ನೆರೆ ಹಾವಳಿಯಿಂದ ನೂರಾರು ಎಕರೆ ಬೆಳೆ ನಾಶ-ಜೆಡಿ ದೇವಿಕಾ ಆರ್

0
68

ಸುರಪುರ: ಕೃಷ್ಣಾ ನದಿ ಪ್ರವಾಹದಿಂದ ತಾಲ್ಲುಕಿನ ಚೌಡೇಶ್ವರಿಹಾಳ,ಅಡ್ಡೋಡಗಿ,ಹೆಮ್ಮಡಗಿ,ಶೆಳ್ಳಿಗಿ ಸೇರಿದಂತೆ ಅನೇಕ ಗ್ರಾಮಗಳ ನೂರಾರು ಎಕರರೆ ಜಮೀನಲ್ಲಿ ಬೆಳೆದ ಬೆಳೆಗಳು ನಷ್ಟಗೊಂಡಿವೆ ಎಂದು ಯಾದಗಿರಿ ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಆರ್ ತಿಳಿಸಿದರು.

ನೆರೆಯಿಂದ ನಷ್ಟಕ್ಕೊಳಗಾದ ವಿವಿಧ ಗ್ರಾಮಗಳ ಜಮೀನುಗಳಿಗೆ ಭೇಟಿ ನೀಡಿ ಮಾತನಾಡಿ,ದಿನದಿಂದ ದಿನಕ್ಕೆ ನೀರಿನ ಪ್ರಮಾಣ ಹೆಚ್ಚುತ್ತಲಿದ್ದು ಇನ್ನೂ ಹೆಚ್ಚಿನ ಬೆಳೆ ಹಾಣಿ ಸಂಭವವಿದ್ದು,ಸದ್ಯ ಸುರಪುರ ಹೋಬಳಿ ಗ್ರಾಮಗಳಲ್ಲಿ ೯೮೫ ಎಕರೆ ಭತ್ತ,೨೮೦ ಎಕರೆ ಹತ್ತಿ,೯೦ ಎಕರೆ ತೊಗರಿ ಬೆಳೆ ಹಾಳಾಗಿದೆ ಎಂದು ಅಂದಾಜಿಸಲಗಿದೆ.ಇದರ ಪ್ರಮಾಣ ಇನ್ನೂ ಹೆಚ್ಚುವ ಸಾಧ್ಯತೆ ಇದೆ ಎಂದರು.

Contact Your\'s Advertisement; 9902492681

ಈ ಬೆಳೆ ನಷ್ಟವನ್ನು ಪ್ರಕೃತಿ ವಿಕೋಪಗಳಲ್ಲಿ ಒಂದಾಗಿದ್ದು ರಯತರು ಬೆಳೆ ನಷ್ಟದಿಂದ ತಪ್ಪಿಸಿಕೊಳ್ಳಲು ಕರ್ನಾಟಕ ರೈತ ಸುರಕ್ಷಾ ಯೋಜನೆ ಮತ್ತು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಮೂಲಕ ಲಾಭ ಪಡೆದುಕೊಳ್ಳುವಂತೆ ತಿಳಿಸಿದರು.ಗ್ರಾಮ ಪಂಚಾಯತಿ ಮಟ್ಟದ ಬೆಳೆಗಳಾದ ಭತ್ತ,ತೊಗರಿ ರೈತರಿಗೆ ವಿಮಾ ಕಂತು ಪಾವತಿಸಲು ಈ ತಿಂಗಳ ೧೪ನೇ ತಾರೀಖಿನವರೆಗು ಅವಕಾಶವಿದ್ದು ಇದರ ಸದುಪಯೋಗ ಪಡೆಯುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಸಹಾಯಕ ಕೃಷಿ ಅಧಿಕಾರಿ ದಾನಪ್ಪ ಕತ್ನಳ್ಳಿ,ಕೃಷಿ ಅಧಿಕಾರಿ ಡಾ: ಭೀಮರಾಯ ಹವಲ್ದಾರ ಸೇರಿದಂತೆ ಅನೇಕ ರೈತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here