ಕಲಬುರಗಿ ನವನಗರ ನಿರ್ಮಾಣಕ್ಕೆ ಕೆಡಿಎ ಅಧ್ಯಕ್ಷ ಅವಿನಾಶ ಕುಲಕರ್ಣಿಗೆ ಒತ್ತಾಯ

0
125

ಕಲಬುರಗಿ: ನಗರಾಭಿವೃಧ್ದಿ ಪ್ರಾಧಿಕಾರ ನವನಗರ ನಿರ್ಮಾಣಕ್ಕೆ ಯೋಜನೆ ರೂಪಿಸಿ ಅನುಷ್ಠಾನಗೊಳಿಸಲು ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ನಿಯೋಗ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿಯವರ ನೇತೃತ್ವದಲ್ಲಿ ನೂತನ  ಕೆಡಿಎ ಅಧ್ಯಕ್ಷರಾದ ಅವಿನಾಶ ಕುಲಕರ್ಣಿಯವರಿಗೆ ಭೇಟಿ ಮಾಡಿ  ವಿವರವಾಗಿ ಚರ್ಚಿಸಿ ಪ್ರಸ್ತಾವನೆ ಸಲ್ಲಿಸಲಾಯಿತು.

ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚಾಗುತ್ತಿದಂತೆ ಕಲಬುರಗಿ ಮಹಾನಗರ ಜನಸಾಂದ್ರತೆಯಿಂದ ಜನರಿಗೆ ನಡೆದಾಡಲು ಮತ್ತು ವಹಾನಗಳ ಸಂಚಾರಕ್ಕೆ ಬಹಳ ತೊಂದರೆ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ.ವ್ಯಾಪಾರ, ವಹಿವಾಟು ಆಯಾ ಬಜಾರ್ ಗಳಿಗೆ ಸೀಮಿತವಾಗಿ ಒತ್ತಡ ಹೆಚ್ಚಾಗುತ್ತಿದೆ ಎಂದು ತಿಳಿಸಿದರು.

Contact Your\'s Advertisement; 9902492681

ನವನಗರ ನಿರ್ಮಾಣದಿಂದ ಸರಕಾರದಿಂದ,ಖಾಸಗಿ ವಲಯದಿಂದ  ಶೈಕ್ಷಣಿಕ, ಕೈಗಾರಿಕಾ, ವಾಣಿಜ್ಯ, ಮುಂತಾದ ಘಟಕಗಳು ಇಲ್ಲಿ ಸ್ಥಾಪನೆಗೆಯಾಗುವದರಿಂದ ಲಕ್ಷಾಂತರ ಉದ್ಯೋಗಗಳು  ಸೃಷ್ಟಿಯಾಗುವವು,ಆರ್ಥಿಕವಾಗಿ ಹಿಂದುಳಿದ ಎಲ್ಲಾ ವರ್ಗದ ಜನರು ಮನೆ, ವ್ಯಾಪಾರ, ಉದ್ಯೋಗ ಸೇರಿದಂತೆ  ಮುಂತಾಗಿ ಕನಸು ನನಸುಗುತ್ತವೆ ಎಂದರು.

ಈ ಸಂದರ್ಭದಲ್ಲಿ ಸಮಿತಿಯ ಮುಖಂಡರಾದ ಮನೀಷ ಜಾಜು, ಬಿ.ಬಿ.ನಾಯಕ, ಲಿಂಗರಾಜ ಸಿರಗಾಪೂರ, ಡಾ.ಭದ್ರಶೆಟ್ಟಿ ಎ.ಎಸ್, ಅಸ್ಲಮ ಚೌಂಗೆ,ಜ್ಞಾನಮಿತ್ರ ಶಾಮಿವೆಲ್, ವಿನೋದ ಪಾಟೀಲ, ನಿಯೋಗದಲ್ಲಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here