ಆಶ್ರಯ ಕಾಲೋನಿ ಸರ್ವೆ ನಂ ಬದಲಾವಣೆ ವಿಚಾರ: ಪಾಲಿಕೆ ಮುಂದೆ ಪ್ರತಿಭಟನೆ

0
49
  • ಆಯುಕ್ತರಿಂದ ಎರಡು ವಾರಗಳ ಗಡವು

ಕಲಬುರಗಿ: ಇಲ್ಲಿನ ಸೋನಿಯಾ ಗಾಂಧಿ ಆಶ್ರಯ ಕಾಲೋನಿಯ ಹಕ್ಕು ಪತ್ರದಲ್ಲಿ ಸರ್ವೆ ನಂಬರ್ ಬದಲಾವಣೆಯಾಗಿರುವುದನ್ನು ವಿರೋಧಿಸಿ ತಪ್ಪು ಸರಿಪಡಿಸಬೇಕೆಂದು ಒತ್ತಾಯಿಸಿ ಆಶ್ರಯ ಕಾಲೋನಿಯ ನಿವಾಸಿಗಳು ಕಲಬುರಗಿ ಮಹಾನಗರ ಪಾಲಿಕೆ ಕಚೇರಿ ಮುಂದೆ ಪ್ರತಿಭಟನೆ ಆಗ್ರಹಿಸಿದರು.

ಮಂಗಳವಾರ ಜಗತ್ ವೃತದ ಸಂವಿಧಾನ ಶಿಲ್ಪಿ ಡಾ. ಬಾಬಾ ಸಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಿವಾಸಿಗಳು ನಂತರ ಪಾಲಿಕೆ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

Contact Your\'s Advertisement; 9902492681

ಪ್ರತಿಭಟನೆಯಲ್ಲಿ ಕಾಲೋನಿಯಾ ನಿವಾಸಿ ಮೊಹಮ್ಮದ್ ಶಬ್ಬಿರ್ ಮಾತನಾಡಿ ಕಳೇದ 20 ಹಿಂದೆ ಮಹಾನಗರ ಪಾಲಿಕೆ ಸೋನಿಯಾ ಗಾಂಧಿ ಆಶ್ರಯ ಕಾಲೋನಿಯ ನಿವಾಸಿಗಳಿಗೆ ಹಕ್ಕು ಪತ್ರ ನೀಡಿತ್ತು. 2014 ವರೆಗೆ ಜನನ ಮರಣ ಪ್ರಮಾಣಗಳು ಸಹ ನೀಡಿತ್ತು. ಆದರೆ 8 ವರ್ಷಗಳಿಂದ ಪಾಲಿಕೆ ಟ್ಯಾಕ್ಸ್ ಪಡೆಯುತ್ತಿದೆ. ಇದೀಗ ಸೌಲಭ್ಯ ಕೇಳಿದರೆ ಸರ್ವೆ ನಂಬರ್ ನಮ್ಮ ವ್ಯಾಪ್ತಿ ಪ್ರದೇಶದಲ್ಲಿ ಬರುವುದಿಲ್ಲ ಎಂದು ತಳಿಹಾಕುತ್ತಿದ್ದಾರೆ.

 

ಗ್ರಾಮ ಪಂಚಾಯಿತ್ ಮತ್ತು ತಾಲ್ಲೂಕು ಪಂಚಾಯಿತ್ ತಮ್ಮ ವ್ಯಾಪ್ತಿಗೆ ಬರಲ್ಲ ಎಂದು ಹೇಳುತ್ತಾರೆ. ಇಲಾಖೆಯ ಇಂತಹ ದಂದ್ವ ನೀತಿಯಿಂದ 468 ಕುಟುಂಬಗಳು ಬಿದಿಗೆ ಬಂದ್ದು ಅತಂತ್ರಕ್ಕೆ ಸಿಲುಕಿವೆ. ತಕ್ಷಣ ನಮ್ಮ ಸಮಸ್ಯೆಗೆ ಪರಿಹಾರ ನೀಡಬೇಕೆಂದು ಪ್ರತಿಭಟನಕಾರರು ಪಾಲಿಕೆ ಕಚೇರಿ ಮುಂದೆ ಪಟ್ಟು ಹಿಡಿದರು.

ನಂತರ ಪಾಲಿಕೆ ಆಯುಕ್ತರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪಾಲಿಕೆ ಆಯುಕ್ತರಾದ ಪಾಟೀಲ್ ಭೂವನೇಶ್ ದೇವದಾಸ್ ಇಲಾಖೆಯಿಂದ ತಪ್ಪು ಆಗಿದೆ. ಆಗಿರುವ ತಪ್ಪಿನ ಬಗ್ಗೆ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಎರಡು ವಾರದೊಳಗೆ ಸಮಸ್ಯೆ ನಿವಾರಿಸುವುದಾಗಿ ಪ್ರತಿಭಟನಾಕಾರರಿಗೆ ಭರವಸೆ ನೀಡಿದ್ದಾರೆ ಎಂದು ಹೋರಾಟಗಾರರಾದ ರಫೀಕ್ ಹರಕಂಚಿ ತಿಳಿಸಿದ್ದಾರೆ.

ಪ್ರತಿಭಟನೆಯಲ್ಲಿ ಅಬುಬಕರ್ ಪಟೇಲ್, ಇಸಾಮ್ ಅನಸಾರಿ, ಸೆಂಟ್ರಿಂಗ್ ಗುತ್ತಿದ್ದಾರರಾದ ಫೇರೊಜ್, ನಬೀಲಾಲ್ ಬಾಗಬಾನ್, ಅಬ್ದುಲ್ ರವುಫ್, ಉಸ್ಮಾನ್ ಪಟೇಲ್, ಅಕ್ರಮ್ ಬೈ, ಹಮ್ಮದಿದ್ ಭಾಯಿ, ಅಬ್ದುಲ್ ವಹಾಬ್, ಮೋಹಿಸ್ ಹಾಫೀಜ್ ಸಾಬ್, ಇಫತೇಕಾರ್ ಅಹ್ಮದ್, ರುಕಮ್ ಭಾಯಿ, ಗುತ್ತೇದಾರರಾದ ನವಾಜ್, ಅಯೂಬ್ ಪಟೇಲ್, ಅಲ್ತಾಫ್, ಬಾಬಾ ಸಹೇಬ್, ಹಣ್ಣಿನ ವ್ಯಾಪಾರಿ ಇಮಾಮ್ ಸಾಬ್, ಬಾಬಾ, ನೂರೊದ್ದಿನ್ ಕಿರಾಣಾ ಸೇರಿದಂತೆ ನೂರಾರು ಮಹಿಳೆಯರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here