ಸಂವಿಧಾನದಲ್ಲಿ ಮಹಿಳೆರಿಗೆ ಸಮಾನತೆ

0
15

ಕಲಬುರಗಿ : ನಮ್ಮ ದೇಶದ ಸಂವಿಧಾನವು ಪ್ರತಿಯೊಬ್ಬ ಭಾರತದೇಶದ ಮಹಿಳಿಗೂ ಸಮಾನತೆಯನ್ನು ತಂದುಕೊಟ್ಟಿದೆ ಎಂದು ಸರಕಾರಿ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾದ ಡಾ.ಶ್ರೀಮಂತ ಹೊಳಕರ ಹೇಳಿದರು.

ಶರಣಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಇತ್ತೀಚಿಗೆ ನಡೆದ ಸಂವಿಧಾನ ಮತ್ತು ಕೋಮು ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಸಂವಿಧಾನದ ರಚನೆಯ ಮುನ್ನ ಭಾರತದಲ್ಲಿ ಸಮಾನತೆ ಇರಲಿಲ್ಲ. ಇಂದು ಮಹಿಳೆಯರ ಸಾಧನೆಗೆ ಸಂವಿಧಾನ ಮುಖ್ಯಕಾರಣ ಎಂದು ಹೇಳುತ್ತಾ, ಯಾವ ಧರ್ಮಕ್ಕೂ ಯಾವ ಮತಕ್ಕೂ ಯಾವ ಕುಲಕ್ಕೂ ಧಕ್ಕೆಯಾಗದಂತೆ ಸಂವಿಧಾನವನ್ನು ರಚಿಸಿರುವ ಸಂವಿಧಾನ ಶಿಲ್ಪ ಡಾ.ಬಿ.ಆರ್.ಅಂಬೇಡ್ಕರ ಅವರನ್ನು ಈ ಸಂರ್ಭದಲ್ಲಿ ಸ್ಮರಿಸುತ್ತಾ ಭಾರತ ದೇಶದ ಪ್ರತಿಯೊಬ್ಬ ಪ್ರಜೆಯೂ ಡಾ.ಬಿ.ಆರ್.ಅಂಬೇಡ್ಕರ ಅವರಿಗೆ ಚಿರರುಣಿಯಾಗಿದ್ದಾರೆ. ಭಾರತದ ಸಂವಿಧಾನದ ಹುಟ್ಟು, ಬೆಳವಣಿಗೆ, ಮಹತ್ವ ಬಗ್ಗೆ ತಿಳಿಸಿದರು. ಅಲ್ಲದೇ ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳು 371 ಸಂವಿಧಾನದ ತಿದ್ದುಪಡಿಯಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ ಎಂದು ಸವಿಸ್ತಾರವಾಗಿ ತಿಳಿಸಿದರು.

Contact Your\'s Advertisement; 9902492681

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯರು ಡಾ.ದಶರಥ ಮೇತ್ರೆಯವರು ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ ಅವರು ದೂರದೈಷ್ಟಿಯುಳ್ಳವರಾಗಿದ್ದರು. ಮಹಿಳೆಯರಿಗೆ ಸಮಾನ ಅವಕಾಶ ಒದಗಿಸಿ, ಪಿತ್ರಾರ್ಜಿತ ಆಸ್ತಿಯಲ್ಲಿ ಮಹಿಳೆಯರಿಗೆ ಸಮಾನ ಅವಕಾಶವನ್ನು ಒದಗಿಸಿಕೊಟ್ಟರು, ಭಾರತದೇಶದಲ್ಲಿ ಮಾತ್ರ ನಾವು ವಿವಿಧತೆಯಲ್ಲಿ ಏಕತೆಯನ್ನು ಕಾಣಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಐ.ಕ್ಯೂ.ಎ.ಸಿ ನ್ಯಾಕ ಸಂಯೋಜಕಿ ಡಾ.ಸುನಂದಾ ವಾಂಜಖೇಡ, ಎನ್.ಎಸ್.ಎಸ್ ಅಧಿಕಾರಿ ಪ್ರೊ.ದಯಾನಂದ ಹೊಡಲ್ ಹಾಗೂ ವಿದ್ಯಾರ್ಥಿಗಳು, ಮಹಾವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here