ಸುರಪುರ: ಕೊಳಗೇರಿ ಅಭಿವೃಧ್ಧಿ ಮಂಡಳಿಯಿಂದ ನಗರದ ಹಸನಾಪುರ ಪೆಟ್ರೋಲ್ ಬಂಕ್ ಬಳಿಯಲ್ಲಿ ನಿರ್ಮಿಸಲಾಗುತ್ತಿರುವ ಮನೆಗಳ ನಿರ್ಮಾಣ ಸ್ಥಳಕ್ಕೆ ಶಾಸಕ ರಾಜುಗೌಡ ಭೇಟಿ ನೀಡಿ ವೀಕ್ಷಿಸಿದರು.
ಈ ಸಂದರ್ಭದಲ್ಲಿ ನಗರಸಭೆ ವಿರೋಧ ಪಕ್ಷದ ನಾಯಕ ರಾಜಾ ಪಿಡ್ಡನಾಯಕ (ತಾತಾ) ಈ ಸ್ಥಳದಲ್ಲಿ ಈ ಹಿಂದೆ ಮನೆಗಳ ನಿರ್ಮಾಣಕ್ಕೆ ಹಕ್ಕು ಪತ್ರ ನೀಡಿರುವ 192 ಜನರಿಗೆ ನಿವೇಶನಗಳನ್ನು ನೀಡಿ ನಂತರ ಉಳಿದವುಗಳನ್ನು ಬೇರೆಯವರಿಗೆ ವಿತರಿಸುವಂತೆ ಕೊರಿದರು.ಇದಕ್ಕೆ ಸಹಮತ ನೀಡಿದ ಶಾಸಕರು ಆ ಎಲ್ಲಾ 192 ಜನರಿಗೆ ನಿವೇಶನ ಹಂಚಿಕೆಯೊಂದಿಗೆ ಇನ್ನುಳಿದವರಿಗೆ ಮನೆಗಳನ್ನು ನಿರ್ಮಿಸಿ ಕೊಡಲಾಗುವುದು ಎಂದು ತಿಳಿಸಿದರು.
ಅಲ್ಲದೆ ಸದ್ಯ ಆರಂಭಗೊಂಡಿರುವ ಮನೆಗಳ ನಿರ್ಮಾಣ ಕಾಮಗಾರಿಯನ್ನು ವೀಕ್ಷಣೆ ಮಾಡಿದರು,ಅಲ್ಲದೆ ಸರ್ವೇ ನಂಬರ್ 186ರ ಗಡಿಯನ್ನು ಎಲ್ಲೆಡೆಯೂ ಸುತ್ತಾಡಿ ವೀಕ್ಷಿಸಿದರು.ಇದೇ ಸಂದರ್ಭದಲ್ಲಿ ಸರ್ವೇ ನಂಬರ್ 186ರ ಜಮೀನು ಮಾರಾಟ ಮಾಡಿದ್ದವರು ಆಗಮಿಸಿ ಇದರ ಹದ್ದುಬಸ್ತನ್ನು ಮಾಡಿಕೊಡುವಂತೆ ಶಾಸಕರಿಗೆ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಸಗರಸಭೆ ಅಧ್ಯಕ್ಷ ಸುಜಾತಾ ವೇಣುಗೋಪಾಲ ನಾಯಕ ಜೇವರ್ಗಿ,ಉಪಾಧ್ಯಕ್ಷ ಮಹೇಶ ಪಾಟೀಲ್,ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ,ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ ಸಜ್ಜನ್,ಎಇಇ ಶಾಂತಪ್ಪ ಸೇರಿದಂತೆ ನಗರಸಭೆಯ ಅನೇಕ ಜನ ಸದಸ್ಯರು ಭಾಗವಹಿಸಿದ್ದರು.