ಸದಸ್ಯರು ಬೇಟೆ ಪಾಲದಂತೆ ಅನುದಾನ ಹಂಚಿಕೊಳ್ಳುವ ಬದಲು ಅಭಿವೃಧ್ಧಿಗೆ ದೊಡ್ಡತನ ತೋರಿ

0
12

ಸುರಪುರ: ಎಲ್ಲಾ ಸದಸ್ಯರು ಬರುವ ಅನುದಾನವನ್ನು ನನಗಿಷ್ಟು ಎಂದು ಬೇಟೆ ಪಾಲದಂತೆ ಹಂಚಿಕೊಳ್ಳುವ ಬದಲು ಎಲ್ಲಿ ಸಮಸ್ಯೆ ಇದೆ ಅದರ ನಿವಾರಣೆಗೆ ಅನುದಾನವನ್ನು ಬಿಟ್ಟು ಕೊಡುವುದರ ಮೂಲಕ ಅಭಿವೃಧ್ಧಿಗೆ ಸಹಕರಿಸುವಂತೆ ಶಾಸಕರು ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ನರಸಿಂಹ ನಾಯಕ (ರಾಜುಗೌಡ) ತಿಳಿಸಿದರು.

ನಗರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ನಗರಸಭೆ ವಿರೋಧ ಪಕ್ಷದ ನಾಯಕ ರಾಜಾ ಪಿಡ್ಡನಾಯಕ (ತಾತಾ) ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತುಂಬಾ ಆಗುತ್ತಿದೆ ಎಂದಾಗ ಶೀಘ್ರದಲ್ಲಿ ನೂತನವಾಗಿ ನಿರ್ಮಿಸಿರುವ ಕುಡಿಯುವ ನೀರಿನ ಕಾಮಗಾರಿ ಮುಗಿದಿದ್ದು ಇನ್ನೆರಡು ವಾರಗಳಲ್ಲಿ ಎಲ್ಲಾ ಮನೆಗಳಿಗೆ ಕುಡಿಯುವ ನೀರು ಸರಬರಾಜು ಆರಂಭವಾಗಲಿದೆ,ಉನ್ನತ ತಂತ್ರಜ್ಞಾನ ಅಳವಡಿಸಿರುವ ಹಗಲಿರಳು ಶುದ್ಧ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ,ದೇಶದಲ್ಲಿಯೇ ಕಾಮಗಾರಿ ಆರಂಭಗೊಳಿಸಿದ ಅತ್ಯಂತ ಕಡಿಮೆ ಅವಧಿಯಲ್ಲಿ ಕಾಮಗಾರಿ ಮುಗಿಸಿದ ಕೀರ್ತಿ ನಮ್ಮ ಸುರಪುರಕ್ಕಿದೆ,ಕಾಮಗಾರಿಯನ್ನು ವೀಕ್ಷಿಸಲು ಬೇರೆ ರಾಜ್ಯದವರು ನಮ್ಮಲ್ಲಿಗೆ ಬರಲಿದ್ದಾರೆ ಎಂದರು.

ಅಲ್ಲದೆ ಕುಡಿಯುವ ನೀರಿನ ಕಾಮಗಾರಿ ಸಂದರ್ಭದಲ್ಲಿ ಜನರ ಓಡಾಟಕ್ಕೆ ಎಷ್ಟೇ ಸಮಸ್ಯೆಯಾದರೂ ತಾವೆಕ್ಕ ಸದಸ್ಯರು ಮತ್ತು ಜನರು ಒಂದು ದಿನವೂ ವಿರೋಧ ವ್ಯಕ್ತಪಡಿಸಿಲ್ಲ ಅದಕ್ಕಾಗಿ ಎಲ್ಲರಿಗೂ ಕರತಜ್ಞತೆ ಅರ್ಪಿಸುವುದಾಗಿ ತಿಳಿಸಿದರು.ಅಲ್ಲದೆ ಮೊದಲು ಪ್ರತಿ ಮನೆಗಳಿಗೆ ನೀರು ಸರಬರಾಜು ಆರಂಭಿಸಿ ನಂತರ ಯಾವುದೇ ಸಮಸ್ಯೆ ಇಲ್ಲ ಎಂದಾದ 15 ದಿನದ ನಂತರ ಉದ್ಘಾಟನೆ ಮಾಡುವುದಾಗಿ ತಿಳಿಸಿದರು.

ಪ್ರತಿ ಕುಟುಂಬಕ್ಕೆ 56 ರೂಪಾಯಿಯಲ್ಲಿ 8 ಸಾವಿರ ಲೀಟರ್ ನೀರು ದೊರೆಯಲಿದೆ,ಇದರ ನಂತರದ ಪ್ರತಿ ಸಾವಿರ ಲೀಟರ್‍ಗೆ 8 ರೂ ದಲ್ಲಿ ದೊರೆಯಲಿದೆ ಎಂದರು.ನಂತರ ಕೆಲ ಸದಸ್ಯರು ಕಾಮಗಾರಿಗಾಗಿ ರಸ್ತೆ ಅಗೆದಿದ್ದು ಓಡಾಟಕ್ಕೆ ತೊಂದರೆಯಾಗಲಿದೆ ಎಂದಾಗ ಶೀಘ್ರದಲ್ಲಿ ಸಿಮೆಂಟ್ ರಸ್ತೆ ಮಾಡಿಸುವುದಾಗಿ ಭರವಸೆ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here