ಆಳಂದ: ನಮ್ಮಲ್ಲಿರುವ ಸಂಕುಚಿತ ಮನೋಭಾವವನ್ನು ದೂರಗೊಳಿಸಿ ಮಾನವೀಯತೆಯನ್ನು ಅರಳಿಸಿ ಶಾಂತಿ ಸೌಹಾರ್ದತೆಯಿಂದ ಬದುಕಬೇಕು. ಇಂದಿನ ವಾಸ್ತವವನ್ನು ಅರಿತು ಧರ್ಮವನ್ನು ಮಿತಿಯಲ್ಲಿ ಆಚರಿಸಿದಾಗ ಮತ್ತು ಇನ್ನೊಂದು ಧರ್ಮವನ್ನು ಪ್ರೀತಿಸುವ ಗುಣವನ್ನು ಬೆಳೆಸಿಕೊಂಡಾಗ ಅಲ್ಲಿ ಶಾಂತಿ ಸೌಹಾರ್ದತೆ ಬೆಳೆಯಲು ಸಾಧ್ಯವಾಗುತ್ತದೆ ಎಂದು ಉಸ್ತುರಿ ದುತ್ತರಗಾಂವ ಮಠದ ಕೋರಣೇಶ್ವರ ಸ್ವಾಮೀಜಿ ನುಡಿದರು.
ಆಳಂದನ ಸೋಲಾಪುರ್ ರಸ್ತೆಯ ಸೆಂಟ್ ಮೇರಿ ಸ್ಕೂಲ್ನಲ್ಲಿ ಬುಧವಾರ ” ಕ್ರಿಸ್ಮಸ್ ಸೌಹಾರ್ದ ಕೂಟ ” ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ತಾಲ್ಲೂಕು ಸೂಫಿ- ಸಂತರ ನಾಡು, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲಿ ಎಂದು ಹಾರೈಸಿದರು.
ಫಾದರ್ ಡೆವೀಡ್ ವಿನಸೇಂಟ್,ಭಂತೇಜಿಅಮರ ಜ್ಯೋತಿ,ಓಂ ಶಾಂತಿಯ ದೀಪಾ ಅವರು ಪ್ರಾಸ್ತಾವಿಕ ಮಾತನಾಡಿದರು. ಪಾದರ್ ಬಾಪು, ಮುಖಂಡರ ರಮೇಶ್ ,ಪೂಜಾ ಲೋಹಾರ,ರಾಜು ಕಟ್ಟಿಮನಿ,ಸೇರಿದಂತೆ ಫಾದರ್, ಸಿಸ್ಟರ್,ಸೇರಿದಂತೆ ಶಾಲೆಯ ಮಕ್ಕಳು ಪೋಷಕರು ಮತ್ತಿತರರು ಪಾಲ್ಗೊಂಡಿದ್ದರು.ವಿಲಸಂಟ್ ನಿರೂಪಿಸಿದರು.ರೋಜಿನ್ ವಂದಿಸಿದರು,ನಂತರ ಮಕ್ಕಳಿಂದ ಕ್ರಿಸ್ಮಸ್ ಕುರಿತು ಸಾಂಸ್ಕೃತಿಕಕಾರ್ಯಕ್ರಮ ನಡೆಯಿತು.