ʻಬಿಗ್ವಿಂಗ್ ́ʼ ಉದ್ಘಾಟಿಸಿದ ʻಹೋಂಡಾ ಮೋಟಾ ರ್ಸೈಕಲ್ & ಸ್ಕೂಟರ್ ಇಂಡಿಯಾʼ

0
32
  • ಪ್ರೀಮಿಯಂ ಮೋಟಾರ್ಸೈಕಲ್ ಗ್ರಾಹಕರಿಗೆ ವಿಭಿನ್ನ ತಲ್ಲೀನಗೊಳಿಸುವ ಅನುಭವ.
  • ಪ್ರೀಮಿಯಂ ಮೋಟಾರ್ಸೈಕಲ್ಗಳ ವಿಶೇಷ ಶ್ರೇಣಿಯೊಂದಿಗೆ (300 ಸಿಸಿ – 500ಸಿಸಿ) ರೈಡಿಂಗ್ ಉತ್ಸಾಹಿಗಳನ್ನು ಸಂತೋಷಪಡಿಸುತ್ತದೆ.
  • ಹೋಂಡಾ ಬಿಗ್ ಬೈಕ್ಗಳಿಗೆ ಒಂದೇ ಸೂರಿನಡಿ ವಿಶೇಷ ಮಾರಾಟ ಮತ್ತು ಸೇವಾ ಕೇಂದ್ರ.

ಬೆಂಗಳೂರು: ʻಹೋಂಡಾ ಮೋಟಾರ್ಸಕಲ್ ಮತ್ತು ಸ್ಕೂಟರ್ ಇಂಡಿಯಾʼ(ಎಚ್ಎಂಎಸ್ಐ) ಇಂದು ಬೆಂಗಳೂರಿನಲ್ಲಿ ಪ್ರೀಮಿಯಂ ಬಿಗ್ ಬೈಕ್ ವ್ಯಾಪಾರ ವಿಭಾಗ – ʻಹೋಂಡಾ ಬಿಗ್ವಿಂಗ್ʼ ಅನ್ನು ಉದ್ಘಾಟಿಸುವ ಮೂಲಕ #GoRidin ಉತ್ಸಾಹವನ್ನು ಹೆಚ್ಚಿಸಿದೆ. [“193, ಶಿವ ಸದನ” ಹೊರ ವರ್ತುಲ ರಸ್ತೆ ಬಿ. ನಾರಾಯಣಪುರ ಬೆಂಗಳೂರು ಕರ್ನಾಟಕ, 560016]

ಬೆಂಗಳೂರಿನಲ್ಲಿ ʻಬಿಗ್ವಿಂಗ್ʼ ಉದ್ಘಾಟನೆಯ ಸಂದರ್ಭದಲ್ಲಿ ಮಾತನಾಡಿದ ಹೋಂಡಾ ಮೋಟಾರ್ಸೈಕಲ್ & ಸ್ಕೂಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರು, ಅಧ್ಯಕ್ಷರು ಮತ್ತು ಸಿಇಒ ಶ್ರೀ ಅತ್ಸುಷಿ ಒಗಾಟಾ, ಅವರು “ಗ್ರಾಹಕರಿಗೆ ಹತ್ತಿರವಾಗಲು ನಿಜವಾಗಿಯೂ ವಿಭಿನ್ನವಾದ ತಲ್ಲೀನಗೊಳಿಸುವ ಅನುಭವವನ್ನು ನೀಡಲು ಹೋಂಡಾ ʻಬಿಗ್ವಿಂಗ್ʼ (ಹೋಂಡಾದ ವಿಶೇಷ ಪ್ರೀಮಿಯಂ ಮೋಟಾರ್ಸೈಕಲ್ ಜಾಲ) ಅನ್ನು ವಿಸ್ತರಿಸುವತ್ತ ನಾವು ಗಮನ ಕೇಂದ್ರೀಕರಿಸಿದ್ದೇವೆ. ಇಂದು, ಬೆಂಗಳೂರಿನಲ್ಲಿ ʻಬಿಗ್ವಿಂಗ್ʼ ಅನ್ನು ಉದ್ಘಾಟಿಸಲು ನಮಗೆ ಸಂತೋಷವಾಗಿದೆ. ಈ ಹೊಸ ಪ್ರೀಮಿಯಂ ಮಳಿಗೆಯ ಮೂಲಕ, ಹೋಂಡಾದ ಮೋಜಿನ ಮೋಟಾರ್ ಸೈಕಲ್ಗಳನ್ನು ಬೆಂಗಳೂರಿನ ಗ್ರಾಹಕರ ಹತ್ತಿರಕ್ಕೆ ಕೊಂಡೊಯ್ಯುವ ಗುರಿಯನ್ನು ನಾವು ಹೊಂದಿದ್ದೇವೆ. ಜೊತೆಗೆ ನಮ್ಮ ಮಧ್ಯಮ ಗಾತ್ರದ ಪ್ರೀಮಿಯಂ ಮೋಟಾರ್ ಸೈಕಲ್ಗಳನ್ನು ಗ್ರಾಹಕರ ಅನುಭಕ್ಕೆ ತರುತ್ತಿದ್ದೇವೆ,ʼʼ ಎಂದು ಹೇಳಿದರು.

Contact Your\'s Advertisement; 9902492681

ಸಂಸ್ಥೆಯು ದೇಶಾದ್ಯಂತ ತನ್ನ ವಿಸ್ತರಣೆಯನ್ನು ಮತ್ತಷ್ಟು ಬಲಪಡಿಸಿದ್ದು, ಗ್ರಾಹಕರು ಈಗ 100ಕ್ಕೂ ಹೆಚ್ಚು ಕಾರ್ಯಾಚರಣೆಯ ಟಚ್ ಪಾಯಿಂಟ್ಗಳಲ್ಲಿ ವಿಭಿನ್ನ ʻಸಿಲ್ವರ್ವಿಂಗ್ʼಗಳನ್ನು ಅನುಭವಿಸಬಹುದು.

ಹೋಂಡಾದ ಪ್ರೀಮಿಯಂ ಮೋಟಾರ್ಸೈಕಲ್ ರಿಟೇಲ್ ಮಾದರಿಯನ್ನು ಪ್ರಮುಖ ಮೆಟ್ರೋ ನಗರಗಳಲ್ಲಿ ʻಬಿಗ್ವಿಂಗ್ʼ ಟಾಪ್ಲೈನ್ ಮತ್ತು ಇತರ ಬೇಡಿಕೆ ಕೇಂದ್ರಗಳಲ್ಲಿ ʻಬಿಗ್ವಿಂಗ್ʼ ಜಾಲಗಳು ಮುನ್ನಡೆಸುತ್ತಿವೆ. ʻಮಾರ್ಕೀ ಹೋಂಡಾ ಬಿಗ್ವಿಂಗ್ ಟಾಪ್ಲೈನ್ʼ ಹೋಂಡಾದ ಸಂಪೂರ್ಣ ಪ್ರೀಮಿಯಂ ಮೋಟಾರ್ರ್ಸೈಕಲ್ ಶ್ರೇಣಿಗೆ ನೆಲೆಯಾಗಿದೆ. ಹೊಸದಾಗಿ ಬಿಡುಗಡೆಯಾದ ʻಸಿಬಿ 300ಎಫ್ʼನಿಂದ ಹಿಡಿದು, ʻಸಿಬಿ 300ಆರ್ʼ, ʻಹೈನೆಸ್-ಸಿಬಿ 350ʼ ಮತ್ತು ಅದರ ವಾರ್ಷಿಕೋತ್ಸವ ಆವೃತ್ತಿ ʻಸಿಬಿ 350ಆರ್ಎಸ್ʼ, ʻಸಿಬಿ 500 ಎಕ್ಸ್ʼ, ʻಸಿಬಿಆರ್ 650 ಆರ್ʼ, ʻಸಿಬಿ 650 ಆರ್ʼ, ʻಸಿಬಿಆರ್ 1000ಆರ್ಆರ್-ಆರ್ ಫೈರ್ಬ್ಲೇಡ್ʼ, ʻಸಿಬಿಆರ್ 1000ಆರ್ಆರ್-ಆರ್ ಫೈರ್ಬ್ಲೇಡ್ ಎಸ್ಪಿʼ, ಅಡ್ವೆಂಚರ್ ಟೂರರ್ ʻಆಫ್ರಿಕಾ ಟ್ವಿನ್ ಅಡ್ವೆಂಚರ್ ಸ್ಪೋರ್ಟ್ಸ್ʼ ಮತ್ತು ಫ್ಲ್ಯಾಗ್ಶಿಪ್ ಮಾಡೆಲ್ ʻಗೋಲ್ಡ್ ವಿಂಗ್ ಟೂರ್ʼಗಳನ್ನು ಇದು ಒಳಗೊಂಡಿದೆ. ʻಬಿಗ್ವಿಂಗ್ʼ ವಿಭಾಗವು ಹೋಂಡಾದ ಮಧ್ಯಮ-ಗಾತ್ರದ ಮೋಟಾರ್ಸೈಕಲ್ ಅಭಿಮಾನಿಗಳ ಅಗತ್ಯಗಳನ್ನು ಪೂರೈಸುತ್ತದೆ.

ಕಪ್ಪು ಮತ್ತು ಬಿಳಿ ಏಕವರ್ಣೀಯ ಥೀಮ್ನಿಂದ ಅಲಂಕೃತವಾಗಿರುವ ʻಬಿಗ್ವಿಂಗ್ʼ, ಅಲ್ಲಿ ಪ್ರದರ್ಶಿಸಲಾದ ವಾಹನಗಳನ್ನು ಅವುಗಳ ಪೂರ್ಣ ವೈಭವದಲ್ಲಿ ಅನಾವರಣಗೊಳಿಸುತ್ತದೆ. ʻಬಿಗ್ವಿಂಗ್ʼನಲ್ಲಿರುವ ನುರಿತ, ಬುದ್ಧಿವಂತ ವೃತ್ತಿಪರರು ಗ್ರಾಹಕರ ಉತ್ಪನ್ನ ಸಂಬಂಧಿತ ಪ್ರಶ್ನೆಗಳು ಅಥವಾ ಬಿಡಿಭಾಗಗಳ ಅಗತ್ಯಗಳಿಗೆ ಪರಿಹಾರ ಸೂಚಿಸುತ್ತಾರೆ. ಹುಡುಕಾಟದಿಂದ ಖರೀದಿಯವರೆಗಿನ ಪ್ರಯಾಣವನ್ನು ಸುಲಭಗೊಳಿಸಲು, ಎಲ್ಲಾ ವಿವರವಾದ ಮಾಹಿತಿಗಾಗಿ ವಿಶೇಷ ವೆಬ್ಸೈಟ್ (www.HondaBigWing.in) ಲಭ್ಯವಿದೆ. ವೆಬ್ಸೈಟ್ನಲ್ಲಿ ಲಭ್ಯವಿರುವ ಆನ್ಲೈನ್ ಬುಕಿಂಗ್ ಆಯ್ಕೆಯು, ಗ್ರಾಹಕರಿಗೆ ಅವರ ಬೆರಳ ತುದಿಯಲ್ಲೇ ತ್ವರಿತ, ತಡೆರಹಿತ ಮತ್ತು ಪಾರದರ್ಶಕ ಬುಕಿಂಗ್ ಅನುಭವವನ್ನು ಖಾತರಿಪಡಿಸುತ್ತದೆ. ನೈಜ ಸಮಯದ ಗ್ರಾಹಕರ ಪ್ರತಿಕ್ರಿಯೆಯನ್ನು ಪಡೆಯಲು ಎಲ್ಲಾ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹೋಂಡಾ ʻಬಿಗ್ವಿಂಗ್ʼ ಸಕ್ರಿಯವಾಗಿ ಲಭ್ಯವಿದೆ.

ಗ್ರಾಹಕರ ಸುರಕ್ಷತೆ ಮತ್ತು ಅನುಕೂಲತೆಯನ್ನು ಖಾತರಿಪಡಿಸುವ ಹೋಂಡಾ ʻಬಿಗ್ವಿಂಗ್ʼ, ತಲ್ಲೀನಗೊಳಿಸುವ ಡಿಜಿಟಲ್ ಅನುಭವವನ್ನು ಒದಗಿಸುತ್ತದೆ. ಸಂಸ್ಥೆಯ ವರ್ಚುವಲ್ ವೇದಿಕೆಯು, ಗ್ರಾಹಕರಿಗೆ ತಮ್ಮ ಮನೆಯಲ್ಲೇ ಕುಳಿತು ಸಂಪೂರ್ಣ ಮೋಜಿನ ಮೋಟಾರ್ಸೈಕಲ್ ಶ್ರೇಣಿ, ರೈಡಿಂಗ್ ಪರಿಕರಗಳು ಮತ್ತು ಬಿಡಿಭಾಗಗಳ ವಿವರ ತಿಳಿಯಲು ಮತ್ತು ಅದರ ಅನುಭವ ಪಡೆಯಲು ಅನುವು ಮಾಡಿಕೊಡುತ್ತದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here