ಕಲಬುರಗಿ: ಪ್ರತಿಯೊಬ್ಬರು ಪರೋಪಕಾರ ಮಾಡಬೇಕು. ದಾನ ಮಾಡುವುದರಿಂದ ಪುಣ್ಯ ಲಭಿಸುತ್ತದೆ. ರಕ್ತ ದಾನ ಮಾಡುವುದರಿಂದ ಒಂದು ಜೀವ ಉಳಿಸಬಹುದು ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಹೇಳಿದರು.
ಬ್ರಹ್ಮಪುರ ಉತ್ತರಾದಿ ಮಠ ರುಕ್ಮೀಣಿ ಪಾಂಡುರಂಗ ಮಂದಿರದಲ್ಲಿ ವಿಶ್ವ ಮಧ್ವಮಹಾಪರಿಷತ್ ಜಿಲ್ಲಾ ಘಟಕವು ಭಾನುವಾರ ಆಯೋಜಿಸಿದ್ದ ರಕ್ತ ದಾನ ಶಿಬಿರಕ್ಕೆ ಚಾಲನೆ ನೀಡಿದ ಶ್ರೀಗಳು. ರಕ್ತ ದಾನ ಮಾಡುವುದು ಪುಣ್ಯದ ಕಾರ್ಯ. ಸಮಾಜ ಸೇವೆ ಮಾಡುವುದು ಒಂದು ಭಗವಂತನ ಪೂಜೆ. ಪ್ರತಿಯೊಬ್ಬರೂ ತಮ್ಮ ತಮ್ಮ ಧರ್ಮವನ್ನು ಚನ್ನಾಗಿ ಅನುಷ್ಠಾನಗೊಳಿಸಬೇಕು, ಅನ್ಯ ಧಮಧವನ್ನು ಗೌರವಿಸಬೇಕು. ಭಗವಂತ ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ಇದನ್ನೆ ಸಾರಿದ್ದಾನೆ. ಎಲ್ಲ ಜೀವಿಗಳನ್ನು ಯಾರೂ ಪ್ರತಿಸಿತ್ತರೋ ಅವರು ಪರಮಾತ್ಮನಿಗೆ ಪ್ರಿಯರಾಗುತ್ತಾರೆ ಎಂಬ ಸಂದೇಶವನ್ನು ಗೀತೆ ಮೂಲಕ ಕೃಷ್ಣನು ಜಗತ್ತಿಗೆ ಸಾರಿದ್ದಾನೆ ಎಂದರು.
ರಕ್ತದಾನ ಶಿಬಿರ ಆಯೋಜಿಸುವ ಮೂಲಕ ಸಮಾಜ ಸೇವೆಗೆ ಮುಂದಾಗಿರುವ ವಿಶ್ವಮಧ್ವ ಮಹಾ ಪರಿಷತ್‍ನ ಕಾರ್ಯವನ್ನು ಶ್ರೀಗಳು ಶ್ಲಾಘಿಸಿದರು. ಎಲ್ಲ ಸಮಾಜದವರೊಂದಿಗೆÉ ಸೌಹಾರ್ಧತೆಯಿಂದ ಬಾಳಬೇಕು. ವಿಪ್ರರು ಇತರ ಸಮುದಾಯಗಳ ಕಷ್ಟದಲ್ಲೂ ಭಾಗಿಯಾಗಬೇಕು. ಸಮಾಜ ಸೇವೆ, ಬಡವರಿಗೆ ಸಹಕಾರ, ದುರ್ಬಲರ ಮೇಲೆ ಅನುಕಂಪ ತೋರುವುದೇ ನಿಜವಾದ ಪೂಜೆ ಎಂದು ಶ್ರೀಗಳು ಹೇಳಿದರು.
ಉತ್ತರದಿ ಮಠದ ವ್ಯವಸ್ಥಾಪಕ ಪಂ. ವಿನೋದಾಚಾರ್ಯ ಗಲಗಲಿ, ಪಂ.ಅಭಯಾಚಾರ್ಯ ಪೂಜಾರ, ಪಂ.ಡಾ.ಗುರುಮಧ್ವಾಚಾರ್ಯ ನವಲಿ, ಪಂ. ವಿಷ್ಣುದಾಸಾರ್ಚಾ ಖಜೂರಿ, ಪಂ. ಶ್ರೀನಿವಾಸಾಚಾರ್ಯ ಪದಕಿ, ಪಂ. ಹಣಮಂತಾಚಾರ್ಯ ಸರಡಗಿ, ಪಂ. ಗೋಪಾಲಾಚಾರ್ಯ ಅಕಮಂಚಿ, ಪಂ ಪ್ರಸನ್ನಾಚಾರ್ಯ ಜೋಶಿ, ಪಂ. ಗಿರೀಶಾಚಾರ್ಯ ಅವಧಾನಿ, ಪಂ. ಭೀಮಸೇನಾಚಾರ್ಯ, ಪಂ. ಗಿರೀಶಾಚಾರ್ಯ ಕೊಪ್ಪರ, ವಿಶ್ವ ಮಧ್ವ ಮಹಾಪರಿಷತ್ ಜಿಲ್ಲಾಧ್ಯಕ್ಷ ರಾಮಾಚಾರ್ಯ ಮೋಗರೆ,ಉತ್ತರಾದಿ ಮಠದ ಮಠಾಧಿಕಾರಿ ರಾಮಾಚಾರ್ಯ ಘಂಟಿ, ರವಿ ಲಾತೂರಕರ್, ಡಾ. ಗಿರೀಶ ಗಲಗಲಿ ಹಾಗೂ ವಿಶ್ವಮಧ್ವ ಮಹಾಪರಿಷತ್‍ನ ಸದಸ್ಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು.