ಕಲಬುರಗಿ: ವಿದ್ಯಾರ್ಥಿಗಳಿಂದ ತಂದೆ ತಾಯಿಗಳ ಪಾದಪೂಜೆ 

0
25

ಕಲಬುರಗಿ: ಶರಣಬಸವ ವಿಶ್ವವಿದ್ಯಾಲಯದಲ್ಲಿ ಶನಿವಾರದಂದು ಮೊದಲ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ಅವರವರ ತಂದೆ ತಾಯಿಗಳಿಗೆ ಪಾದಪೂಜೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳು ಹಾಗೂ ಅವರ ತಂದೆತಾಯಂದಿರು ಬಹಳ ಉತ್ಸಾಹದಿಂದ ಪಾಲ್ಗೊಂಡಿದ್ದರು. ಮೋಟಿವೇಶನಲ್ ಸ್ಪೀಕರ್ ಸತೀಶ್ ಆರ್ ಅವರು ಮಕ್ಕಳಿಗೆ ಪಾದಪೂಜೆಯ ವಿಧಿವಿಧಾನಗಳನ್ನು ಹೇಳಿಕೊಟ್ಟರು ಹಾಗೂ ತಾಯಿಗೆ ಮಮ್ಮಿ ಎನ್ನದೆ ಅಮ್ಮಾ ಎಂದು ಕರೆಯಬೇಕೆಂದು ಮನವರಿಕೆ ಮಾಡಿಕೊಟ್ಟರು.

Contact Your\'s Advertisement; 9902492681

ಎಲ್ಲಾ ವಿದ್ಯಾರ್ಥಿಗಳು ಮೊದಲಿಗೆ ತಮ್ಮ ತಂದೆತಾಯಿಯವರ ಪಾದಗಳನ್ನು ತೊಳೆದು, ಕುಂಕುಮ ಹಚ್ಚಿ, ಪುಷ್ಪಗಳನ್ನಿಟ್ಟು, ಗಂಧದ ಕಡ್ಡಿಗಳಿಂದ ಬೆಳಗಿ, ಕರ್ಪೂರದಾರತಿ ಬೆಳಗಿ ಆಶೀರ್ವಾದ ಪಡೆದು ಪುನೀತರಾದರು. ಸತೀಶರವರು ಕ್ರಮವಾಗಿ ಮಂತ್ರ ಘೋಷಣೆ ಮಾಡಿ ಹಾಡುಗಳನ್ನು ಹಾಡಿ ಮಕ್ಕಳಿಗೆ ಉತ್ತೇಜಿಸಿದರು.

ಈ ಪಾದಪೂಜೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಅವರ ತಂದೆತಾಯಂದಿರು ಗದ್ಗತಿಕರಾಗಿ ಆನಂದಭಾಷ್ಫ ಸುರಿಸಿದ ದೃಶ್ಯ ಮೈನವಿರೇಳಿಸುವಂತಿತ್ತು. ಇದನ್ನು ನೋಡಿ ವೇದಿಕೆ ಮೇಲೆ ಉಪಸ್ಥಿತರಿರುವ ಗಣ್ಯರು ಕೂಡಾ ಆನಂದಭಾಷ್ಫ ಸುರಿಸಿದರು.

ಈ ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಾ, ಶರಣಬಸವ ವಿಶ್ವವಿದ್ಯಾಲಯ ಹಾಗೂ ಅಧ್ಯಾಪಕ ವೃಂದಕ್ಕೆ ಈ ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು.

ಈ ಸಂದರ್ಭದಲ್ಲಿ ಶರಣಬಸವ ವಿಶ್ವವಿದ್ಯಾಲಯದ ಸಮಕುಲಪತಿ ಪ್ರೊ.ವಿ.ಡಿ.ಮೈತ್ರಿ, ಕುಲಸಚಿವ ಡಾ.ಅನಿಲಕುಮಾರ ಬಿಡವೆ, ಡೀನ್ ಡಾ.ಲಕ್ಷೀ ಪಾಟೀಲ್ ಮಾಕಾ, ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here