ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ 66 ನೇ ಮಹಾಪರಿ ನಿರ್ಮಾಣ ದಿನಾಚರಣೆ

0
24

ಕಲಬುರಗಿ: ಕೇಂದ್ರ ಕಾರಾಗೃಹದಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರರವರ 66 ನೇ ಮಹಾಪರಿ ನಿರ್ಮಾಣ ದಿನಾಚರಣೆ ಕಾರ್ಯಕ್ರಮವನ್ನು ಅಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಡಾ.ಪಿ. ರಂಗನಾಥ್‍ರವರು ಡಾ.ಬಾಬಾಸಾಹೇಬ ಅಂಬೇಡ್ಕರರವರ ಭಾವ ಚಿತ್ರಕ್ಕೆ ಪೂಜೆ ಹಾಗೂ ಪುಷ್ಪಾರ್ಚಣೆ ಮಾಡಿ ಸಂಭಾಷೆಯಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರರವರು ನಮ್ಮನೆಲ್ಲ ಅಗಲಿದ ದಿನ ಕೇವಲ ಶರೀರವಷ್ಟೆ ನಮಿಂದ ದೂರವಾಗಿದೆ.ಅವರು ಹಾಕಿಕೊಟ್ಟ ಆರ್ದಶ ತತ್ವಗಳು,ಸಮಾನತೆ, ಸ್ವಾಭಿಮಾನದ ಬದುಕು ಪ್ರತಿಯೊಬ್ಬ ಭಾರತಿಯನ ಹಕ್ಕು, ಅದನ್ನು ಸಂವಿಧಾನದ ಮೂಲಕ ಈ ದೇಶಕ್ಕೆ ಗ್ರಂಥ ರೂಪದಲ್ಲಿ ಕೊಡೆಗೆಯಾಗಿ ನೀಡಿದಂತಹ ಮಹಾಮಾನವತವಾದಿ ಇಂತಹ ವ್ಯಕ್ತಿ ಪ್ರತಿಯೊಬ್ಬ ಭಾರತಿಯನ ಬಾಳಿಗೆ ಜ್ಯೊತಿ ಸಂಜೀವಿನಿಯಾಗಿ ಜನ್ಮತಾಳಿದ ಮಹಾನ್ ಚೇತನವಾದಿ ಅವರಿಗೆ ನಾವುಗಳು ಅಂದರೆ ಪ್ರತಿಯೊಬ್ಬರು ಸಾಕ್ಷರತೆಯನ್ನು ಪಡೆದು ದೇಶದ ಅಭಿವೃದ್ಧಿಗೆ ನಮ್ಮದೇ ಆದ ಕೊಡುಗೆಯನ್ನು ನೀಡಿದಲ್ಲಿ ನಾವುಗಳು ಅವರಿಗೆ ಗೌರವ ಮತ್ತು ನಮನವನ್ನು ಸಲ್ಲಿಸಿದಂತಾಗುತ್ತದೆಂದು ಹೇಳಿದರು.

Contact Your\'s Advertisement; 9902492681

ಬಿ.ಎಂ.ಕೊಟ್ರೇಶ್ ಅಧೀಕ್ಷಕರು, ಕೇಂದ್ರ ಕಾರಾಗೃಹ ಕಲಬುರಗಿರವರು ಮಾತನಾಡುತ್ತಾ, ಡಾ.ಬಾಬಾಸಾಹೇಬ ಅಂಬೇಡ್ಕರರವರ ತತ್ವಾರ್ದಶಗಳನ್ನು  ಜೀವನದಲ್ಲಿ ಅಳವಡಿಸಿಕೊಂಡು ಪ್ರತಿಯೊಬ್ಬರು ಸಹೋದರತ್ವ ಭಾವನೆಗಳನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.

ವಿ. ಕೃಷ್ಣಮೂರ್ತಿ, ಸಹಾಯಕ ಅಧೀಕ್ಷಕರು, ಕೇಂದ್ರ ಕಾರಾಗೃಹ ಕಲಬುರಗಿರವರು ಮಾತನಾಡುತ್ತಾ, “ದೇಶ ಸುತ್ತಿ ಕೋಶ ಓದು” ಎಂಬಂತೆ ಡಾ.ಬಾಬಾಸಾಹೇಬ ಅಂಬೇಡ್ಕರರವರು ಈ ದೇಶಕ್ಕೆ ನೀಡಿದ ಅಮೂಲ್ಯ ರತ್ನವಾದ ಸಂವಿಂಧಾನ ಅವರಲ್ಲಿ ಅಡಗಿರುವ ಪ್ರತಿಯೊಬ್ಬ ಭಾರತಿಯರು ಯಾವ ರೀತಿ ಹೇಗೆ ಬದುಕನ್ನು ಕಟ್ಟಿಕೊಳ್ಳಬಹುದು ಎಂಬ ಸತ್ಯದ ಸಂಪೂರ್ಣ ಸಾರಾಂಶವು ತುಂಬಿ ತುಳುಕುತಿದೆ. ಅದನ್ನು ನಾವುಗಳು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಂಡು ಉತ್ತಮ ಜೀವನವನ್ನು ನಡೆಸಿದಲ್ಲಿ ನಾವುಗಳು ಅವರಿಗೆ ನಿಜವಾದ ಗೌರವನ್ನು ಸಲ್ಲಿಸಿದಂತಾಗುತ್ತದೆಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಸಹಾಯಕ ಅಧೀಕ್ಷಕರಾದ ಹುಸಾನಿ ಪೀರ, ಜೈಲರ್‍ಗಳಾದ ಸ್ಯನಾಜ್ ಎಂ. ನಿಗೇವಾನ್, ಸರೋಜ ಎಸ್.ಟಿ  ಅರ್ಜುನ್‍ಸಿಂಗ್ ಚವ್ಹಾಣ, ಅಶೋಕ ಹೊಸಮನಿ, ಕಾರಾಗೃಹದ ಎಲ್ಲಾ ಅಧಿಕಾರಿ/ಸಿಬ್ಬಂದಿ ವರ್ಗದವರು ಭಾಗವಹಿಸಿದರು. ಈ ಸಂದರ್ಭದಲ್ಲಿ ಬಂದಿಗಳಿಗೆ ಸಹಿ ವಿಚರಿಸಲಾಯಿತು.

ಬಂದಿಗಳಿಂದ ಪ್ರಾರ್ಥನೆಯನ್ನು ಹಾಡಿಸಲಾಯಿತು. ಈ ಕಾರ್ಯಕ್ರದ ನಿರೂಪಣೆಯನ್ನು  ನಾಗಾರಾಜ ಮುಲಗೆ ಶಿಕ್ಷಕರು ಕೇಂದ್ರ ಕಾರಾಗೃಹ ಕಲಬುರಗಿರವರು ನೆಡಸಿಕೊಟ್ಟರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here