ಏಡ್ಸ್ ಪೀಡಿತರನ್ನು ತಾರತಮ್ಯ ಮಾಡಿದಲ್ಲಿ ಕಾನೂನು ರೀತಿ ಅಪರಾಧ

0
10

ಸುರಪುರ: ಯಾವುದೋ ಕಾರಣ ದಿಂದ ಹೆಚ್.ಐ.ವಿ ಪೀಡಿತರು ಅಥವಾ ಏಡ್ಸ್ ಪೀಡಿತರನ್ನು ಸಮಾಜದಲ್ಲಿ ತಾರತಮ್ಯ ಭಾವನೆಯಿಂದ ನೋಡುವುದಾಗಲಿ ಅಥವಾ ಅವರಿಗೆ ಅಪಮಾನಿಸುವುದಾಗಲಿ ಮಾಡುವುದು ಕಾನೂನು ರೀತಿ ಅಪರಾಧವಾಗಲಿದೆ,ಅದಕ್ಕೆ 1987ರ ಕಾನೂನಂತೆ ಶಿಕ್ಷೆಯನ್ನು ನೀಡಲಾಗುವುದು ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಮಲ್ಲಿಕಾರ್ಜುನ ಈಶ್ವರಪ್ಪ ಕಮತಗಿ ತಿಳಿಸಿದರು.

ನಗರದ ಹಸನಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ,ತಾಲೂಕು ನ್ಯಾಯವಾದಿಗಳ ಸಂಘ,ತಾಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಸಮಾಜದಲ್ಲಿ ಯಾವುದೇ ಏಡ್ಸ್ ಅಥವಾ ಮಾನಸಿಕ ಅಸ್ವಸ್ಥತೆಯಿಂದ ಬಳಲುವಂತವರು ಕಂಡಲ್ಲಿ ಅಂತವರಿಗೆ ಚಿಕಿತ್ಸೆಯನ್ನು ಕೊಡಿಸುವ ಕಾರ್ಯವನ್ನು ನಮ್ಮ ನ್ಯಾಯಾಂಗ ಇಲಾಖೆ ಮಾಡಲಿದೆ ಎಂದರು.

Contact Your\'s Advertisement; 9902492681

ನ್ಯಾಯಾಧೀಶ ಮಾರುತಿ ಕೆ ಮಾತನಾಡಿ,ಮನುಷ್ಯ ಸಂಗ ಜೀವಿ ಗಂಡಿಗೆ ಹೆಣ್ಣಿನ ಮೇಲೆ ಅಥವಾ ಹೆಣ್ಣಿಗೆ ಗಂಡಿನ ಮೇಲೆ ಮೋಹವಾಗುವುದು ಸಹಜ ಮತ್ತು ಲೈಂಗಿಕತೆ ಎನ್ನುವವುದು ನೈಸರ್ಗಿಕ ಕ್ರೀಯೆಯಾಗಿದ್ದು ಯಾವುದೇ ಕಾರಣಕ್ಕೂ ಅಸುರಕ್ಷಿತ ಲೈಂಗಿಕತೆಯನ್ನು ಅನುಸರಿಸಬಾರದು,ಸುರಕ್ಷಿತ ಲೈಂಗಿಕತೆಗಾಗಿ ಮದುವೆಯಾಗುವುದು ಮುಖ್ಯ ಎಂದು ತಿಳಿಸಿದರು.

ಆಪ್ತ ಸಮಾಲೋಚಕ ಪ್ರದೀಪ ಸೂರ್ಯವಂಶಿ ಮಾತನಾಡಿ,ಯಾದಗಿರಿ ಜಿಲ್ಲೆಯಲ್ಲಿ ಒಟ್ಟು 5788 ಪಾಸಿಟಿವ್ ಕೇಸ್ ಇದ್ದು,5400 ಚಿಕಿತ್ಸೆ ಪಡೆಯುತ್ತಿದ್ದಾರೆ, ಈಗ ಯಾದಗಿರಿ ಜಿಲ್ಲೆಯಲ್ಲಿ 299 ಜನ ಗರ್ಭೀಣಿಯರಲ್ಲಿ ಹೆಚ್.ಐ.ವಿ ಪಾಸಿಟಿವ್ ಇದೆ,ಯಾವ ಗರ್ಭೀಣಿ ಅಥವಾ ತಾಯಿ ಚಿಕಿತ್ಸೆ ಪಡೆದಲ್ಲಿ ಮಗುವಿಗೆ ಪಾಸಿಟಿವ್ ಬರುವುದನ್ನು ತಡೆಯಬಹುದು.299 ಜನರಲ್ಲಿ 18 ಮಕ್ಕಳಿಗೆ ಮಾತ್ರ ಹೆಚ್.ಐ.ವಿ ಪಾಸಿಟಿವ್ ಬಂದಿದೆ,ಇನ್ನುಳಿದ ಮಕ್ಕಳಿಗೆ ಯಾವುದೇ ಸೊಂಕು ಇಲ್ಲ ಎಂದರು.2021-22ರಲ್ಲಿ ನಮ್ಮ ಯಾದಗಿರಿ ಜಿಲ್ಲೆಯಲ್ಲಿ 199 ಹೆಚ್.ಐ.ವಿ ಪಾಸಿಟಿವ್ ಕೇಸ್ ಕಂಡುಬಂದಿವೆ, ನವೆಂಬರ್ ತಿಂಗಳಲ್ಲಿ ನಮ್ಮ ತಾಲೂಕಿನಲ್ಲಿ ಎರಡು ಹಾಗೂ ಹುಣಸಗಿ ತಾಲೂಕಿನಲ್ಲಿ ಮೂರು ಜನರದಲ್ಲಿ ಹೆಚ್.ವಿ ಸೊಂಕು ಪತ್ತೆಯಾಗಿದೆ ಎಂದು ತಿಳಿಸಿದರು.ಹೆಚ್.ವಿ ಪೀಡಿತರಿಗೆ ಸರಕಾರ ದಿಂದ ಉಚಿತ ಚಿಕಿತ್ಸೆ,ಅವರಿಗೆ ರೇಷನ್ ಕಾರ್ಡ್,ವಸತಿ ಸೌಲಭ್ಯ ಕೊಡಿಸುವುದು ಮತ್ತು ಹೆಚ್.ಐ.ವಿ ಪೀಡಿತರ ಮಕ್ಕಳಿಗೆ 18 ವರ್ಷದ ವರೆಗೂ ತಿಂಗಳಿಗೆ 1ಸಾವಿರ ರೂಪಾಯಿಗಳ ಧನ ಸಹಾಯ ಮಾಡಲಾಗುತ್ತಿದೆ ಎಂದು ತಿಳಿಸಿದರು.

ನಂತರ ಕಾರ್ಯಕ್ರಮದ ಕುರಿತು ಅಧ್ಯಕ್ಷತೆ ವಹಿಸಿದ್ದ ಡಾ:ಅಲ್ಲಾವುದ್ದಿನ್ ಅರಕೇರಿ ಹಾಗೂ ನ್ಯಾಯವಾದಿ ಆದಪ್ಪ ಹೊಸ್ಮನಿ ಮಾತನಾಡಿದರು.ಕಾರ್ಯಕ್ರಮದ ವೇದಿಕೆ ಮೇಲೆ ಹೆಚ್ಚುವರಿ ದಿವಾಣಿ ನ್ಯಾಯಾಧೀಶ ಬಸವರಾಜ,ಸಹಾಯಕ ಸರಕಾರಿ ಅಭಿಯೋಜಕ ಮರೇಪ್ಪ ಹೊಸಮನಿ,ನಗರಸಭೆ ಸದಸ್ಯೆ ಸುವರ್ಣ ಸಿದ್ರಾಮ ಎಲಿಗಾರ,ಆಯುಷ್ ವೈದ್ಯ ಡಾ:ಇಮ್ತಿಯಾಜ್ ವಕೀಲರ ಸಂಘದ ಉಪಾಧ್ಯಕ್ಷ ಮಾನಪ್ಪ ಕವಡಿಮಟ್ಟಿ ವೇದಿಕೆಯಲ್ಲಿದ್ದರು.ವಕೀಲ ಆದಪ್ಪ ಹೊಸ್ಮನಿ ಕಾರ್ಯಕ್ರಮ ನಿರೂಪಿಸಿದರು,ವಕೀಲ ನಾಗಪ್ಪ ಚವಲಕರ್ ವಂದಿಸಿದರು.ಕಾರ್ಯಕ್ರಮದಲ್ಲಿ ನ್ಯಾಯಾಂಗ ಇಲಾಖೆಯ ಭೀಮು ಬನಸೋಡೆ ಸೇರಿದಂತೆ ಅನೇಕ ಜನ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here