ಕರ್ನಾಟಕ ರಾಜ್ಯೋತ್ಸವ ಸಂಭ್ರಮ | ಸಂವಿಧಾನ ಸಮರ್ಪಣಾ ದಿನಾಚರಣೆ 

0
33

ಕಲಬುರಗಿ: ಮನಸಿಟ್ಟು ಕಲಿತ ಅಕ್ಷರ, ಪರಿಶ್ರಮದಿಂದ ದುಡಿದ ಅನ್ನ, ನಿಸ್ವಾರ್ಥ ಮನಸ್ಸಿನಿಂದಮಾಡಿದ ಸೇವೆ, ಇಷ್ಟಪಟ್ಟು ಮಾಡಿದ ಕಾರ್ಯ ಯಾರನ್ನು ಯಾವತ್ತೂ ಕೈಬಿಡುವುದಿಲ್ಲ ಎಂದು ಕಲಬುರಗಿ ನಗರಾಭಿವೃದ್ಧಿ ಆಯುಕ್ತರಾದದಯಾನಂದ ಪಾಟೀಲ ಹೇಳಿದರು.

ನಗರದ ಆಳಂದ ರಸ್ತೆಯಲ್ಲಿರುವ ಶಾರದಾ ವಿವೇಕ ಮಹಿಳಾ ಮಹಾವಿದ್ಯಾಲಯದಲ್ಲಿ ಕನ್ನಡ ಜಾನಪದ ಪರಿಷತ್ತು ಕಲಬುರಗಿ ಉತ್ತರ ವಲಯ ಹಾಗೂ ಸ್ನೇಹ ಸಂಗಮ ವಿವಿಧೋದ್ದೇಶ ಸೇವಾ ಸ೦ಘ ಆಯೋಜಿಸಿದ ಕರ್ನಾಟಕ ರಾಜ್ಯೋತ್ಸವ ಸಂಭ್ರಮ ಹಾಗೂ ಸಂವಿಧಾನ ಸಮರ್ಪಣಾ ದಿನಾಚರಣೆ ನಿಮಿತ್ಯ ವಿವಿಧ ಕ್ಷೇತ್ರದ ಸಾಧಕರಿಗೆ ಗೌರವ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಸಮಾಧಾನಕ್ಕೆ ನಮಗಿಂತ ಕಿರಿಯರನ್ನು ನೋಡಬೇಕು, ಸಾಧನೆಗೆ ನಮಗಿಂತ ದೊಡ್ಡವರನ್ನು ಕಾಣಬೇಕು ಸಾಧನೆಗೆ ಯಾವುದೇ ವಯಸ್ಸು ಅಡ್ಡಿಯಾಗದು ಚಿಕ್ಕ ವಯಸ್ಸಿನಿಂದ ಹಿರಿಯ ವಯಸ್ಸಿನವರೆಗೂ ಸತತ ಪ್ರಯತ್ನದಿಂದಸಾಧನೆ ಮಾಡಬಹುದು ಎನ್ನುವುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿಯಾಗಿದೆ ಇಂಥ ಕಾರ್ಯಕ್ರಮದಿಂದ ಲೆಕ್ಕವಿಲ್ಲದ ಪ್ರತಿಭೆಗಳು ಹುಟ್ಟುತ್ತಾರೆ ಕಾರ್ಯಕ್ರಮದ ಆಯೋಜಕರಿಗೆ ಅಭಿನಂದಿಸುತೇನೆ ಎಂದು ಮಾರ್ಮಿಕವಾಗಿ ನುಡಿದರು.

ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಸಂಘದ ಕಲಬುರಗಿ ಜಿಲ್ಲಾಅಧ್ಯಕ್ಷರಾದ ಮಹೇಶ ಹೂಗಾರ ಮಾತನಾಡುತ್ತಾಸಂವಿಧಾನವು ರಾಷ್ಟ್ರದಲ್ಲಿರುವ ಪ್ರತಿಯೊಬ್ಬರಿಗೂ ಪವಿತ್ರವಾದ ಗ್ರಂಥವಾಗಿದೆ ಸರ್ವರಿಗೂ ಸಮಾನತೆಯಿಂದ ಸ್ವಾತಂತ್ರ್ಯವಾಗಿ ಬಾಳುವುದು ಹೇಳಿಕೊಟ್ಟಿದೆ ಎಂದು ಹೇಳಿದರು.

ಸಂಘದ ಅಧ್ಯಕ್ಷರಾದ ನ್ಯಾಯವಾದಿ ಹಣಮಂತರಾಯ ಎಸ್.ಅಟ್ಟೂರ ಮಾತನಾಡುತ್ತಾ ಪ್ರಾರ್ಥಿಸುವ ಕೈಗಳಿಗಿಂತ ಹೆಚ್ಚಾಗಿ ಸೇವೆಯನ್ನು ಮಾಡುವ ಕೈಗಳು ಶರಣರಿಗೆ ಪ್ರಿಯವಾಗಿರುತ್ತವೆ, ಬಡತನದಲ್ಲಿ ಪ್ರೀತಿ ಇದೆಯೋ ಇಲ್ಲವೋ ಗೊತ್ತಿಲ್ಲ ಆದರೆ ಪ್ರೀತಿಯಲ್ಲಿ ಮಾತ್ರ ಬಡತನವಿಲ್ಲ, ಬಡತನದಲ್ಲಿಯೂ ತಾಳ್ಮೆಯಿಂದ ಸಾಧನೆ ಮಾಡಿದವರನ್ನು ಗೌರವಿಸುತ್ತಿರುವುದು ಹೆಮ್ಮೆಯ ವಿಷಯ ಇಂತಹ ಪ್ರತಿಭೆಗಳು ಈ ಭಾಗದಲ್ಲಿ ಹೆಚ್ಚು ಬೆಳೆಯಲಿ ಎಂದು ಆಶಿಸಿದರು.

ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿಗಳಾದ ಸಿದ್ದರಾಮ ಸರಸಂಬಿ, ಕನ್ನಡ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷರಾದ ಎಮ್ಮ ಬಿ ನಿಂಗಪ್ಪ ಆಗಮಿಸಿದರು. ಮಹಾವಿದ್ಯಾಲಯದ ಪ್ರಾಂಶುಪಾಲರಾದ ಹಣಮಂತರಾಯ ಗುಡ್ಡೆವಾಡಿ ಅಧ್ಯಕ್ಷತೆ ವಹಿಸಿದರು.

ರಾಜ್ಯೋತ್ಸವದ ಸಂಭ್ರಮದ ನಿಮಿತ್ಯ ಈ ಭಾಗದ ಹಾಸ್ಯ ಕಲಾವಿದ ಗುಂಡಣ್ಣಡಿಗಿ ಯವರಿಂದ ನಾಡು ನುಡಿಯ ಬಗ್ಗೆ ವಿಶೇಷವಾಗಿ ಹಾಸ್ಯದ ವಿಚಾರಗಳೊಂದಿಗೆ ಉಪನ್ಯಾಸ ನೀಡಿದರು.

ಜನಪದ ಕಲಾವಿದ ರಾಜು ಹೆಬ್ಬಾಳ, ಸಂಗೀತ ಕಲಾವಿದ ಮಹೇಶ ತೆಲೆಕುಣಿ ಸಂಗೀತ ಸೇವೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಗುರುನಾಥ ಹೂಗಾರ, ಪತ್ರಕರ್ತರ ರಾಷ್ಟ್ರೀಯ ಮಂಡಳಿ ಸದಸ್ಯರಾದ ಸಿದ್ರಾಮಪ್ಪ ಮಾಲಿ ಪಾಟೀಲ ಹಾಗೂ ರಾಜಕುಮಾರ ಉದನೂರ, ಶಹಾಬಾದ ತಾಲ್ಲೂಕಾ ಉತ್ತಮ ಶಿಕ್ಷಕರಾದ ಮಲ್ಲಮ್ಮ ಬಿ ಹಿರೇಮಠ,

ಕಲಬುರಗಿ ತಾಲ್ಲೂಕಾ ಉತ್ತಮ ಶಿಕ್ಷಕರಾದ ಸೈಬಣ್ಣ ಬೆಳಮ್, ವಿಕಲಚೇತನರು ಹಾಗೂ ಪ್ರಗತಿಪರ ರೈತರಾದ ಜಂಬಗಾ (ಬಿ) ಗ್ರಾಮದ ಶಿವಪ್ಪ ಜಮಾದಾರ, ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಹೆಸರು ದಾಖಲಿಸಿದ ಬಾಲ ಪ್ರತಿಭೆ ಕುಮಾರ ಧ್ರುವಂತ ರಾಜೀವ ಆಲೂರ, ಅವರಿಗೆ ವಿಶೇಷವಾಗಿ ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ

ಅಸ್ಲಾಂ ಶೇಖ, ರಘುನಂದನ ಕುಲಕರ್ಣಿ, ಶಿವರುದ್ರ ಕಣ್ಣಿ, ಶಿವಲಿಂಗಪ್ಪನಿಪ್ಪಾಣಿ, ಬಸವರಾಜ ಹಿರೇಮಠ, ರಾಜೀವ ಆಲೂರ,ನಾಗೇಂದ್ರಯಾ ಮಠ,ಶಿವಕುಮಾರ ಗಣಜಲಖೇಡ,ಚನ್ನಮ್ಮಮಠ, ಕವಿತಾ ಆಲೂರ,ಶಿವಾನಂದ ಮಠಪತಿ, ದಿಶಾ ಆಲೂರ ಸೇರಿದಂತೆ ಕಾಲೇಜಿನ ಉಪನ್ಯಾಸಕರು ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here