ಜಾತಿಯ ಬಂಧನದಲ್ಲಿ ಮಹಾತ್ಮರನ್ನು ಕಾಣಬೇಡಿ : ಶ್ರೀ ರಂಭಾಪುರಿ ಜಗದ್ಗುರುಗಳು

0
10

ಕಲಬುರಗಿ: ಸರ್ವ ಸಮುದಾಯದ ಶ್ರೇಯೋಭಿವೃದ್ಧಿ ಬಯಸಿದ ಮಹಾತ್ಮರನ್ನು ಜಾತಿಯ ಬಂಧನದಲ್ಲಿ ಇರಿಸಿ ಅವರ ವಿಚಾರ ಧಾರೆಗಳನ್ನು ಸಂಕುಚಿತಗೊಳಿಸಬಾರದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಬುಧವಾರ ಸಂಗಾರೆಡ್ಡಿ ಜಿಲ್ಲೆ ಬದ್ರಿಪುರ ಶ್ರೀ ದತ್ತಗಿರಿ ಮಹಾರಾಜ್ ಅವರ ಜನ್ಮ ಶತಮಾನೋತ್ಸವ ಉದ್ಘಾಟನಾ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

Contact Your\'s Advertisement; 9902492681

ಭಾರತೀಯ ಉತ್ಕøಷ್ಟ ಸಂಸ್ಕøತಿಯಲ್ಲಿ ಎಲ್ಲಾ ಧರ್ಮದ ಎಲ್ಲಾ ಸಮುದಾಯದ ಜನತೆಗೆ ಸಾಮರಸ್ಯದಿಂದ ಬಾಳಲು ಅವಕಾಶ ಕಲ್ಪಿಸಿಕೊಟ್ಟಿದೆ. ಧರ್ಮ ಬೇರೆ ಆಚರಣೆ ಬೇರೆ ಆದರೂ ಅವೆಲ್ಲವುಗಳ ಗುರಿ ಮಾನವ ಕಲ್ಯಾಣವಾಗಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಜಾತಿ ಜನಾಂಗದಲ್ಲಿ ಜನ್ಮ ತಾಳಿದರೂ ಅವರ ವಿಶ್ವ ಬಂಧುತ್ವದ ಸೌಹಾರ್ದತೆಯ ಚಿಂತನಗಳು ಎಲ್ಲಾ ವರ್ಗದ ಜನರಿಗೂ ಅನ್ವಯಿಸುತ್ತವೆ ಎಂಬುದನ್ನು ಯಾರೂ ಮರೆಯಬಾರದು. ಇತ್ತೀಚೆಗೆ ಕೆಲವು ಜನರು ಮಹಾತ್ಮರನ್ನು ಜಾತಿಯ ಬಂಧನದಲ್ಲಿ ಕಟ್ಟಿಹಾಕುವುದನ್ನು ಕಾಣುತ್ತೇವೆ. ಆದರೆ ಅವರ ಲೋಕೋತ್ತರ ಆಧ್ಯಾತ್ಮ ಮತ್ತು ಸಾಮಾಜಿಕ ಚಿಂತನಗಳು ಎಲ್ಲ ಜನರಿಗೆ ಅವಶ್ಯಕವಾಗಿವೆ. ಅವಧೂತ ದತ್ತಗಿರಿ ಮಹಾರಾಜ್ ಅವರ ತಪಸ್ಸು, ತ್ಯಾಗ, ಸೌಹಾರ್ದ ಮತ್ತು ಎಲ್ಲ ಸಮುದಾಯವನ್ನು ಪ್ರೀತಿಸುವ ಉತ್ಕøಷ್ಟ ಭಾವನೆಗಳು ದಾರಿ ದೀಪವಾಗಿವೆ. ನೂರು ವರುಷ ತುಂಬಿದ ಸಂದರ್ಭದಲ್ಲಿ ನೂರೊಂದು ದಿನ ಸವಿಸ್ತಾರ ಕಾರ್ಯಕ್ರಮ ಹಮ್ಮಿಕೊಂಡಿರುವುದು ಧರ್ಮಾಭಿಮಾನಿಗಳಿಗೆ ಹರುಷ ತಂದಿದೆ ಎಂದರು.

ಹುಡುಗಿ ಹಿರೇಮಠದ ವಿರುಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ ಸಮಾರಂಭದಲ್ಲಿ ಬಿಚಗುಂದ, ರಾಜೇಶ್ವರ, ಹಳ್ಳಿಖೇಡ, ಹುಡುಗಿ ವಿರಕ್ತಮಠ ಶ್ರೀಗಳು ಪಾಲ್ಗೊಂಡಿದ್ದರು. ಮೇಹಕರ ಹಿರೇಮಠದ ರಾಜೇಶ್ವರ ಶಿವಾಚಾರ್ಯ ಸ್ವಾಮಿಗಳು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅವಧೂತ ದತ್ತಗಿರಿ ಮಹಾರಾಜರ ಕ್ಷೇತ್ರಾಭಿವೃದ್ಧಿ ಪಡಿಸುವಲ್ಲಿ ಶ್ರಮಿಸಿದ ಅವಧೂತ ದತ್ತಗಿರಿ ಮಹಾರಾಜ್, ಮಾತಾ ಅನಸೂಯಾ ಮತ್ತು ಸಿದ್ಧೇಶ್ವರಾನಂದ ಮಹಾರಾಜ್‍ರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಶಾಲು ಹೊದಿಸಿ ಫಲಪುಷ್ಪ ಸ್ಮರಣಿಕೆ ನೀಡಿ ಆಶೀರ್ವದಿಸಿದರು.

ನೂರು ದಿನಗಳ ಕಾಲ ನಿತ್ಯದಲ್ಲಿ ಅತಿರುದ್ರ, ಶ್ರೀರುದ್ರ, ದತ್ತಯಜ್ಞ, ಸಪ್ತ ಕೋಟಿ ಜಪಯಜ್ಞ, ಅಖಂಡ ಮಂತ್ರ ಪಠಣ ಕಾರ್ಯಕ್ರಮಗಳು ಜರುಗುತ್ತವೆ. ಶ್ರೀ ರಂಭಾಪುರಿ ಜಗದ್ಗುರುಗಳು ಪಂಚ ಶಿವಲಿಂಗಗಳಿಗೆ ಪಂಚಾಮೃತ ಅಭಿಷೇಕ ಎರೆಯುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಲವಾರು ರಾಜಕೀಯ ಗಣ್ಯರು ದಾನಿಗಳು ಮತ್ತು ಭಕ್ತರು ಪಾಲ್ಗೊಂಡಿದ್ದರು. ಸಮಾರಂಭಕ್ಕೂ ಮುನ್ನ ಶ್ರೀ ರಂಭಾಪುರಿ ಜಗದ್ಗುರುಗಳವರನ್ನು ಸಾರೋಟ ಉತ್ಸವದೊಂದಿಗೆ ಬರಮಾಡಿಕೊಂಡರು. ಅನ್ನ ದಾಸೋಹ ನಿರಂತರ ಜರುಗುತ್ತಿರುವುದು ಮತ್ತೊಂದು ವಿಶೇಷವಾಗಿತ್ತು. -ಸಿದ್ರಾಮಪ್ಪ ಆಲಗೂಡಕರ ಕಲಬುರಗಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here