕಾಯಿಲೆಯಾದ್ದರಿಂದಇದಕ್ಕೆ ಪರಿಣಾಮಕಾರಿಯಾದ ಚಿಕಿÀತ್ಸೆ ಇರುವುದಿಲ್ಲಾ.ಮುಂಜಾಗ್ರತೆÀ ವಹಿಸಿ ರೋಗ ಬರದಂತೆತಡೆಯುವುದು ಒಳ್ಳೆಯದು.ಪ್ರತಿ ವರ್ಷ 6 ತಿಂಗಳ ಅಂತರದಲ್ಲಿ 2 ಬಾರಿ ತಪ್ಪದೇ ಕಾಲು ಮತ್ತು ಬಾಯಿ ರೋಗದ ವಿರುದ್ದ ಲಸಿಕೆ ಹಾಕಿಸಬೇಕು. ರೋಗ ಪೀಡಿತ ಪ್ರದೇಶಗಳಿಂದ ಪಶುಗಳ ಆಹಾರಖರೀದಿಸಬಾರದು. ರೋಗಗ್ರಸ್ಥ ಹಸುವನ್ನು ಕರುಗಳಿಂದ ತಕ್ಷಣವೇ ಬೇರ್ಪಡಿಸಿ, ಬೇರೆ ಹಸುವಿನ ಹಾಲು ಕುಡಿಸಬೇಕು.ಆಕಸ್ಮಾತ್ತಾಗಿರೋಗದಿಂದಜಾನುವಾರು ಸತ್ತರೆಅದರ ಸೂಕ್ತ ವಿಲೇವಾರಿ ಮುಖ್ಯ ಅಂದರೆ ಆಳವಾದ ಗುಂಡಿತೆಗೆದು ತಳಕ್ಕೆ ಸುಣ್ಣ ಹರಡಿ ಕಳೇಬರವನ್ನು ಹಾಕಿ ಮತ್ತೆಅದರ ಮೇಲೆ ಸುಣ್ಣ ಹಾಕಿ ಮುಚ್ಚಬೇಕು.ಸತ್ತ ದನಗಳಿಂದ ಚರ್ಮತೆಗೆಯಬಾರದು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here