ಸುರಪುರ: ತಾಲೂಕಿನಲ್ಲಿ ಅಕ್ರಮ ಮರಳು ಸಾಗಾಣಿಕೆ ಹೆಚ್ಚುತ್ತಿದ್ದು ಇದಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿ ಜಯ ಕರ್ನಾಟಕ ರಕ್ಷಣಾ ಸೇನೆ ಸಂಘಟನೆ ತಹಸೀಲ್ದಾರರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದೆ.
ಸಂಘದ ತಾಲೂಕು ಅಧ್ಯಕ್ಷ ಮಲ್ಲಪ್ಪ ನಾಯಕ ಕಬಾಡಗೇರಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಮುಖಂಡರು,ಅಕ್ರಮ ಮರಳು ಸಾಗಾಣಿಕೆಯಿಂದ ಅಂತರ್ಜಲ ಮಟ್ಟ ಕುಸಿಯುತ್ತಿದೆ,ಅಜಾಗರೂಕತೆಯಿಂದ ಟಿಪ್ಪರ್ ಓಡಿಸುವುದರಿಂದ ಜನ ಜಾನುವಾರುಗಳಿಗೆ ಹಾನಿಯಾಗುತ್ತಿದೆ.ರಾಜಧನ ಇಲ್ಲದೆ ವiರಳು ಸಾಗಾಣಿಕೆ ಮಾಡುತ್ತಿರುವುದರಿಂದ ಸರಕಾರಕ್ಕೆ ಕೋಟ್ಯಾಂತರ ರೂಪಾಯಿಗಳ ನಷ್ಟವುಂಟಾಗುತ್ತಿದೆ.
ಇದೆಲ್ಲ ಗೊತ್ತಿದ್ದರು ಕಂದಾಯ ಇಲಾಖೆ ಮತ್ತು ಪೊಲೀಸ್ ಇಲಾಖೆ ನಿರ್ಲಕ್ಷ್ಯ ತೋರಿರುವುದು ಖಂಡನೀಯವಾಗಿದೆ.ಕಳೆದ ಎರಡು ದಿನಗಳ ಹಿಂದೆ ಟಿಪ್ಪರ್ ಅಜಾಗರೂಕತೆಯಿಂದ ಓಡಿಸಿದ್ದರಿಂದ ಚೌಡೇಶ್ವರಿಹಾಳ ಗ್ರಾಮದ ವ್ಯಕ್ತಿಯೊಬ್ಬ ಬಲಿಯಾಗಿರುವ ಘಟನೆ ನಡೆದಿದೆ.ಆದ್ದರಿಂದ ಕೂಡಲೇ ಈ ಅಕ್ರಮ ಮರಳು ಸಾಗಾಟ ಮಾಡುತ್ತಿರುವುದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದಲ್ಲಿ ನಮ್ಮ ಸಂಘಟನೆಯಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ನಂತರ ಉಪ ತಹಸೀಲ್ದಾರ್‍ಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಶರಣು ಬೈರಿಮರಡಿ,ರಾಜು ದರಬಾರಿ,ಹೊನ್ನಪ್ಪ ಬೈರಿಮರಡಿ,ರಾಮಚಂದ್ರ ಕಟ್ಟಿಮನಿ,ತಿಪ್ಪಣ್ಣ ಪೊಲೀಸ್ ಪಾಟೀಲ್,ರಾಘವೇಂದ್ರ ಕಟ್ಟಿಮನಿ,ರಾಘವೇಂದ್ರ ಗೋಗಿಕೇರಾ,ರವಿಚಂದ್ರ ನಾಯಕ ಬಿಚ್ಚಗತ್ತಿಕೇರಾ,ಶಿವಕುಮಾರ ದೀವಳಗುಡ್ಡ,ತಿಪ್ಪಣ್ಣ ಖಾನಿಕೇರಾ ಸೇರಿದಂತೆ ಅನೇಕರಿದ್ದರು.