ಜಿಲ್ಲೆಯಲ್ಲಿ ಮುಂದುವರೆದ ಮಳೆ : ಅಪಾರ ಪ್ರಮಾಣದ ಬೆಳೆ, ಆಸ್ತಿ ಹಾನಿ

0
71

ಶಿವಮೊಗ್ಗ: ಕಳೆದ 3-4 ದಿನಗಳಿಂದ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸಹಸ್ರಾರು ಎಕರೆ ಜಮೀನು ಜಲಾವೃತಗೊಂಡಿದ್ದು, ನೂರಾರು ಸಂಖ್ಯೆಯ ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಇದರ ಪರಿಹಾರ ಕ್ರಮಗಳಿಗಾಗಿ ಜಿಲ್ಲಾಡಳಿತ ಅಗತ್ಯ ತುರ್ತು ಕ್ರಮಗಳನ್ನು ಕೈಗೊಂಡು ಸಂತ್ರಸ್ಥರ ನೆರವಿಗೆ ಧಾವಿಸಿದೆ.

ಈಗಾಗಲೇ ನೂತನ ಜಿಲ್ಲಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡಿರುವ ಕೆ.ಬಿ.ಶಿವಕುಮಾರ್ ಅವರು ಮಳೆಹಾನಿಗೊಳಗಾದ ನಗರದ ಆಯ್ದ ಸ್ಥಳಗಳಿಗೆ ಉಪವಿಭಾಗಾಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಜಿಲ್ಲೆಯ ವಿವಿಧ ತಾಲೂಕುಗಳಲ್ಲಿನ ತಹಶೀಲ್ದಾರರು ಹಾಗೂ ಇಲಾಖೆಗಳ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದ್ದಾರೆ.

Contact Your\'s Advertisement; 9902492681

ನಗರದ ಶಾಂತಮ್ಮ ಲೇಔಟ್, ಚಿಕ್ಕಲ್, ರಾಗಿಗುಡ್ಡ ಹಾಗೂ ತಾಲೂಕು ಕಚೇರಿ ಸಮೀಪದಲ್ಲಿ ಮರಗಳು ಧರೆಗುರುಳಿವೆ. ಬಸವನಗುಡಿಯಲ್ಲಿ ಯುಜಿಡಿ ಬ್ಲಾಕ್‍ಆಗಿದ್ದು, ತಕ್ಷಣದ ಕ್ರಮಕ್ಕೆ ಮಹಾನಗರಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜಿಲ್ಲೆಯ ಸೊರಬ ತಾಲೂಕಿನ 4ಗ್ರಾಮಗಳಲ್ಲಿ, ಶಿಕಾರಿಪುರ ತಾಲೂಕಿನ 05ಗ್ರಾಮಗಳು ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಲ್ಲಿ ಮಳೆಯಿಂದಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡುವಂತೆ ಮೆಸ್ಕಾಂ ಅಭಿಯಂತರರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

ಸಾಗರ ತಾಲೂಕಿನಲ್ಲಿ 2150ಹೆಕ್ಟೇರ್, ಸೊರಬ ತಾಲೂಕಿನಲ್ಲಿ 2239ಹೆಕ್ಟೇರ್, ಹೊಸನಗರ ತಾಲೂಕಿನಲ್ಲಿ 58ಹೆಕ್ಟೇರ್ ಹಾಗೂ ಶಿಕಾರಿಪುರ ತಾಲೂಕಿನಲ್ಲಿ 6.4ಹೆಕ್ಟೇರ್ ಭೂಪ್ರದೇಶ ಜಲಾವೃತವಾಗಿದೆ. ಅಲ್ಲದೇ ಶಿವಮೊಗ್ಗ ತಾಲೂಕಿನಲ್ಲಿ 19ಮನೆಗಳು, ಭದ್ರಾವತಿಯಲ್ಲಿ 27ಮನೆಗಳು, ಸಾಗರ ತಾಲೂಕಿನಲ್ಲಿ ಸುಮಾರು 22ಮನೆಗಳು, ತೀರ್ಥಹಳ್ಳಿಯಲ್ಲಿ 8ಮನೆಗಳು, ಸೊರಬ ತಾಲೂಕಿನಲ್ಲಿ 10 ಮನೆಗಳು ಹಾಗೂ ಹೊಸನಗರ ತಾಲೂಕಿನಲ್ಲಿ 6ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಅಲ್ಲಿನ ನಿವಾಸಿಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಕ್ತ ಕ್ರಮ ತೆಗೆದುಕೊಳ್ಳುವಂತೆಯೂ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ಶಿವಮೊಗ್ಗ ನಗರದ ನದಿ ಇಕ್ಕೆಲಗಳ ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿದೆ.

ಲಿಂಗನಮಕ್ಕಿ, ಭದ್ರಾ ಮತ್ತು ತುಂಗಾ ಜಲಾಶಯಗಳಲ್ಲಿ ನೀರಿನ ಒಳ ಹರಿವು ಹೆಚ್ಚಾಗಿದೆ. ಲಿಂಗನಮಕ್ಕಿ ಜಲಾಶಯದಲ್ಲಿ 101176ಕ್ಯೂಸೆಕ್ಸ್, ಭದ್ರಾ ಜಲಾಶಯದಲ್ಲಿ 22120ಕ್ಯೂಸೆಕ್ಸ್ ಒಳಹರಿವು ಇದೆ. ತುಂಗಾ ಜಲಾಶಯದಲ್ಲಿ 77661ಕ್ಯೂಸೆಕ್ಸ್ ನೀರಿನ ಒಳ ಹರಿವು ಇದ್ದು, 76080ಕ್ಯೂಸೆಕ್ಸ್ ಹೊರಹರಿವು ಇರುತ್ತದೆ. ಆದ್ದರಿಂದ ನದಿಪ್ರಮಾಣದಲ್ಲಿ ನೀರಿನ ಒಳಹರಿವು ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿರುವುದರಿಂದ ನದಿ ಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here