ಚಿಂಚೋಳಿ: ಪ್ರತಿಯೊಬ್ಬರ ಜೀವನದಲ್ಲಿ ಒಂದಿಲ್ಲಾ ಒಂದು ಅವಮಾನಗಳಾದಂತೆ ನಮ್ಮ ಮಾಹಪುರುಷರು ಸಮಾಜಿಕ ವ್ಯವಸ್ಥೆ ಪರಿವರ್ತನೆಗಾಗಿ ಹೋರಾಟ ಮಾಡುವಾಗ ಸಾಕಷ್ಟು ಅವಮಾನಗಳಾದರು ಅವುಗಳಿಗೆ ಎದೆಗುಂದದೆ ಅವಮಾನಗಳನ್ನು ಸವಲಾಗಿ ಸ್ವಿಕರಿಸಿ ಇಂದು ಸಮಾಜಕ್ಕೆ ಆದರ್ಶ ಮಾಹತ್ಮರಾಗಿದ್ದಾರೆಂದು ಚಿಂಚೋಳಿ ಪೋಲಿಸ್ ಠಾಣೆಯ ಪಿ.ಎಸ್.ಐ ಮಂಜುನಾಥರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು.
ಚಂದಾಪೂರ ಪಟ್ಟಣದ ಸರಕಾರಿ ಪದವಿ ಪೂರ್ವ ಮಾಹವಿದ್ಯಾಲಯದಲ್ಲಿ ಬಾಮಸೆಪ ಯ್ಯೂನಿಟಿ ಆಪ್ ಮೂಲನಿವಾಸಿ ಹಾಗೂ ಬಹುಜನ ವಿದ್ಯಾರ್ಥಿ ಪೆಡ್ರೇಷನ್ ಆಪ್ ಈಕ್ವಾಲಿಟಿ ಸಂಘಟನೆಗಳ ವತಿಯಿಂದ ಹಮ್ಮಿಕೊಂಡ ಮಾಹಪುರುಷರ ಜೀವನ ಸಂದೇಶ ಅಭಿಯಾನ ಸರಣಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮುಂದುವರೆದು ವಿದ್ಯಾರ್ಥಿಗಳು ನಾಡಿಗಾಗಿ ದುಡಿದ ಶರಣ ಸಂತರನ್ನು ಮನದಲ್ಲಿ ಸ್ಪೂರ್ತಿ ಯನ್ನಾಗಿ ಇಟ್ಟುಕೊಂಡು ತಂದೆ ತಾಯಿ ಶಿಕ್ಷಕರ ಮಾರ್ಗದರ್ಶನದಂತೆ ಮುನ್ನಡೆಯುತ್ತ ಕಷ್ಟ ಪಡದೆ ಇಷ್ಟ ಪಟ್ಟು ಅದ್ಯಯನ ಮಾಡಿದಾಗ ಮಾತ್ರ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಹೇಳಿದರು.
ನಂತರ ಮುಖ್ಯ ಅತಿಥಿಗಳಾಗಿ ದೇವಿದಾಸ ರಾಠೋಡ ಅದ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜು ಪ್ರಾಂಶುಪಾಲರಾದ ಮಲ್ಲಿಕಾರ್ಜುನ ಪಾಲಮೂರವರು ಪ್ರಸ್ತುತ ದಿನಮಾನಗಳಲ್ಲಿ ಬಾಂಸೆಪ ಸಂಘಟನೆ ವಿದ್ಯಾರ್ಥಿಗಳಪರ.ಮಹಿಳೆಯರಪರ ಸಾಮಜಿಕ ನ್ಯಾಯಕ್ಕಾಗಿ ಹಾಗೂ ಜೀವನದಲ್ಲಿ ನೊಂದು ಕಣ್ಣಿರು ಸುರಿಸುವ ಜನರಿಗೆ ಆತ್ಮಸ್ಥೈರ್ಯ ತುಂಬುವಂತ ಕೆಲಸ ಮಾಡುವ ಸಂಘಟನೆಯ ಕಾರ್ಯ ತುಂಬಾ ಶ್ಲಾಘನಿಯವಾದುದು ಎಂದರು.
ಮಾರುತಿ ಗಂಜಗಿರಿ ರವರು ಕಾರ್ಯಕ್ರಮದ ಉಪನ್ಯಾಸ ನೀಡಿದರು ಶಮ್ಸೋದ್ದಿನ್ ವೈಜನಾಥ ರವಿ ಮೌನೇಶ ಗಾರಂಪಳ್ಳಿ ಸುಭಾಷ ತಾಡಪಳ್ಳಿ ವಿಜಯ ಉಪಸ್ಥಿತರಿದ್ದರು ಗೋಪಾಲ ಗಾರಂಪಳ್ಳಿ ನಿರೂಪಿಸಿದರೆ ಮೋಹನ ಐನಾಪೂರ ವಂದಿಸಿದರು.