ಕಲಬುರಗಿ: ಮರದಿಂದ ಕೆಳಗೆ ಬಿದ್ದು ಖೈದಿ ಮೃತಪಟ್ಟಿರೋ ಘಟನೆ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಗುರುವಾರ ನಡೆದಿದೆ.
ಅಫಜಲಪುರ ತಾಲ್ಲೂಕಿನ ಚೌಡಾಪುರ ಗ್ರಾಮದ ನಿವಾಸಿ ಸಂಗಮೇಶ್ ಕುಂಬಾರ (25) ಮೃತ ಖೈದಿ.
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಜೈಲಿನಲ್ಲಿ ಖೈದಿಗಳು ಕ್ರಿಕೆಟ್ ಆಡುತ್ತಿದ್ದರು. ಕ್ರಿಕೆಟ್ ಆಟವಾಡುತ್ತಿದ್ದ ಸಂದರ್ಭದಲ್ಲಿ ಬಾಲ್ ಮರದ ಮೇಲೆ ಬಿದ್ದಿದೆ. ಈ ವೇಳೆ ಖೈದಿ ಸಂಗಮೇಶ್ ಮರದ ಮೇಲಿದ್ದ ಬಾಲ್ ತರಲು ಹೋಗಿದ್ದಾಗ ಏಕಾಏಕಿ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ. ಕೂಡಲೇ ಆತನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಖೈದಿ ಮೃತಪಟ್ಟಿದ್ದಾನೆ.
ಮೃತ ಖೈದಿಯು ಕಳೆದ 18 ತಿಂಗಳ ಹಿಂದೆ ಗಾಂಜಾ ಕೇಸ್ನಲ್ಲಿ ಸಂಗಮೇಶ್ ಜೈಲಿಗೆ ಹೋಗಿದ್ದ. ಘಟನೆ ಸಂಬಂಧ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.