ಮಣ್ಣಿನ ಆರೋಗ್ಯ ಕಾಪಾಡಿ: ಡಾ. ಎಸ್.ಕೆ. ಜಯಲಕ್ಷ್ಮಿ

0
36

ಕಲಬುರಗಿ: ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ವಲಯ ಕೃಷಿ ಸಂಶೋಧನಾ ಕೇಂದ್ರ, ಕೃಷಿ ಮಹಾವಿದ್ಯಾಲಯ, ಮತ್ತು ಮೈರಾಡ, ಹೆಚ್.ಡಿ.ಎಫ್.ಸಿ ಬ್ಯಾಂಕ್, ಇವರ ಸಂಯುಕ್ತ ಆಶ್ರಯದಲ್ಲಿ “ವಿಶ್ವ ಮಣ್ಣು ದಿನಾಚರಣೆ-2022” ಯನ್ನು ಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ. ಎಸ್.ಕೆ. ಜಯಲಕ್ಷ್ಮಿ, ಪ್ರಭಾರಿ ಡೀನ್(ಕೃಷಿ), ಕೃಷಿ ಮಹಾವಿದ್ಯಾಲಯ, ರವರು ಭೂಮಿಯ ಮೇಲಿನ ಮಣ್ಣನ್ನು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಮತ್ತು ರೈತ ಬಾಂಧವರು ಮಣ್ಣಿನ ಫಲವತ್ತತೆಯ ಆಧಾರದ ಮೇಲೆ ರಾಸಾಯನಿಕ ಗೊಬ್ಬರಗಳನ್ನು ಬಳಸಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಕೃಷಿ ವಿಜ್ಞಾನ ಕೇಂದ್ರದ ಪ್ರಭಾರಿ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ. ವಾಸುದೇವ ನಾಯ್ಕ್ ರವರು ವಿಶ್ವ ಮಣ್ಣು ದಿನಾಚರಣೆಯ ಮಹತ್ವ ಮತ್ತು ರಾಸಾಯನಿಕ ಮುಕ್ತ ಕೃಷಿ ಕೈಗೊಳ್ಳಬೇಕೆಂದು ರೈತರಿಗೆ ಕರೆ ನೀಡಿದರು.

Contact Your\'s Advertisement; 9902492681

ಮಣ್ಣು ವಿಜ್ಞಾನಿ ಡಾ. ನಿವಾಸ ಬಿ.ವಿ ರವರು ಮಾತನಾಡಿ ರೈತರು ಕಾಲಕಾಲಕ್ಕೆ ಮಣ್ಣಿನ ಪರೀಕ್ಷೆ ಮಾಡಿಸಿ ವೈಜ್ಞಾನಿಕ ರೀತಿಯಿಂದ ಗೊಬ್ಬರಗಳನ್ನು ಬಳಸುವ ಮೂಲಕ ಮಣ್ಣಿನ ಆರೋಗ್ಯದ ಜೊತೆಗೆ ಮನುಷ್ಯರ ಆರೋಗ್ಯವನ್ನೂ ಕಾಪಾಡಬೇಕೆಂದು ತಿಳಿಸಿದರು ಹಾಗೂ ಇಂದಿನ ಆಧುನಿಕ ಕೃಷಿಯಲ್ಲಿ ಅತಿಯಾದ ರಾಸಾಯನಿಕ ಬಳಕೆ, ಮಣ್ಣಿನ ಸವಕಳಿ ಮತ್ತು ಅಂತರ್ಜಲ ಕಲುಷಿತ ಮುಂತಾದ ಸಮಸ್ಯೆಗಳಿಂದ ಇಂದು ಆಹಾರವು ವಿಷವಾಗಿ ಮಾರ್ಪಟ್ಟಿದೆ ಆದ್ದರಿಂದ ಮಣ್ಣು ಸಂರಕ್ಷಣೆ ಇಂದಿನ ಅಗತ್ಯವಾಗಿದೆ ಮತ್ತು ಸಮತೋಲನ ಗೊಬ್ಬರಗಳನ್ನು ಬಳಸುವುದರಿಂದ ಮಣ್ಣಿನ ಆರೋಗ್ಯವನ್ನು ನಿರಂತರವಾಗಿ ಕಾಪಾಡಿಕೊಂಡು ಹೋಗಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಡಾ. ಆನಂದ ನಾಯ್ಕ್, ಸಹಾಯಕ ಪ್ರಾಧ್ಯಾಪಕರು, ಕೃಷಿ ಮಹಾವಿದ್ಯಾಲಯ ವಿಶೇಷ ಉಪನ್ಯಾಸ ನೀಡುತ್ತಾ ತಮ್ಮ ಜಮೀನಿನ ಮಣ್ಣಿನ ಫಲವÀತ್ತತೆ ತಿಳಿಯಲು ಪ್ರತಿ 2 ವರ್ಷಕ್ಕೊಮ್ಮೆ ಮಣ್ಣನ್ನು ವೈಜ್ಞಾನಿಕ ರೀತಿಯಿಂದ ಮಾದರಿಗಳನ್ನು ತೆಗೆದುಕೊಂಡು ಪರೀಕ್ಷೆ ಮಾಡಿ ಬೆಳೆ ಬೆಳೆÉಯಬೇಕೆಂದು ಕರೆ ನೀಡಿದರು. ಮಲ್ಲಿನಾಥ ಹೇಮಾಡಿ, ಹೈನು ವಿಜ್ಞಾನ ಮಹಾವಿದ್ಯಾಲಯ, ಮಹಾಗಾಂವ,  ಜಿಲ್ಲೆ ಮಣ್ಣಿನ ಸಂರಕ್ಷಣೆಯಲ್ಲಿ ಸಾವಯವ ಗೊಬ್ಬರಗಳ ಪಾತ್ರದ ಕುರಿತು ವಿವರಿಸಿದರು.

ಅತಿಥಿಗಳಾಗಿ ಆಗಮಿಸಿದಶಿವಪ್ರಭು ಪಾಟೀಲ್ ಮಹಾಗಾಂವ, ನಿಕಟಪೂರ್ವ ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಜಿಲ್ಲಾ ಪಂಚಾಯತ್,  ರವರು ಮಾತನಾಡಿ ಭೂಮಿಯ ಮೇಲೆ ಒಂದು ಇಂಚು ಮಣ್ಣು ತಯಾರಾಗಲು ಒಂದು ಸಾವಿರ ವರ್ಷಗಳು ಬೇಕಾಗುತ್ತದೆ. ಹೀಗಾಗಿ ರೈತರು ತಮ್ಮ ಮುಂದಿನ ಪೀಳಿಗೆಗಾಗಿ ಮಣ್ಣನ್ನು ಪ್ರೀತಿಸಿ ಕಡಿಮೆ ಪ್ರಮಾಣದ ಗೊಬ್ಬರಗಳನ್ನು ಬಳಸುವ ಮೂಲಕ ಮಣ್ಣಿನ ಫಲವತತ್ತೆಯನ್ನು ಉಳಿಸಬೇಕೆಂದು ಮನವಿ ಮಾಡಿದರು.

ಶರಣಗೌಡ ಡಿ. ಪಾಟೀಲ್, ಜಿಲ್ಲಾ ಪಂಚಾಯತ್ ಸದಸ್ಯರು, ಜಿಲ್ಲಾ ಪಂಚಾಯತ್, ರವರು ಮಾತನಾಡಿ ರೈತರು ಕೃಷಿಯಲ್ಲಿ ಸುಧಾರಿತ ತಂತ್ರಜ್ಞಾನಗಳಿಗಾಗಿ ಕೃಷಿ ವಿಜ್ಞಾನಿಗಳ ಸಲಹೆ ಸೂಚನೆಗಳನ್ನು ಪಡೆಯಬೇಕೆಂದರು. ಚನ್ನವೀರಪ್ಪಾ ಎಂ. ಸಲಗರ್, ನಿಕಟಪೂರ್ವ ತಾಲೂಕಾ ಪಂಚಾಯತ್ ಅಧ್ಯಕ್ಷರು, ತಾಲೂಕಾ ಪಂಚಾಯತ್,  ರವರು ಮಾಡನಾಡಿ ರೈತರು ಕೆವಿಕೆಯ ಸೌಲಭ್ಯಗಳು ಮತ್ತು ಮಾಹಿತಿಗಳನ್ನು ಪಡೆದು ಕೃಷಿಯಲ್ಲಿ ಉತ್ತಮ ಇಳುವರಿ ಮತ್ತು ಆದಾಯವನ್ನು ಪಡೆಯಬೇಕೆಂದರು.

ಕಾರ್ಯಕ್ರಮದಲ್ಲಿ ಮಣ್ಣು ಆರೋಗ್ಯದ ಕುರಿತ ಹಸ್ತ ಪತ್ರಿಕೆ ಬಿಡುಗಡೆಗೊಳಿಸಿ, ಮಣ್ಣು ಆರೋಗ್ಯ ಚೀಟಿಯನ್ನು ವಿತರಿಸಲಾಯಿತು. ನಂತರ ವಿವಿಧ ಪ್ರಾತ್ಯಕ್ಷಿಕೆ ಘಟಕಗಳಿಗೆ ಭೇಟಿ ನೀಡಲಾಯಿತು. ಡಾ. ಶಿವಕುಮಾರ ಚಿಂಚೂರೆ, ಸಹಾಯಕ ಸಂಶೋಧಕರು,ಶಂಕರ್ ಉಜಳಂಬೆ, ಕಾರ್ಯಕ್ರಮ ಅಧಿಕಾರಿಗಳು, ಮೈರಾಡ್, ಹೆಚ್.ಡಿ.ಎಫ್.ಸಿ ಬ್ಯಾಂಕ್, ಸಿಬ್ಬಂದಿಗಳಾದ ನಾಮದೇವ ಸಾವರೆ, ವೀರಭದ್ರ ಸ್ವಾಮಿ, ಶರತ್ ಸಿರೂರ್ ಮತ್ತು ಶರಣಯ್ಯ ಸ್ವಾಮಿ ಮತ್ತು ಜಿಲ್ಲೆಯ ಆಳಂದ ತಾಲೂಕಿನ ಕಿಣ್ಣಿ ಸುಲ್ತಾನ ಮತ್ತು ಹಿತ್ತಲ ಶಿರೂರ್ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಗ್ರಾಮಗಳಿಂದ 110ಕ್ಕೂ ಹೆಚ್ಚು ರೈತ ಹಾಗೂ ರೈತ ಮಹಿಳೆಯರು ಭಾಗವಹಿಸಿದರು. ಕಾರ್ಯಕ್ರಮವನ್ನು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ. ಜಹೀರ್ ಅಹೆಮದ್ ರವರು ನಿರೂಪಿಸಿದರೆ, ಡಾ. ಮಂಜುನಾಥ ಪಾಟೀಲ್ ರವರು ವಂದಿಸಿದರು.

ಕೃಷಿ ವಿಜ್ಞಾನ ಕೇಂದ್ರ, ಯಲ್ಲಿ ಜರುಗಿದ ವಿಶ್ವ ಮಣ್ಣು ದಿನಾಚರಣೆ-2022 ಯನ್ನು ಮಣ್ಣಿಗೆ ಪೂಜಿಸುವ ಮೂಲಕ ಉದ್ಘಾಟಿಸಲಾಯಿತು. ವಿಶ್ವ ಮಣ್ಣು ದಿನಾಚರಣೆಯಲ್ಲಿ ಮಣ್ಣು ಆರೋಗ್ಯ ಕುರಿತು ಹಸ್ತ ಪ್ರತಿಕೆಯನ್ನು ಬಿಡುಗಡೆಗೊಳಿಸಲಾಯಿತು. ವಿಶ್ವ ಮಣ್ಣು ದಿನಾಚರಣೆಯಲ್ಲಿ ರೈತರಿಗೆ ಮಣ್ಣು ಆರೋಗ್ಯ ಚೀಟಿಯನ್ನು ವಿತರಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here