ಕಲಬುರಗಿ: ಎಮ್ ಎಚ್ ಆರ್ ಡಿ ಸುತ್ತೋಲೆಯ ವಿರುದ್ಧವಾಗಿ ಕೇಂದ್ರ ವಿಶ್ವವಿದ್ಯಾಲಯವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಲ್ ಫೀಸ್ ಅನ್ನು ಕಟ್ಟುವಂತೆ ಒತ್ತಾಯ ಮಾಡುತ್ತಿರುವುದನ್ನು ವಿರೋಧಿಸಿ ಇಲ್ಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿ ಒಕ್ಕೂಟ ಕೇಂದ್ರೀಯ ವಿಶ್ವವಿದ್ಯಾಲಯ ಆವರಣದಲ್ಲಿ ಪ್ರತಿಭಟನೆಯನ್ನು ನಡೆಸಿದರು.
ಕೇಂದ್ರ ವಿಶ್ವವಿದ್ಯಾಲಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಇತರೆ ವಿದ್ಯಾರ್ಥಿಗಳು ಬಡತನ ರೇಖೆಯ ಕೆಳಗೆನಿಂದ ಬಂದ ವಿದ್ಯಾರ್ಥಿಗಳಾಗಿದ್ದು, ಸಿಕ್ಕ ಅವಕಾಶಕ್ಕಾಗಿ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಉನ್ನತ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಎಸ್ ಸಿ ಎಸ್ ಟಿ ಸೌಲಭ್ಯದ ಅಡಿಯಲ್ಲಿ ತಮ್ಮ ಉನ್ನತ ಶೈಕ್ಷಣಿಕ ಸೌಲಭ್ಯಗಳನ್ನು ಪಡೆದುಕೊಂಡು ಜೀವನಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಕೇಂದ್ರ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿ ಕೇಂದ್ರ ವಿಶ್ವವಿದ್ಯಾಲಯವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಲ್ ಫೀಸ್ ಅನ್ನು ಕಟ್ಟುವಂತೆ ಒತ್ತಾಯ ಮಾಡುತ್ತಿದ್ದು ಇದು ಎಮ್ ಎಚ್ ಆರ್ ಡಿ ಸುತ್ತೋಲೆಯ ವಿರುದ್ಧವಾಗಿದೆ ಎಂದು ಹೋರಾಟ ನಿರತ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ಎಂಟು ಲಕ್ಷಕಿಂತ ಕಡಿಮೆ ಆದಾಯ ಇರುವ ಯಾವುದೆ ಜಾತಿ ಧರ್ಮದ ಭೇದವಿಲ್ಲದೆ ಎಲ್ಲ ಮಹಿಳೆಯರಿಗು ಉಚಿತ ಶಿಕ್ಷಣ ನೀಡಬೇಕೆಂದು ನಿಯಮವಿದ್ದರೂ ಅವರಿಗು ಫೀಸ್ ಕಟ್ಟಿಸಿಕೊಳ್ಳಲಾಗುತ್ತಿದೆ. ಕೇಂದ್ರ ವಿಶ್ವವಿದ್ಯಾಲಯದಿಂದ ಪ್ರಕಟವಾದ ಜಾಹೀರಾತಿನ ಪ್ರಕಾರ ಮೆಸ್ಸಿನ ಮತ್ತು ಪ್ರವೇಶಾತಿ ಶುಲ್ಕವು ವಿನಾಯತಿ ಇರುವುದೆಂದು ತಿಳಿಸುತ್ತಾರೆ ಆದರೆ ಇಲ್ಲಿ ಇಲ್ಲಿಯವರೆಗೂ ಯಾವುದೇ ವಿನಾಯತಿಯನ್ನು ನೀಡದೆ ರಿಸರ್ವೇಶನ್ ಪಾಲಿಸಿಯನ್ನು ಉಲ್ಲಂಘನೆ ಮಾಡಿರುತ್ತಾರೆ ಎಂದು ಆರೋಪಿಸಿದ್ದಾರೆ.
ಕೇಳಲು ಪ್ರಶ್ನಿಸಿದ ವಿದ್ಯಾರ್ಥಿಗಳು ಪ್ರತಿಭಟನೆಗೆ ಕುಳಿತಿದ್ದನ್ನು ನೋಡದೆ ತುಳಿದುಕೊಂಡು ಹೋಗಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಅಪಮಾನಿದಲಾಗಿದೆ. ಮೊದಲೇ ಎಲ್ಲಾ ವಿಷಯಗಳನ್ನು ಕುಲಸಚಿವರ ಗಮನಕ್ಕೆ ತರಲಾಗಿದ್ದು ಯಾವುದೇ ರೀತಿಯ ಕ್ರಮ ಕೈಗೊಳ್ಳದ ಕಾರಣ ಇಂದು ಪ್ರತಿಭಟನೆಯ ಮೂಲಕ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮಾನ್ಯ ಕುಲ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಪಿ ನಂದಕುಮಾರ ,ಮಂಜುನಾಥ, ಹರಿಕೃಷ್ಣ, ರಮೇಶ, ದೀಪಿಕಾ, ವಿಜಯಲಕ್ಷ್ಮಿ ಮುಂತಾದವರು ಇದ್ದರು.