ಗ್ರಾಮ ದೇವತೆ ಹೆನಸರಲ್ಲಿ ಕೋಣ ಕುರಿ ಬಲಿ ತಡೆಯಲು ಮನವಿ

0
32

ಸುರಪುರ:ತಾಲೂಕಿನ ಅನೇಕ ಗ್ರಾಮಗಳಲ್ಲಿ ಗ್ರಾಮ ದೇವತೆ,ಮರಗಮ್ಮ,ಕೆಂಚಮ್ಮ ಇವರ ಹೆಸರಿನಲ್ಲಿ ಜಾತ್ರೆ ನಡೆಸಿ ಕೋಣ ಕುರಿ ಬಲಿಯನ್ನು ನಡೆಸಲಾಗುತ್ತಿದೆ.ಇದನ್ನು ತಡೆಯುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಸಂಘಟನೆಯಿಂದ ಡಿವೈಎಸ್ಪಿಯವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು,ಸ್ವಾತಂತ್ರ್ಯ ಬಂದು 75 ವರ್ಷ ಗತಿಸಿದರು ಇನ್ನು ದೇಶದಲ್ಲಿ ದೇವರುಗಳ ಹೆಸರಲ್ಲಿ ಕೋಣ ಕುರಿ ಬಲಿ ನಡೆಸುತ್ತಿರುವ ಅನಿಷ್ಟ ಪದ್ಧತಿ ಇದೆ.ಈಗ ಇದೇ ತಿಂಗಳು 19ನೇ ತಾರೀಖು ತಾಲೂಕಿನ ತಳವಾರಗೇರ,ಜಾಲಿಬೆಂಚಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ನಡೆಯುವ ಜಾತ್ರೆಗಳಲ್ಲಿ ಕೋಣ ಕುರಿ ಬಲಿಗಳು ಯಥೆಚ್ಛವಾಗಿ ನಡೆಯುತ್ತವೆ.ಆದ್ದರಿಂದ ಕೂಡಲೇ ತಾವು ಕಾರ್ಯಪ್ರವೃತ್ತರಾಗಿ ಇದಕ್ಕೆ ಕಡಿವಾಣ ಹಾಕಬೇಕು ಇಲ್ಲವಾದಲ್ಲಿ ಉಗ್ರ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಎಚ್ಚರಿಸಿ ಡಿವೈಎಸ್ಪಿ ಡಾ:ಮಂಜುನಾಥ ಟಿ ಅವರಿಗೆ ಮನವಿ ಸಲ್ಲಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮುಖಂಡರಾದ ಮಾಳಪ್ಪ ಕಿರದಳ್ಳಿ,ಶರಣಪ್ಪ ತಳವಾರಗೇರ,ಗೊಲ್ಲಾಳಪ್ಪ ಕಟ್ಟಿಮನಿ,ಪರಶುರಾಮ ಸಾಸನೂರ,ಮಾನಪ್ಪ ಬಳಬಟ್ಟಿ,ಮಾನಪ್ಪ ಮೂಲಿಮನಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here