ಶಿಕ್ಷಣದ ಜೊತೆಜೊತೆಗೆ ಕಾನೂನಿನ ಅರಿವು ಕೂಡ ನಿಮಗೆ ಅಗತ್ಯವಾಗಿದೆ

0
15

ಕಲಬುರಗಿ: ನಂದಿಕೂರ ಗ್ರಾಮ ಪಂಚಾಯತ್ ವತಿಯಿಂದ ಕಾನೂನು ಅರಿವು ಮತ್ತು 2022-23 ನೇ ಸಾಲಿನ ಮಕ್ಕಳ ಗ್ರಾಮ ಸಭೆ ಹಾಗೂ ಅಜೀಮ್ ಪ್ರೇಮಜಿ ಫೌಂಡೆಷನ್ ಇವರುಗಳ ಸಂಯುಕ್ತಾಶ್ರಯದಲ್ಲಿ ನಂದಿಕೂರ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಮಕ್ಕಳ ಗ್ರಾಮ ಸಭೆ ಕಾರ್ಯಕ್ರಮವನ್ನು ನಂದಿಕೂರ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ವೇತಾ ದಿನೇಶ ದೊಡ್ಡಮನಿ ಅವರು ಉದ್ಘಾಟಿಸಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿ ವಿದ್ಯಾರ್ಥಿಗಳಿಗೊಸ್ಕರ ಅಂದರೆ ನಿಮಗಾಗಿ ಈ ಕಾರ್ಯಕ್ರಮ ಆಯೋಜನೆ ಮಾಡಿರುವುದು ತಾವೂಗಳು ಶಿಕ್ಷಣದ ಜೊತೆಜೊತೆಗೆ ಕಾನೂನಿನ ಅರಿವು ಕೂಡ ನಿಮಗೆ ಅಗತ್ಯವಾಗಿದೆ ಎಂದರು.

ಈ ಕುರಿತಾಗಿ ಗ್ರಾಮ ಪಂಚಾಯತ್ ಸ್ವತ ನಿಮ್ಮಲ್ಲಿಯೆ ಬಂದು ನಿಮ್ಮ ಸಮಸ್ಯಗಳ ಅವಾಹಲನ್ನು ಸೀವೀಕರಿಸಲು ಬಂದಿದೆವೆ ಎಂದು ಹೇಳಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮಕ್ಕಳ ಕಾನೂನಿನ ಅರಿವು ಬಗ್ಗೆ ಮಾರ್ಗದರ್ಶಿ ಸಂಸ್ಥೆಯ ನಿರ್ದೇಶಕರಾದ ಆನಂದರಾಜ್ ಅವರು ಅನೇಕ ವಿಚಾರಗಳನ್ನು ತಿಳಿಸಿದರು. ನಂತರ ನಂದೂರ ಸಿಹೆಚ್‍ಓ ಸೆಂಟರ್ ತೇಜೇಸ್ವಿನಿ ಮಾತನಾಡಿ ಆರೋಗ್ಯ ದೃಷ್ಟಿಯಿಂದ ಮುಂಜಾಗ್ರತಾ ಕ್ರಮಗಳ ಕುರಿತು ಅನೇಕ ವಿಷಯಗಳನ್ನು ತಿಳಿಸಿದರು.

ಬಿ ಎಲ್ ವ್ಹಿ ಸಂಪನ್ಮೂಲ ವ್ಯಕ್ತಿ ಬಿಎಮ್ ರಾವೂರ ಮಾತನಾಡಿ ವಿದ್ಯಾರ್ಥಿಗಳ ಮತ್ತು ಮಕ್ಕಳ ವಿಚಾರವಾಗಿ ಕಾನೂನು ನೆರವು ಮತ್ತು ಅರಿವು ಮೂಡಿಸುವ ಮೂಲಕ ನಾಗರಿಕ ಸಬಲೀಕರಣ ಬಗ್ಗೆ ಮಾತನಾಡಿದರು.

ಗ್ರಾಮ ಪಂಚಾಯತ ಸದಸ್ಯರಾದ ಮಾಲಾಶ್ರೀ ಮಾಣಿಕ, ಶ್ರೀಕಾಂತ ಉಳ್ಳಿ, ಶಿವರಾಜ ಬಿರಾದಾರ, ಮೊಹ್ಮದಸಾಬ್ ಸೀತನೂರ, ಭೀಮಾಶಂಕರ ನಾಗನಳ್ಳಿ, ಲಕ್ಕಪ್ಪ ಪೂಜಾರಿ, ಸುಭಾಷ ಉದನೂರ, ಕಾರ್ಯದರ್ಶಿ ಕುಮಾರಿ ಮಹಾನಂದಾ ಸಿಂಗೆ, ಮುಖಂಡರಾದ ದಿನೇಶ ದೊಡ್ಡಮನಿ, ಕುಪೇಂದ್ರ ನಾಗನಳ್ಳಿ, ಶರಣು ಕರೇಕಲ್, ಶಿವಶರಣಪ್ಪ ನಾಗನಳ್ಳಿ, ಹಜರತಸಾಬ್ ಉದನೂರ, ಸಲೀಮಸಾಬ್ ಕೋಟನೂರ ಸೇರಿದಂತೆ ಪಂಚಾಯತ್ ವ್ಯಾಪ್ತಿಯ ಸರಕಾರಿ ಶಾಲೆಯ ಶಿಕ್ಷಕರುಗಳು, ಗ್ರಾಮಸ್ಥರು ಇದ್ದರು.

ಇದೇ ಸಂದರ್ಭದಲ್ಲಿ ಮಕ್ಕಳು ಶಾಲೆಗೆ ಬೇಕಾಗುವ ಸವಲತ್ತುಗಳ ಬಗ್ಗೆ ಸ್ವ ಬರವಣಿಗೆಯಲ್ಲಿ ಮನವಿಪತ್ರವನ್ನು ನೀಡಿದರು, ಇದಕ್ಕೆ ಸ್ಪಂಧಿಸಿದ ಅಧ್ಯಕ್ಷೆ ಶ್ವೇತಾ ದಿನೇಶ ರವರು ಬೇಡಿಕೆ ಅನುಗುಣವಾಗಿ ಮಕ್ಕಳಿಗೆ ಮಾಡಿಕೊಡುವ ಸಂಪೂರ್ಣ ಭರವಸೆ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here